Haliyala | KSRTC ಬಸ್ ಅಪಘಾತ ಬಸ್ ನಲ್ಲಿ ಸಿಲುಕಿಕೊಂಡ ಶಾಲಾ ವಿದ್ಯಾರ್ಥಿ |20 ಜನರಿಗೆ ಗಾಯ
ವಿಡಿಯೋ ನೋಡಿ:-
Haliyala news :- ಅಪಘಾತ ತಪ್ಪಿಸಲು ಓವರ್ ಟೇಕ್ ಮಾಡಿದ ಕೆ.ಎಸ್.ಆರ್.ಟಿಸಿ ಬಸ್ ಚಾಲನಕ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿಯೋರ್ವ ಬಸ್ ನ ಸೀಟಿನಲ್ಲೇ ಸಿಲುಕಿಕೊಂಡಿದ್ದಾನೆ.

ಈ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ (haliyala) ತಾಲೂಕಿನ ಬಾಣಸಗೇರಿ ಗ್ರಾಮದಲ್ಲಿ ನಡೆದಿದೆ.ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 40 ಪ್ರಯಾಣಿಕರಲ್ಲಿ 8 ವಿದ್ಯಾರ್ಥಿನಿಯರು, 2 ಮಹಿಳೆಯರು, 2 ಶಾಲಾ ಮಕ್ಕಳು ಸೇರಿ ಒಟ್ಟು 20 ಜನರಿಗೆ ಗಾಯವಾಗಿದೆ.
Haliyala Mid-Day Meal Scam|ಹಳಿಯಾಳ ಶಾಲೆಗೆ ಕಳಪೆ ಆಹಾರ ಪೂರೈಕೆ |ಸಿಡಿದೆದ್ದ ಪೋಷಕರು
ಬಸ್ ನಲ್ಲಿ ಸಿಲುಕಿಕೊಂಡ ಬಾಲಕ ಜೋಗನಕೊಪ್ಪ ಗ್ರಾಮದ ಸೀಮಂತ್ ಮಹಾಂತೇಶ ಕಮ್ಮಾರ(10) ಹಳಿಯಾಳದ ನಂಬರ್ ಒನ್ ಶಾಲೆಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.ಹಳಿಯಾಳ ಡಿಪೋದ ಕೆ.ಎಸ್.ಆರ್.ಟಿ.ಸಿ ಬಸ್ ಹುಬ್ಬಳಿಯ ಕಲಘಟಗಿಯಿಂದ ಹಳಿಯಾಳಕ್ಕೆ ತೆರಳುತ್ತಿದ್ದ ವೇಳೆ ಓವರ್ ಟೇಕ್ ಮಾಡುವಾಗ ಎದುರಿನಿಂದ ಬಂದ ಕಾರಿನ ಅಪಘಾತ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದ ಮರಕ್ಕೆ ಅಪಘಾತ ಪಡಿಸಿದ್ದಾನೆ.
Haliyala|ರಾಜ್ಯದಲ್ಲಿಬಾಂಗ್ಲಾದೇಶದವರನ್ನು ಇರಿಸೋದು ಶುದ್ಧ ತಪ್ಪು-ಹೊರಟ್ಟಿ.
ಅಪಘಾತದಲ್ಲಿ ಬಸ್ ಚಾಲಕನಿಗೆ ಗಂಭೀರ ಗಾಯವಾದರೇ ಬಸ್ನ ಢಿಕ್ಕಿ ಹೊಡೆದ ಪರಿಣಾಮ ಮುಂಭಾಗ ಒಳ ಹೋಗಿದ್ದು, ಎಂಜಿನ್ ಭಾಗ ಹಾಗೂ ಮುಂದಿನ ಸೀಟ್ ನಡುವೆ ಶಾಲಾ ಬಾಲಕನ ಕಾಲುಗಳು ಸಿಲುಕಿಕೊಂಡಿದ್ದು ,ಕಟ್ಟರ್ ಸಹಾಯದಿಂದ ಬಸ್ನ ಸೀಡಿನ ಪಾರ್ಟ್ಗಳನ್ನು ಕತ್ತರಿಸಿ ಬಾಲಕನ ಕಾಲುಗಳನ್ನು ಹೊರತೆಗೆಯಲಾಯಿತು.ಅದೃಷ್ಟವಶಾತ್ ಹೆಚ್ಚಿನ ತೊಂದರೆಯಾಗದೇ ಬಾಲಕ ಪಾರಾಗಿದ್ದಾನೆ.ಗಾಯಾಳುಗಳನ್ನು ಹಳಿಯಾಳದ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







