Jothishi case| ಸುಚಿತ್ರಾ ಹಿಂದಿನ ನೋವಿನ ಇನ್ ಸೈಡ್ ಸ್ಟೋರಿ|ಸಿದ್ದಾಪುರ ಪೊಲೀಸರಿಗೆ ತಲೆದಂಡ?

Jothishi Kamalakar Bhat, highlighting alleged police negligence, family disputes, and the Siddapur knife attack that led to a tragic death
“Suchitra and Kamalakar Bhat Jothishi case inside story related to Siddapur knife attack and police negligence investigation in Karnataka” “Suchitra and Kamalakar Bhat Jothishi case inside story related to Siddapur knife attack and police negligence investigation in Karnataka”
“Suchitra and Kamalakar Bhat Jothishi case inside story related to Siddapur knife attack and police negligence investigation in Karnataka”

Jothishi case| ಸುಚಿತ್ರಾ ಹಿಂದಿನ ನೋವಿನ ಇನ್ ಸೈಡ್ ಸ್ಟೋರಿ|ಸಿದ್ದಾಪುರ ಪೊಲೀಸರಿಗೆ ತಲೆದಂಡ?

ಕಾರವಾರ ( 6February 2026) :- ಸಿದ್ದಾಪುರದ (siddapur)ಚಾಕು ಇರಿತ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಲೇ ಇದೆ ಆರೋಪಿಗಳು ಈಗಾಗಲೇ ಜೈಲು ಸೇರಿದ್ದಾರೆ. ಮಾಧ್ಯಮಗಳಲ್ಲಿ ಆಡಿಯೋ ತುಣುಕು,ರೀಲ್ಸ್ ತುಣಕು ಹೀಗೆ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಇದೀಗ ರಾಜ್ಯದಲ್ಲಿ ಸದ್ದು ಮಾಡುತಿದ್ದಾರೆ.

ಆದರೇ ಈ ಹತ್ಯೆ ಆಗುವ ಮುಂಚೆ ಪೊಲೀಸರು ಎಚ್ಚರಿಕೆ ವಹಿಸಿದ್ದರೇ ,ನಿರ್ಲಕ್ಷ ಮಾಡದಿದ್ದರೇ ಒಂದು ಜೀವ ಬಲಿಯಾಗುವ ಪ್ರಮೇಯವೇ ಬರುತ್ತಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಅರೇ ಯಾವಾಗಲೂ ಪೊಲೀಸರನ್ನೇ ಕೊನೆಗೆ ದೂಷಣೆ ಮಾಡುತ್ತೀರ ಎಂದು ಹೇಳಬಹುದು. ಆದರೇ ಇದು ದೂಷಣೆ ಅಲ್ಲ, ಒಂದು ನಿರ್ಲಕ್ಷ ಹತ್ಯೆಗೆ ಕಾರಣವಾಗುತ್ತೆ ಎನ್ನುವುದಕ್ಕೆ ಸುಚಿತ್ರಾ ಘಟನೆ ಸಾಕ್ಷಿ.

Advertisement

Siddapur|ಜ್ಯೋತಿಷಿ ಕಮಲಾಕರ್ ಭಟ್ ಸೇರಿ 4 ಜನ ಜೈಲಿಗೆ |ಮೂರುಜನ ಪೊಲೀಸರ ವಶದಲ್ಲಿ.

ಹೌದು ಕಮಲಾಕರ್ ಭಟ್ , ಸುಚಿತ್ರಾ ಅಕ್ರಮ ಸಂಬಂಧಗಳ ಬಗ್ಗೆ ಒಂದಿಷ್ಟು ಅಡಿಯೊ,ಫೊಟೊಗಳು ಸುದ್ದಿಯದವು ಅದರ ಜೊತೆಗೆ ಶಿವಮೊಗ್ಗ  ದಲ್ಲಿ ಸುಚಿತ್ರಾ ಮಗಳು ಸಹ ಹೇಳಿಕೆ ನೀಡಿದ್ದು ಘಟನೆ ನಡೆಯುವ ಮುಂಚೆಯೆ ನಾನು ತಾಯಿಯ ಸ್ಕೆಚ್ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದೆ ಅದರೆ ಕ್ರಮ ಜರುಗಲಿಲ್ಲ,ಅದು ಆಗಿದ್ದರೇ ನನ್ನ ದೊಡ್ಡಪ್ಪನ ಜೀವ ಉಳಿಯುತಿತ್ತು ಎಂದು ಹೆಳಿದ್ದಳು.

ಗಂಡ ಹೆಂಡಿ ಜಗಳ ದೂರು ನೀಡಿದ್ರೂ ಕ್ರಮ ತೆಗೆದುಕೊಳ್ಳದ ಪೊಲೀಸರು.

Jothishi kamlakar bhat nithy puje case siddapur
ಸುಚಿತ್ರಾ ಹಾಗು ಮಹೇಶ್ ನಾಯ್ಕ ಚಿತ್ರ

ಇನ್ನು ಸುಚಿತ್ರ ಹಾಗೂ ಮಹೇಶ್ ನಾಯ್ಕ ನಡುವೆ ಕಳೆದ ಮೂರು ವರ್ಷದಿಂದ ಕಲಹ ನಡೆಯುತ್ತಲೇ ಇತ್ತು. ಮಹೇಶ್ ನಾಯ್ಕ ಕುಟುಂಬ ಸುಚಿತ್ರಾ ಮೇಲೆ ಮುಗಿ ಬೀಳುತ್ತಲೇ ಇತ್ತು.

ಇನ್ನು ಮಹೇಶ್ ನಾಯ್ಕ ಬೆಂಗಳೂರಿನಲ್ಲಿ ಹೋಟಲ್ ಒಂದರಲ್ಲಿ ಕಾರ್ಯನಿರ್ವಹಿಸುತಿದ್ದ ಮದ್ಯ ವ್ಯಸನಿಯಾಗಿದ್ದ ಮಹೇಶ್ ನಾಯ್ಕ ಕುಟುಂಬ ನಿರ್ವಹಣೆ ಸರಿಯಾಗಿ ಮಾಡುತ್ತಿರಲಿಲ್ಲ. ಇದರಿಂದಾಗಿ ಗಂಡ ಹೆಂಡತಿ ನಡುವೆ ಜಗಳ ದೊಡ್ಡ ಮಟ್ಟಕ್ಕೆ ಹೋಗಿದ್ದು ಸುಚಿತ್ರಾಗೆ ಮಾರಣಾಂತಿಕ ಹಲ್ಲೆ ಮಾಡಿದ್ದನು ‌ಈ ಕುರಿತು ಸುಚಿತ್ರಾ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದಳು . ಇನ್ನು ಆಗಿನ ಸಿದ್ದಾಪುರ ಠಾಣೆ ಪೊಲೀಸರು ಕ್ರಮ ತೆಗೆದುಕೊಳ್ಳುವ ಬದಲು ರಾಜಿ ಸಂಧಾನ ಮಾಡಿ ಕಳುಹಿಸಿದ್ದರು.

Siddapur marder case Suchithra photos
ಅನಾರೋಗ್ಯ ದಿಂದ ಆಸ್ಪತ್ರೆಯಲ್ಲಿ ಇರುವ ಸುಚಿತ್ರ ಚಿತ್ರ.

ಇನ್ನು ತನ್ನ ಜೀವನ ತಾನು ನೊಡಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಸುಚಿತ್ರಾ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದಳು. ಆಗ ಪರಿಚಯ ಆಗಿದ್ದೆ ಇದೇ ಸಿದ್ದಾಪುರ ಮೂಲದ ಕಮಲಾಕರ್ ಭಟ್. ಕಮಲಾಕರ್ ಭಟ್ ಬೆಂಗಳೂರಿನಲ್ಲಿ ಕಚೇರಿ ತೆರೆದಿದ್ದ. ಈಕೆಯು ಸಿದ್ದಾಪುರದವಳಾಗಿದ್ದರಿಂದ ಕೆಲಸ ಸಲೀಸಾಗಿ ಸಿಕ್ಕಿತು. ಇನ್ನು ಆಕೆ ಕೆಲಸ ಸೇರುತಿದ್ದಂತೆ ಮಹೇಶ್ ನಾಯ್ಕ ಕಿರುಕುಳ ಹೆಚ್ಚಾಗಿತ್ತು. ಇನ್ನು ಊರಿಗೆ ಬಂದಾಗಲೆಲ್ಲಾ ಸುಚಿತ್ರಾಗೆ ಮಹೇಶ್ ನಾಯ್ಕ ಕುಟುಂಬದ ಕಿರುಕುಳ ಹೆಚ್ಚಾಗುತಿತ್ತು.

Siddapur|ಸಿದ್ದಾಪುರದಲ್ಲಿ ಕಾಲು ಮುರಿದು ಬಿದ್ದ ಕಾಡುಕೋಣ| Uttara Kannada

ಅಗಾಗ ಹಲ್ಲೆ ಬೆದರಿಕೆ ಠಾಣೆಗೆ ಹೋಗುವುದು ಮಾಮೂಲಾಗಿತ್ತು. ಆದರೆ ಇದ್ಯಾವುದೂ ಠಾಣೆಯಲ್ಲಿ ಪ್ರಕರಣ ದಾಖಲಾಗಲಿಲ್ಲ. ಇನ್ನು ಮಹೇಶ್ ಕುಟುಂಬದ ಭಯದಲ್ಲೆ ಜೀವನ ಸಾಗಿಸುತಿದ್ದ ಸುಚಿತ್ರಾ ಅನಾರೋಗ್ಯ ಹೊಂದಿದಾಗಲೂ ಒಬ್ಬಂಟಿಯಾಗಿ ಇರುವಂತೆ ಮಾಡಿತ್ತು.ಇದು ಅಕೆಯನ್ನು ಮತ್ತೊಂದು ದಾರಿ ಹುಡುಕಿಕೊಳ್ಳುವಂತೆ ಮಾಡಿತು.

ಇನ್ನು ಕಮಲಾಕರ್ ಭಟ್ ಗೆ ಕೋವಿಡ್ ಸಮಯದಲ್ಲಿ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಹಸಿವು ಅನ್ನವನ್ನು ಹುಡುಕುವಂತೆ ಕಮಲಾಕರ್ ಭಟ್ ಗೆ ಸಲೀಸಾಗಿ ಸಿಕ್ಕಿದ್ದೇ ಸುಚಿತ್ರಾ . ಸುಚಿತ್ರಾ ಆರ್ಥಿಕ ಹಾಗೂ ಕುಟುಂಬದ ಪರಿಸ್ಥಿತಿ ಅರಿತಿದ್ದ ಕಮಲಾಕರ್ ಭಟ್ ತನ್ನ ಇಷ್ಟಾರ್ಥ ಸಿದ್ದಿಗೆ ಸಲೀಸಾಗಿ ಬಳಸಿಕೊಂಡ.

Siddapur murder case suchitra Instagram status
Instagram ಸ್ಟೆಟಸ್ ನಲ್ಲಿ ಸುಚಿತ್ರಾ ಹಾಕಿಕೊಂಡ post

ಆಕೆಯೂ ತನಗೊಂದು ಆಶ್ರಯ ಶಕ್ತಿಗಾಗಿ ಕಾಯುತಿದ್ದರಿಂದ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗಿತ್ತು.

ಇನ್ನು ಕಮಲಾಕರ್ ಭಟ್ ಬೆಂಗಳೂರಿನಲ್ಲಿ ತನ್ನ ಇಮೇಜ್ ಗೆ ಧಕ್ಕೆ ಬರಬಹುದು ಎಂಬ ಕಾರಣಕ್ಕೆ ಶಿವಮೊಗ್ಗ ದಲ್ಲಿ ಹೊಸದಾಗಿ ಪ್ರಾರಂಭಿಸಿದ್ದ ಆಶ್ರಮಕ್ಕೆ ಈಕೆಯನ್ನು ಶಿಫ್ಟ್ ಮಾಡಿದ್ದ.

ಆಕೆಯೂ ತನ್ನ ಎರಡು ಮಕ್ಕಳೊಂದಿಗೆ ಶಿವಮೊಗ್ಗ ದಲ್ಲಿ ಕಮಲಾಕರ್ ಭಟ್ ಮಾಡಿಕೊಟ್ಟ ಬಾಡಿಗೆ ಮನೆ ಸೇರಿದಳು. ವಾರಕ್ಕೊಮ್ಮೆ ಶಿವಮೊಗ್ಗಕ್ಕೆ ಬರುತಿದ್ದ ಕಮಲಾಕರ್ ಭಟ್ ಸುಚಿತ್ರಾಗೆ ಒಂದಂಕಿ ಇಂದ್ರಲೋಕ ತೋರಿಸಿದ್ದನು.

ಇನ್ನು ಶಿವಮೊಗ್ಗ ಕ್ಕೆ ಬಂದಾಗಲೆಲ್ಲಾ ಇಂದ್ರಪ್ರಸ್ತ ನೋಡುತಿದ್ದ ಕಮಲಾಕರ್ ,ಇಂದ್ರಪ್ರಸ್ತ ತೋರಿಸಿದ ಸುಚಿತ್ರಾ ತನಗಾಗಿ ಕಮಲಾಕರ್ ಭಟ್ ನಿಂದ ಹಲವು ವರ ಪಡೆದಳು. ಹಣ ,ವಾಹನ ಎಲ್ಲಾ ಸಲೀಸಾಗಿ ಸಿಗತೊಡಗಿತು. ಆದರೇ ಎಲ್ಲಿ ಕೋಣೆ ವಿಷಯ 17ವರ್ಷದ ಮಗಳಿಗೆ ತಿಳಿಯಿತೋ ಮಗಳಿಗೂ ತಾಯಿ ಮೇಲೆ ವೈಮನಸ್ಸು ಮೂಡುವಂತೆ ಮಾಡಿತು. ಇನ್ನು ತಂದೆಯೊಂದಿಗೆ ಸಂಪರ್ಕ ಇದ್ದ ಮಗಳು ತಂದೆ ಹಾಗೂ ಕುಟುಂಬಕ್ಕೆ ಬೆಡ್ ರೂಮ್ ರಹಸ್ಯದ ವಿಷಯ ತಿಳಿಸಿದ್ದಳು.

Karwar/siddapur murder case
ಪ್ರಕರಣ ನಡೆದ ಸ್ಥಳ ಹಾಗೂ ಜಕುಂ ಗೊಂಡ ಜ್ಯೋತಿಷಿ ಕಮಲಾಕರ್ ಭಟ್ ಕಾರು

ಇನ್ನು ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದ ಮಹೇಶ್ ನಾಯ್ಕ ಸುಚಿತ್ರಾಗೆ ಪದೇ ಪದೇ ಹೆದರಿಸುತಿದ್ದ. ಕೊನೆಗೆ ಮಗಳೂ ಶಿವಮೊಗ್ಗದಿಂದ ಸಿದ್ದಾಪುರಕ್ಕೆ ಓಡಿ ಬಂದಳೋ ಸಹನೆ ಕಟ್ಟೆ ಒಡೆದುಕೊಂಡಿದ್ದ ಸುಚಿತ್ರಾ ಕಮಲಾಕರ್ ಭಟ್ ಗೆ ಹೇಳಿ ಆತನ ಜೊತೆ ಒಂದಿಷ್ಟು ಹುಡುಗರನ್ನ ಕರೆದುಕೊಂಡು ಮಗಳನ್ನ ಕರೆದೊಯ್ಯಲು ಸಿದ್ದಾಪುರಕ್ಕೆ ಬಂದಿದ್ದಳು.

ಮಹೇಶ್ ಕುಟುಂಬದವರು ತನಗೆ ಏನಾದರೂ ಮತ್ತೆ ಮಾಡಿಯಾರು ಎನ್ನುವ ಭಯ ಕೊನೆಗೆ ವಸಂತ್ ನಾಯ್ಕ ಹತ್ಯೆಯಲ್ಲಿ ಅಂತ್ಯವಾಗಿದೆ.

ಇನ್ನು ಈ ಘಟನೆ ನೋಡುವುದಾದರೆ ಸುಚಿತ್ರಾ ಮೇಲೆ ಗಂಡ ಮಹೇಶ್ ನಾಯ್ಕ ಹಲ್ಲೆ ಮಾಡಿದಾಗಲೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ, ಇನ್ನು ಸುಚಿತ್ರಾ ಮಹೇಶ್ ಗೆ ಸ್ಕೆಚ್ ಹಾಕಿದಾಗ ಕುದ್ದು ಮಗಳೇ ದೂರು ನೀಡಿದಾಗ ನಿರ್ಲಕ್ಷ ಮಾಡಲಾಯಿತು. ಇದರ ಪ್ರತಿಫಲ ಇದೀಗ ವಸಂತ್ ನಾಯ್ಕ ಸಾವು ಕಂಡಿದ್ದಾನೆ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಸುಚಿತ್ರಾ ಪತಿ ಮಹೇಶ್ ನಾಯ್ಕ ಹೇಳಿಕೆ ಏನು?

ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಚಿತ್ರ ಪತಿ ಮಹೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಕೊಲೆ ಮಾಡಲು ಬಂದಿದ್ದು ನನ್ನಲ್ಲ ಟಾರ್ಗೆಟ್ ನನ್ನ ಮಗಳು ಎಂದು ಹೇಳಿರುವ  ಮಹೇಶ್ ,ಅವರು ಬಂದವರೇ ನನ್ನ ಮಗಳನ್ನು ಕೇಳಿದರು,ನನ್ನ ಬಳಿ ಆಕೆಯನ್ನ ಕಳುಹಿಸಿಕೊಡಿ ಎಂದು ಕೇಳಿದರು.ನಾನು ನಿನ್ನನ್ನು ಸಾಯಿಸಿಯಾದರೂ ಮಗಳನ್ನು ಕರೆದುಕೊಂಡು ಹೋಗುತ್ತೇನೆ ಎಂದಿದ್ದಳು.

ಆಗ ನಾನು ನನ್ನ ಮಗಳನ್ನು ಒಂದು ರೂಮಲ್ಲಿ ಕೂಡಿಹಾಕಿ ರಕ್ಷಣೆ ಮಾಡಿದೆ,

ಆಗ ಅವರು ಕಾರಿನಲ್ಲಿದ್ದ ಚಾಕುವಿನ ನಾಲ್ಕು ಜನರು ತಂದರು,ಅಷ್ಟರಲ್ಲೇ ನಮ್ಮಣ್ಣ ಬಂದಾಗ ಅವನ ಎದೆಗೆ ಚಾಕುವಿನಿಂದ ಚುಚ್ಚಿದ್ರು.ಅವರು ಫ್ರೀ ಪ್ಲಾನ್ ಮಾಡಿಕೊಂಡೆ ಬಂದಿದ್ದಾರೆ.

ಅವರು ಚಾಕುಗಳು ತಂದಿದ್ದನ್ನ ನೋಡಿದರೆ ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ ಎಂದು ಅನಿಸುತ್ತದೆ,ನನ್ನ ಪತ್ನಿ ಮಾಡುತ್ತಿದ್ದ ಆಟಗಳನ್ನು ನೋಡಲು ಆಗದೆ ನನ್ನ ಮಗಳು ನನ್ನ ಬಳಿಗೆ ಬಂದಿದ್ದಾಳೆ

ನಾನು ಏನು ಮಾಡುತ್ತಿರುತ್ತೇನೆ ಎಂಬುದು ನನ್ನ ಮಗಳಿಂದ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೀಗೆ ಮಾಡಿದ್ದಾಳೆ.

ಹಾಗಾಗಿ ನನ್ನ ಮಗಳಿಗೆ ಹೊಡೆಯಲು ಬಂದಿದ್ದರು.ಸ್ವಂತ ಮಗಳು ಹಾಗೂ ಗಂಡನನ್ನೆ ಸಾಯಿಸಲು ಬಂದಿದ್ದಾರೆ ಎಂದರೆ ಏನು ಅರ್ಥ,ಸ್ವಾಮೀಜಿ ಅವಳಿಗೆ ದುಡ್ಡು ಕೊಡುತ್ತಿದ್ದ ಹಾಗಾಗಿ ಈ ರೀತಿ ಮಾಡುತ್ತಿದ್ದಾಳೆ.

ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಅವಳ ಆಟಗಳನ್ನು ನೋಡಲು ಆಗುತ್ತಿರಲಿಲ್ಲ ,ಟೇಬಲ್ ಮೇಲೆ ದುಡ್ಡನ್ನ ಇಟ್ಟುಕೊಂಡು ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದಳು.ಅರ್ಧ ಚಡ್ಡಿ ಹಾಕಿಕೊಂಡು ವಿಡಿಯೋ ಮಾಡುತ್ತಿದ್ದನ್ನು ನೋಡಲು ಆಗುತ್ತಿರಲಿಲ್ಲ

ಬೆಳಗ್ಗೆ ಆಡಿಯೋ ಕೇಳಿದ್ದೇನೆ ನೋಡಿ ಈ ರೀತಿ ಮಾತನಾಡುತ್ತಿದ್ದಾಳೆ,ಇಂಥವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಅಮಾಯಕ ನಮ್ಮ ಅಣ್ಣನನ್ನು ಸಾಯಿಸಿದ್ದಾರೆ,ಜೀವಾವಧಿ ಶಿಕ್ಷೆ ಆಗಲೇಬೇಕು ಅವರು ಹೊರಗೆ ಬರಲೇಬಾರದು,ಹೆಂಡತಿ ಹಾಗೂ ಕಮಲಾಕರ್ ಭಟ್ ಗೆ ಕಠಿಣವಾದ ಶಿಕ್ಷೆ ಆಗಲೇಬೇಕು,ಅವರ ಬಳಿ ದುಡ್ಡಿದೆ ಹಾಗಾಗಿ ಅವರು ಹೊರಗೆ ಬರಬಾರದು ಎಂದಿದ್ದಾರೆ.

ಸಿದ್ದಾಪುರ ಪೊಲೀಸರ ಮೇಲೆ ಎಸ್.ಪಿ ಕ್ರಮ.

ಜ್ಯೋತಿಷಿ ಕಮಲಾಕರ ಭಟ್ ಗ್ಯಾಂಗದಿಂದ ಕೊಲೆ ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸರ ವೈಫಲ್ಯದ ಬಗ್ಗೆ ಸ್ಥಳಿಯರು ಆರೋಪ ಮಾಡಿದ್ದಾರೆ.

ಇದರ ಬೆನ್ನಲ್ಲೇ ಸಿದ್ದಾಪುರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ಮಾಡಿ ಎಸ್.ಪಿ ದೀಪನ್ ರವರು ಅದೇಶ ಮಾಡಿದ್ದಾರೆ.ಆರೋಪವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ದೀಪನ್ ರವರುಸಿದ್ದಾಪುರ ಪೊಲೀಸ್ ರ ಮೇಲೆ ತನಿಖೆಗೆ ಆದೇಶ ಮಾಡಿದ್ದಾರೆ.

ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ನೆತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದು

ಸಿದ್ದಾಪುರ ಠಾಣೆಯ ಓರ್ವ ಕಾನ್ಸ್ಟೆಬಲ್ ಹಾಗೂ ಇನ್ನೋರ್ವ ಎಎಸ್ಐ ನನ್ನು ಹಳಿಯಾಳ ಸಬ್ ಡಿವಿಜನ್ ಗೆ ವರ್ಗಾವಣೆ ಮಾಡಲಾಗಿದೆ.

ತನಿಖೆಯಲ್ಲಿ ಲೋಪ ಕಂಡು ಬಂದರೆ ಅಮಾನತು ಮಾಡುವುದಾಗಿ ಎಸ್.ಪಿ ದೀಪನ್ ರವರು ತಿಳಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement