Karnataka |ಶಾಸಕರುಗಳ ಒತ್ತಡ ಉತ್ತರ ಕನ್ನಡ,ಶಿವಮೊಗ್ಗ ಸೇರಿ  217 ಬರ ಪೀಡಿತ ತಾಲೂಕು ಘೋಷಣೆ.

Karnataka drought affected taluks including Uttara Kannada and Shivamogga Karnataka drought affected taluks including Uttara Kannada and Shivamogga
Karnataka drought affected taluks including Uttara Kannada and Shivamogga

Karnataka |ಶಾಸಕರುಗಳ ಒತ್ತಡ ಉತ್ತರ ಕನ್ನಡ,ಶಿವಮೊಗ್ಗ ಸೇರಿ  217 ಬರ ಪೀಡಿತ ತಾಲೂಕು ಘೋಷಣೆ.

Karnataka/ಬೆಂಗಳೂರು :- karnataka ರಾಜ್ಯದಲ್ಲಿ ಬರ ಪೀಡಿತ ಜಿಲ್ಲೆಗಳಿಗೆ ಸಚಿವರುಗಳು ಭೇಟಿ ನೀಡಿ ಅವುಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದ ನಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಮೊದಲ ಹಂತದಲ್ಲಿ 101 ತಾಲೂಕುಗಳನ್ನ ಮಾತ್ರ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಿದ್ದರು. ಇದಾದ ನಂತರ ರಾಜ್ಯದ 11 ತಾಲೂಕುಗಳನ್ನ ನಿನ್ನೆ ದಿನ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದರು.

ಇದರ ಬೆನ್ನಲ್ಲೇ ಉತ್ತರ ಕನ್ನಡ,ಶಿವಮೊಗ್ಗ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಅಸಮದಾನ ಗೊಂಡಿದ್ದರು. ಆದರೇ ಇದೀಗ ಶಾಸಕರ ಅಸಮದಾನ ತಣಿಸಲು 29 ತಾಲೂಕುಗಳನ್ನ ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಮೂಲಕ ರಾಜ್ಯದ 239 ತಾಲೂಕುಗಳಿದ್ದು ಇದರಲ್ಲಿ 217 ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ.

Advertisement

ಉತ್ತರ ಕನ್ನಡ ಜಿಲ್ಲೆಯ ಯಾವ ತಾಲೂಕು ಬರ ಪೀಡಿತ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲು ಯಲ್ಲಾಪುರ,ಮುಂಡಗೋಡು ಮಾತ್ರ ಇದ್ದು ಇದೀಗ ಅಂಕೋಲ, ಹಳಿಯಾಳ,ಶಿರಸಿ ,ಭಟ್ಕಳ ಕೂಡ ಸೇರಿಕೊಂಡಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದು.

ಶಿಕಾರಿಪುರ,ಶಿವಮೊಗ್ಗ, ತೀರ್ಥಹಳ್ಳಿ,ಭದ್ರಾವತಿ,ಸೊರಬ

ಇತರೆ ತಾಲೂಕುಗಳು – ಇಂಡಿ,ಕಲಘಟಗಿ, ಚಡಚಣ,ಔರಾದ್,ಗೋಕಾಕ್ ,ರಾಮದುರ್ಗ ,ಸವದತ್ತಿ,ಕಾಗೆವಾಡ, ಅಳ್ನಾವರ, ಕುಂದಗೋಳ,ಚಿಕ್ಕಮಗಳೂರು,ಬೆಳತಂಗಡಿ,ಮಡಿಕೇರಿ,ಕುಶಾಲನಗರ,ಬಂಡ್ವಾಳ ,ಉಳ್ಳಾಳ,ಉಡುಪಿ ಸೇರಿ 29 ತಾಲೂಕುಗಳು ಬರ ಎಂದು ಘೋಷಣೆ.

ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಮಂತ್ರಿಗಳ ಕರ್ತವ್ಯ: ಸಿಎಂ ಡಿ ಕೆ ಶಿವಕುಮಾರ್

DK Shivakumar speaking to media in Karwar regarding Iqbal Hussain statement and Lokayukta issue
DK Shivakumar speaking 

ಕರ್ನಾಟಕದಲ್ಲಿ (karnataka)200ಕ್ಕೂ ಹೆಚ್ಚು ತಾಲ್ಲೂಕುಗಳು ಬರಕ್ಕೆ ತತ್ತರಿಸಿದ್ದು, ರೈತರ ಬೆಳೆಗಳು ನಾಶವಾಗಿವೆ. ವಿದ್ಯುತ್ ಉತ್ಪಾದನೆ ಕುಸಿದಿದೆ. ನೀರಿನ ಅಭಾವ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಮಂತ್ರಿಗಳ ಕರ್ತವ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ:-Karnataka |ಮಳೆ ಕೊರತೆ ರಾಜ್ಯದ 101 ತಾಲೂಕು ಬರ ಪೀಡಿತ- ಉತ್ತರ ಕನ್ನಡದ 2 ತಾಲೂಕುಗಳು ಸಾಧಾರಣ ಬರಪೀಡಿತ !

ಬರ ಪರಿಹಾರ ವಿಚಾರವಾಗಿ ದೆಹಲಿಗೆ ಸರ್ವಪಕ್ಷ ನಿಯೋಗ ತೆರಳುವ ಬಗ್ಗೆ ಕೇಳಿದಾಗ, “ಸರ್ವಪಕ್ಷ ನಿಯೋಗ ದೆಹಲಿಗೆ ಹೋಗಲಿದೆ, ಪ್ರಧಾನಮಂತ್ರಿಗಳ ಭೇಟಿಗೆ ಸಮಯಾವಕಾಶ ಕೇಳಿದ್ದು, ಉಪಮುಖ್ಯಮಂತ್ರಿಗಳು ಬರ ಪರಿಸ್ಥಿತಿಯ ಆಳವಾದ ಅಧ್ಯಯನ ಮಾಡಿದ್ದಾರೆ. ಈಗ ಮಧ್ಯಂತರ ಪರಿಹಾರ ನೀಡಿ, ನಂತರ ಬರ ಅಧ್ಯಯನ ಮಾಡಿ ಹೆಚ್ಚು ಪರಿಹಾರ ನೀಡಬೇಕು. ವಿರೋಧ ಪಕ್ಷಗಳ ನಾಯಕರು ಹಾಗೂ ಸಂಸದರು ನಮಗೆ ನೆರವು ನೀಡುವ ವಿಶ್ವಾಸವಿದೆ. ಕರ್ನಾಟಕಕ್ಕೆ ನೆರವು ನೀಡಬೇಕಾಗಿರುವುದು ಪ್ರಧಾನಮಂತ್ರಿಗಳ ಕರ್ತವ್ಯ. ಬೇರೆ ರಾಜ್ಯಗಳು ಪ್ರತಿ ಯೂನಿಟ್ ಗೆ 20-22 ರೂ.ವರೆಗೆ ನೀಡಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ನಮ್ಮ ನಾಗರೀಕರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳುವಂತೆ ನಾವು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಈ ಮಧ್ಯೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದು, ವಿದ್ಯುತ್ ಮಾರಾಟಕ್ಕೆ ನಿರ್ಬಂಧ ಹೇರಿ ಅವರು ವಿದ್ಯುತ್ ಅನ್ನು ಸರ್ಕಾರಕ್ಕೆ ನೀಡಬೇಕು ಎಂದು ಸೂಚಿಸಲಾಗುವುದು. ಸಾಧ್ಯವಿರುವ ಕಡೆ ಥರ್ಮಲ್ ಕೇಂದ್ರ ಸ್ಥಾಪನೆಗೆ ಸಾಧ್ಯತೆ ಹುಡುಕಲಾಗುತ್ತಿದೆ” ಎಂದರು.

ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರಕ್ಕೆ ಆರ್ಥಿಕ ಇಲಾಖೆ ಕೊಟ್ಟ ಎಚ್ಚರದ ದಾಖಲೆ ಬಿಡುಗಡೆ ಮಾಡಲೇ?

ಬಿಜೆಪಿಯ ಚೊಂಬು ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಿಎಂ, “ಆರ್ಥಿಕ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿದೆ. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಆರ್ಥಿಕ ಇಲಾಖೆ ಎಚ್ಚರಿಕೆ ನೀಡುತ್ತದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲೂ ಎಚ್ಚರಿಕೆ ನೀಡಿದ್ದು, ಬೇಕಾದರೆ ದಾಖಲೆ ಬಿಡುಗಡೆ ಮಾಡುತ್ತೇನೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಇದು ರಾಜಕೀಯ ಮಾಡುವಂತಹ ದೊಡ್ಡ ವಿಚಾರವಲ್ಲ. ಅವರಿಗೆ ನನ್ನ ರಾಜೀನಾಮೆ ಬೇಕಾದರೆ ತೆಗೆದುಕೊಳ್ಳಲಿ” ಎಂದರು.

ಸತ್ತ ಆರ್ಥಿಕತೆ ಎಂದು ಬಿಜೆಪಿಯವರು ಶವಯಾತ್ರೆಗೆ ಮುಂದಾಗಿದ್ದಾರೆ ಎಂದು ಕೇಳಿದಾಗ, “ಅವರು ಮಾಡಲಿ, ಅವರ ಸರ್ಕಾರದಲ್ಲಿ ನೀರಾವರಿ ಇಲಾಖೆಯಲ್ಲಿ ಇದ್ದ ಹಣವೆಷ್ಟು, ಅವರು ನೀಡಿದ ಕಾಮಗಾರಿಗಳೆಷ್ಟು? ಎಂದು ಪಟ್ಟಿ ನೀಡಲೇ? ಟೀಕೆ ಮಾಡುವುದು ಬಹಳ ಸುಲಭ, ಅಧಿಕಾರದಲ್ಲಿದ್ದಾಗ ನಿಭಾಯಿಸುವುದು ಸವಾಲಿನ ವಿಚಾರ. ನಾವು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ನಮಗೆ ಜನರ ಬದುಕಿನ ಬಗ್ಗೆ ಕಾಳಜಿ ಇದೆ. ನಾವು ಜಾತಿ, ಧರ್ಮದ ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ” ಎಂದು ತಿಳಿಸಿದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement