ಕಾರವಾರ ಕದಂಬ ನೌಕಾನೆಲೆಯಲ್ಲಿ ಬೆಂಕಿ|ತಪ್ಪಿದ ದೊಡ್ಡ ಅನಾಹುತ

149

ಕಾರವಾರ :- ಹಡಗುಗಳನ್ನು ಡಾಕ್ ಯಾರ್ಡ ಗೆ ಎಳೆದು ತರುವ ನೌಕಾನೆಲೆಯ (kadamba Naval base karwar ) ತೇಜ್ (Tej) ಹೆಸರಿನ ಟಗ್ ಬೋಟ್ ನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ
ಕಾರವಾರದ ಕದಂಬ ನೌಕಾನೆಲೆಯ ಡಾಕ್ ಯಾರ್ಡ ನಲ್ಲಿ ಇಂದು ನಡೆದಿದೆ.

ಆಕಸ್ಮಿಕವಾಗಿ ಇಂಜಿನ್ ಗೆ ಬೆಂಕಿ ತಗುಲಿ ನೌಕಾನೆಲೆಯ ತೇಜ್ ಟಗ್ ಬೋಟ್ ನ ಒಳಭಾಗದ ಇಂಜಿನ್ ಸಂಪೂರ್ಣ ಸುಟ್ಟು ಹೋಗಿದ್ದು ದೊಡ್ಡ ಮಟ್ಟದಲ್ಲಿ ನೌಕಾ ನೆಲೆಯ ಡಾಕ್ ಯಾರ್ಡ ಗೆ ಹೊಗೆ ಆವರಿಸಿದೆ. ತಕ್ಷಣದಲ್ಲಿ ಕಾರವಾರದ ಅಗ್ನಿಶಾಮಕ (fire department) ಸಿಬ್ಬಂದಿಗಳು ನೌಕಾನೆಲೆಗೆ ತೆರಳಿ ನೌಕಾದಳದ ಅಗ್ನಿಶಾಮಕ ದಳದವರೊಂದೊಗೆ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ನೌಕಾ ಹಡಗುಗಳನ್ನು ಡಾಕ್ ಗೆ ಎಳದು ತರಲು ತೇಜ್ ಹೆಸರಿನ ಟಗ್ ಬೋಟ್ ನನ್ನು ಉಪಯೋಗಿಸಲಾಗುತ್ತದೆ. ಇಂದು ಸಹ ಸಮುದ್ರದಿಂದ ಯುದ್ಧ ಹಡಗನ್ನು ರಿಪೇರಿಗಾಗಿ ಎಳೆದು ತರಲು ಹೋದಾಗ ಇಂಜಿನ್ ನಲ್ಲಿ ಸಮಸ್ಯೆ ಯಾಗಿ ಬೆಂಕಿ ತಗುಲಿದೆ. ಘಟನೆ ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:- Sirsi| ವಾಹನ ಸವಾರನಿಗೆ ಡಿಕ್ಕಿ ಹೊಡೆದ ಬಸ್-ಸವಾರ ಸಾವು
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!