ಜನರ ಕಣ್ಣುಕೆಂಪಾಗಿಸುವ ಮದ್ರಾಸ್ ಐ ರೋಗಾಣು ಸಂಖ್ಯೆಯಲ್ಲಿ ಏರಿಕೆ! ಎಚ್ಚರ ತಪ್ಪಿದ್ರೆ ಅಪಾಯ

TextMaster 07 25 07.31.19 TextMaster 07 25 07.31.19

ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ `ಮದ್ರಾಸ್ ಐ’ (Madras Eye) ಈ ಬಾರಿ ಅವಧಿಗೂ ಮುನ್ನ ಮಳೆಗಾಲದಲ್ಲೇ ಎಂಟ್ರಿ ಕೊಟ್ಟು ರಾಜ್ಯದ ಜನರ ಕಣ್ಣು ಕೆಂಪಗಾಗಿಸುತ್ತಿದೆ.

ಮದ್ರಾಸ್ ಐ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಕ್ಕಳಿಗೆ ಈ ವೈರಾಣು ಹೆಚ್ಚು ಕಾಣಿಸಿಕೊಳ್ಳುತ್ತಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಪ್ರತಿದಿನ 60 ರಿಂದ 80 ಪ್ರಕರಣಗಳು ರಾಜ್ಯದಲ್ಲಿ ದಾಖಲಾಗುತ್ತಿದೆ.

Advertisement

ಕಂಜಕ್ಟಿವೈಟಿಸ್ (Conjunctivitis) ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ `ಕಣ್ಣು’ ವೈರಾಣುಗಳಿಂದ (Eye Flu) ಹರಡುವ ಕಣ್ಣಿನ ಸಮಸ್ಯೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಜನ್ಮತಾಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಜುಲೈ ಆರಂಭದಿಂದಲೂ ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು, ಸೂರ್ಯನ ಕಿರಣಗಳ ದರ್ಶನ ಕಡಿಮೆಯಾಗಿದೆ. ಇದರ ಪರಿಣಾಮ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ಅವಧಿಗೂ ಮೊದಲೇ ಮದ್ರಾಸ್ ಐ ವೈರಾಣು ಕಾಣಿಸಿಕೊಂಡಿದೆ. ತಮಿಳುನಾಡಿನಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಇದೀಗ ಕರ್ನಾಟಕದಲ್ಲೂ ಸಹ ಇದ ಸಂಖ್ಯೆ ಏರಿಕೆ ಕಂಡಿದೆ. ಇದನ್ನೂ ಓದಿ:- ನಂದಿನಿ ಹಾಲು ದರ ಏರಿಗೆ ಮಾಡಿದ ರಾಜ್ಯ ಸರ್ಕಾರ! ವಿವರ ನೋಡಿ

ಮದ್ರಾಸ್ ಐ ರೋಗ ಲಕ್ಷಣಗಳೇನು?

ಕಣ್ಣು ವಿಪರೀತ ಕೆಂಪಾಗುವುದು, ದೃಷ್ಟಿ ಅಸ್ಪಷ್ಟವಾಗಿ ಕಾಣುವುದು, ತೀರ ಜ್ವರ ಹಾಗೂ ಮೈ-ಕೈ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಾಗಿವೆ. ಹೆಚ್ಚಾಗಿ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಯಸ್ಕರಿಗಿಂದ ಮಕ್ಕಳಲ್ಲೇ ಹೆಚ್ಚಾಗಿ ರೋಗ ಪತ್ತೆಯಾಗುತ್ತಿದ್ದು, ಪೋಷಕರು ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:-ಆದಾರ್ Update ಮಾಡಿಸಿಕೊಳ್ಳುವ ಜನರೇ ಹುಷಾರ್! ನಿಮ್ಮ ಖಾತೆಯಿಂದ ಮಾಯವಾಗಲಿದೆ ಹಣ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement