Honnavar|ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಬೊಲೆರೋ ವಾಹನ ಸಂಪೂರ್ಣ ಬೆಂಕಿಗಾಹುತಿ.
Honnavar news:- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar) ತಾಲೂಕಿನ ಸಾಲ್ಕೋಡ್ ಗ್ರಾಮದ ಜನತಾಕಾಲೋನಿ ರಸ್ತೆಯಲ್ಲಿ ಒಣಹುಲ್ಲು ಸಾಗಿಸುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬೆಂಕಿ ಹತ್ತಿಕೊಂಡುಸುಟ್ಟು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Honnavar| ಶಾಲಾ ಪ್ರವಾಸಿ ಬಸ್ ಪಲ್ಟಿ |ವಿದ್ಯಾರ್ಥಿ ಸಾವು 26 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಗಾಯ
ಭಾನುವಾರ ಈ ಘಟನೆ ನಡೆದಿದ್ದು,ವಿದ್ಯುತ್ ಕಂಬಕ್ಕೆ ಬುಲೆರೋ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಲೈನ್ ಮೂಲಕ ವಿದ್ಯುತ್ ಕಿಡಿ ವಾಹನದ ಮೇಲೆ ಬಿದ್ದ ಪರಿಣಾಮ ಕ್ಷಣಾರ್ಧದಲ್ಲಿ ಬೊಲೆರೋ ವಾಹನ ಸುಟ್ಟು ಹೋಗಿದೆ.
Kumta| ಕುಂಬಾರ ಹುಳು ಕಡಿದು ಕಾರ್ಮಿಕ ಸಾವು
ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದು ಪಕ್ಕದ ಅರಣ್ಯ ಪ್ರದೇಶಕ್ಕೆ ಆವರಿಸದಂತೆ ತಡೆದಿದ್ದಾರೆ.
ವಾಹನವು ಸಾಗರದಿಂದ ಹುಲ್ಲು ತುಂಬಿಕೊಂಡು ಬಂದಿರುವ ಬಗ್ಗೆ ಮಾಹಿತಿ ಇದ್ದು, ಚಾಲಕ ಹಾಗೂ ವಾಹನದಲ್ಲಿದ್ದ ಮತ್ತೊರ್ವ ಪ್ರಾಣಾಪಯದಿಂದ ಪಾರಾಗಿದ್ದಾರೆ. ಮೊಬೈಲ್, ವಾಹನದ ದಾಖಲೆ ಪತ್ರ, ಎಲ್ಲವು ಸುಟ್ಟಿದ್ದು, ಅಂದಾಜು ಮೂರುವರೆ ಲಕ್ಕಕ್ಕೂ ಅಧಿಕ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಘಟನೆ ಸಂಬಂಧ ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






