ಕಾರವಾರ :- 76ನೇ ಸ್ವಾತಂತ್ರ್ಯೋತ್ಸವದ (Independence Day) ಅಂಗವಾಗಿ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದಲ್ಲಿ 100 ಮೀಟರ್ ಉದ್ದದ ತಿರಂಗಾ ಮೆರವಣಿಗೆ ನಡೆಸಲಾಯಿತು.
ಇದನ್ನೂ ಓದಿ:- ಜನರ ಕಣ್ಣುಕೆಂಪಾಗಿಸುವ ಮದ್ರಾಸ್ ಐ ರೋಗಾಣು ಸಂಖ್ಯೆಯಲ್ಲಿ ಏರಿಕೆ! ಎಚ್ಚರ ತಪ್ಪಿದ್ರೆ ಅಪಾಯ
ಕುಮಟಾದ(kumta) ಡಾ.ಎವಿ ಬಾಳಿಗ ಕಾಲೇಜಿನಿಂದ 800 ವಿದ್ಯಾರ್ಥಿ ಗಳ ತಂಡದೊಂದಿಗೆ ಕುಮಟಾ ವಿಭಾಗದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಹಯೋಗದೊಂದಿಗೆ ಶಿರಸಿ ವಿಭಾಗ ಸಂಚಾಲಕ ಹಾಗೂ ಸ್ಟೇಟ್ ವರ್ಕಿಂಗ್ ಕಮಿಟಿ ಸದಸ್ಯ ವೀರೇಂದ್ರ ಗುನಗ ಮತ್ತು ಕುಮಟಾ ತಾಲ್ಲೂಕು ಸಂಚಾಲಕ ನಿಶಾಂತ್ ರವರ ಮುಂದಾಳತ್ವದಲ್ಲಿ ನಗರದಾಧ್ಯಾಂತ ತಿರಂಗ ಮೆರವಣಿಗೆ ನಡೆಸಿ ಗಿಬ್ ಸರ್ಕಲ್ ನಲ್ಲಿ ಮುಕ್ತಾಯಗೊಳಿಸಲಾಯಿತು.