Haliyala| ಸಮಯಕ್ಕೆ ಸರಿಯಾಗಿ ಬಾರದ ಅಂಬುಲೆನ್ಸ್ |ಮಾಜಿ ಯೋಧ ಸಾವು
Haliyala /ಕಾರವಾರ :- ಸೂಕ್ತ ಸಮಯದಲ್ಲಿ 108 ಅಂಬುಲೆನ್ಸ್ ಸಿಗದೇ ಸಿಕ್ಕ ಅಂಬುಲೆನ್ಸ್ ನಲ್ಲಿ ಆಕ್ಸಿಜನ್ ಸಹ ಇರದೇ ನಿವೃತ್ತ ಯೋಧ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಹಳಿಯಾಳ (haliyala) ನಗರದಲ್ಲಿ ನ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ನಡೆದಿದೆ.
ನಿವೃತ್ತ ಯೋಧ ಬಸ್ಟ್ಯಾಂನ್ ಸಂತಾನ ಬ್ರಿಗ್ಯಾಂಜಾ ಸಾವು ಕಂಡವರಾಗಿದ್ದು ಇಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Haliyala| ನಾಲ್ಕು ದಿನದಲ್ಲಿ 16 ಕಡೆ ಕಳ್ಳತನ ದಾಖಲಾಗಿದ್ದು ಎರಡು ಪ್ರಕರಣ!
.ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕರೆದೊಯ್ಯಲು ವೈದ್ಯರು ಶಿಫಾರಸ್ಸು ಮಾಡಿದ್ದರು.ಈ ಹಿನ್ನಲೆಯಲ್ಲಿ 108 ಗೆ ಕರೆಮಾಡಿದರೂ ನಾಲ್ಕು ತಾಸುಗಳಾದರೂ ಅಂಬುಲೆನ್ಸ್ ಬರಲಿಲ್ಲ. ತಡವಾಗಿ ಬಂದ ಅಂಬುಲೆನ್ಸ್ ನಲ್ಲಿ ಆಕ್ಸಿಜನ್ ಕಾಲಿಯಾಗಿತ್ತು.
Kumta: ಜಮೀನು ವಿವಾದ ಹೆಗಡೆಯನ್ನು ಕೊಂದ ಗೌಡ !
ಇದಲ್ಲದೇ ಸಿಬ್ಬಂದಿ ಸಹ ಇರಲಿಲ್ಲ. ಇನ್ನು ಆಕ್ಸಿಜನ್ ಇಲ್ಲದೇ ಉಸಿರಾಟ ಮಾಡಲಾಗದೇ ನರಳಾಡಿದ ನಿವೃತ್ತಯೋಧ ಸಾವು ಕಂಡಿದ್ದಾರೆ.ಹಳಿಯಾಳ ಮತ್ತು ದಾಂಡೇಲಿಯಲ್ಲಿ ಸೂಕ್ತ ಅಂಬುಲೆನ್ಸ್ ಇಲ್ಲದೇ ರೋಗಿಗಳ ಪರದಾಟ ನಡೆಸುತಿದ್ದಾರೆ.ಕುದ್ದು ತಾಲೂಕು ವೈದ್ಯಾಧಿಕಾರಿಗಳು ಸಹ 108 ನವರು ಸೂಕ್ತ ಸ್ಪಂದನೆ ಮಾಡದ ಬಗ್ಗೆ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ 108 ಅಂಬುಲೆನ್ಸ್ ಸಮಸ್ಯೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ.







