Haliyala| ನಾಲ್ಕು ದಿನದಲ್ಲಿ 16 ಕಡೆ ಕಳ್ಳತನ ದಾಖಲಾಗಿದ್ದು ಎರಡು ಪ್ರಕರಣ!
Haliyala news/ಹಳಿಯಾಳ: ಕಳೆದ ನಾಲ್ಕು ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ (haliyala) ತಾಲೂಕಿನ ಮದ್ನಳ್ಳಿ, ಹುಣಸವಾಡ, ಅರ್ಲವಾಡ ಮತ್ತು ತೇರಗಾಂವ ಗ್ರಾಮಗಳಲ್ಲಿ ಸುಮಾರು 16 ಕಡೆಗಳಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆಗಳು ತಡವಾಗಿ ಬೆಳಕಿಗೆ ಬಂದಿದ್ದು ಸಧ್ಯ ಹಳಿಯಾಳ ಠಾಣೆಯಲ್ಲಿ ಕೇವಲ ಎರಡು ಪ್ರಕರಣ ಮಾತ್ರ ದಾಖಲಾಗಿವೆ.
ಸರಣಿ ಕಳ್ಳತನದಿಂದ ಗ್ರಾಮಸ್ಥರು ಭಯಪಡುವಂತೆ ಮಾಡಿದ್ದು ಈ ನಾಲ್ಕೂ ಗ್ರಾಮಗಳು ಒಂದೇ ಮಾರ್ಗದಲ್ಲಿ ಇದ್ದು ಕಳ್ಳರು ಈ ಗ್ರಾಮಗಳನ್ನೇ ಟಾರ್ಗೆಟ್ ಮಾಡಿ ನಾಲ್ಕು ದಿನದಿಂದ ನಿರಂತರ ಕಳ್ಳತನ ಮಾಡುತ್ತಿರುವುದು ಪೊಲೀಸರಿಗೂ ತಲೆನೋವಾಗಿದೆ.
ಮದ್ನಳ್ಳಿ ಗ್ರಾಮದಲ್ಲಿ 1.48 ಲಕ್ಷದ ಮೌಲ್ಯದ ಕಳವು!

ಮದ್ನಳ್ಳಿ ಗ್ರಾಮದ ನಿವಾಸಿ ಶಂಕ್ರಯ್ಯ ವಿರೂಪಾಕ್ಷಯ್ಯ ಹೀರೆಮಠ ಅವರು ನೀಡಿದ ದೂರಿನಂತೆ, ಯಾರೋ ಕಳ್ಳರು ಅವರ ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿ, ಬಿರುವಿನ ಬಿಗವನ್ನು ಒಡೆದು ಕಪಾಟಿನಲ್ಲಿ ಇಟ್ಟಿದ್ದ ರೂ.25 ಸಾವಿರ ನಗದು ಹಾಗೂ ಬಂಗಾರ–ಬೆಳ್ಳಿಯ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ.
ಕಳುವಾದ ವಸ್ತುಗಳಲ್ಲಿ ಬಂಗಾರದ ನೆಕ್ಲೆಸ್, ಎಳೆ ಸರ, ಜುಮಕಿ, ಉಂಗುರಗಳು, ಮೂಗು ಬಟ್ಟು ಸೇರಿದಂತೆ ಬೆಳ್ಳಿ ತಂಬಿಗೆ, ಕಾಲು ಚೈನ್, ಖಡ್ಗ ಹಾಗೂ ಚೈನ್ ಸೇರಿವೆ. ಕಳುವಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂ.1.48 ಲಕ್ಷವಾಗುತ್ತದೆ. ಕಳುವಾದ ವಸ್ತುಗಳಿಗಾಗಿ ಹುಡುಕಾಟ ನಡೆಸಿ ಸಿಗದ ಕಾರಣ, ಮನೆಯವರೊಂದಿಗೆ ಚರ್ಚಿಸಿ ತಡವಾಗಿ ಠಾಣೆಗೆ ದೂರು ದಾಖಲಿಸಿದ್ದಾರೆ.
Haliyala|ಮಕ್ಕಳಿಂದ ಕಾರು ತೊಳೆಸಿದ ಶಿಕ್ಷಕ |ಕಾರಣ ಕೇಳಿ ನೋಟಿಸ್
ಅರ್ಲವಾಡ ಗ್ರಾಮದ ನಿವಾಸಿ ಸಂತೋಷ ಏಕನಾಥ ಕೊಚಾರಿ ಅವರು ನೀಡಿದ ದೂರಿನಂತೆ, ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ, ಬಿರುವಿನಲ್ಲಿದ್ದ ಒಂದು ಬಂಗಾರದ ಉಂಗುರ, ಆರು ಬಂಗಾರದ ಗಣಪತಿ ಪೇಟಿಗಳು, ಒಂದು ಬೆಳ್ಳಿಯ ಶೆಲ್ಲಾ, ರೂ.10 ಸಾವಿರ ನಗದು ಹಾಗೂ ದೇವರ ಕೋಣೆಯಲ್ಲಿದ್ದ ಬೆಳ್ಳಿ ಗಣಪತಿ ಮತ್ತು ಹಾವಿನ ಮೂರ್ತಿಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಕಳುವಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂ.56 ಸಾವಿರವಾಗಿದ್ದು,ತಡವಾಗಿ ದೂರು ದಾಖಲಿಸಿದ್ದಾರೆ.
ಕಳ್ಳರಿಗೆ ಬೀಗ ಹಾಕಿದ ಮನೆಗಳೇ ಟಾರ್ಗೆಟ್
ಹಳಿಯಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಲ್ಲಿ ಕಳ್ಳರು ಮುಖ್ಯವಾಗಿ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡಿರುವುದು ಕಂಡುಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ ಬೀಗ ಮುರಿದು ಒಳನುಗ್ಗಿ ಕಳ್ಳತನ ನಡೆಸಿರುವ ಘಟನೆಗಳು ಹೆಚ್ಚಾಗಿ ವರದಿಯಾಗಿವೆ. ಹೊರಗೆ ತೆರಳಿದ್ದ ಮನೆಗಳು, ಒಂಟಿ ನಿವಾಸಗಳು ಹಾಗೂ ಗ್ರಾಮ ಅಂಚಿನ ಪ್ರದೇಶಗಳ ಮನೆಗಳು ಕಳ್ಳರ ಟಾರ್ಗೆಟ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬೆಳವಣಿಗೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
Haliyala news| ಪೊಲೀಸ್ ಠಾಣೆ ಎದುರಿಗಿರುವ ಗಣಪತಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು |ವಿಡಿಯೋ ನೋಡಿ
ಆದ್ರೆ ಹಲವುಕಡೆ ಕಳ್ಳತನವಾದರೂ ಗ್ರಾಮದಲ್ಲಿ ಕಳ್ಳತನವಾದ ಮನೆಯ ಮಾಲೀಕರು ದೂರು ದಾಖಲಿಸಿಲ್ಲ.







