Karwar| ಸಿಲೆಂಡರ್ ಅಭಾವ -ಕಟ್ಟಿಗೆಗೆ ಡಿಮಾಂಡ್ ಅರಣ್ಯ ಇಲಾಖೆಯಿಂದ 3ಲಕ್ಷ ಮರಗಳ ಕಟಾವಿಗೆ ಅನುಮತಿ.

Karwar:Karwar Cylinder Shortage Triggers Firewood Demand, Forest Dept Approves Felling of 3 Lakh Trees
Firewood shortage in Karwar and Uttara Kannada as LPG crisis increases demand; forest department approves cutting of acacia trees Firewood shortage in Karwar and Uttara Kannada as LPG crisis increases demand; forest department approves cutting of acacia trees
Firewood shortage in Karwar and Uttara Kannada as LPG crisis increases demand; forest department approves cutting of acacia trees

Karwar| ಸಿಲೆಂಡರ್ ಅಭಾವ -ಕಟ್ಟಿಗೆಗೆ ಡಿಮಾಂಡ್ ಅರಣ್ಯ ಇಲಾಖೆಯಿಂದ 3ಲಕ್ಷ ಮರಗಳ ಕಟಾವಿಗೆ ಅನುಮತಿ.

 

ಕಾರವಾರ :- ರಾಜ್ಯದಲ್ಲಿ ಸಿಲೆಂಡರ್ ಅಭಾವ ಹೆಚ್ಚಾಗುತಿದ್ದಂತೆ ಜನ ಕಟ್ಟಿಗೆಯ ಮೊರೆ ಹೋಗಿದ್ದಾರೆ.ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಕಟ್ಟಿಗೆಗಳ ಬೇಡಿಕೆ ಹೆಚ್ಚಾಗಿದ್ದು ಕಟ್ಟಿಗೆ ಡಿಪೋ ಗಳಲ್ಲಿ ಕಟ್ಟಿಗೆಗಳು ಖಾಲಿಯಾಗಿವೆ.

Advertisement

Karwar | ಕಾರವಾರದಲ್ಲಿ ನೋ ಸ್ಟಾಕ್ ಸಿಲೆಂಡರ್ – ಮುಚ್ಚಿದ ಹೋಟಲ್ ಗಳು

ಹೌದು ಕಟ್ಟಿಗೆ ಡಿಪೋಗಳಲ್ಲಿ ಕಟ್ಟಿಗೆಗೆ ಈಗಭಾರಿ ಡಿಮೆಂಡ್ ಬಂದಿದೆ. ಹೋಟಲ್ ಗಳಲ್ಲಿ ಕಟ್ಟಿಗೆ ಬಳಸುವ ಜೊತೆ ಗೃಹ ಬಳಕೆಗೂ ಇದೀಗ ಹಲವು ಕಡೆ ಕಟ್ಟಿಗೆ ಬಳಸಲಾಗುತ್ತಿದೆ. ಇನ್ನು ಕಳೆದ ಮೂರು ವರ್ಷದಿಂದ ಜಿಲ್ಲೆಯಲ್ಲಿ ಕಟ್ಟಿಗೆ ಕಟಾವು ಮಾಡಲು ಅರಣ್ಯ ಇಲಾಖೆಗೆ ಅನುಮತಿ ಇರಲಿಲ್ಲ.ಹೀಗಾಗಿ ಸಂಗ್ರಹವಾಗಿದ್ದ ಕಟ್ಟಿಗೆಗಳೇ ಬಿಕರಿಯಾಗುತಿದ್ದವು.

ಆದರೇ ಎಲ್ಲಿ ಸಿಲೆಂಡರ್ ಸಮಸ್ಯೆ ಉದ್ಭವವಾಯಿತೋ ಸ್ಥಳೀಯವಾಗಿ ಇರುವ ಕಟ್ಟಿಗೆ ಡಿಪೋ ಗಳಲ್ಲಿ ಕಟ್ಟಿಗೆಗಳಿಗೆ ಬೇಡಿಕೆ ಬರತೊಡಗಿದೆ. ಇನ್ನು ಜಿಲ್ಲೆಯಲ್ಲಿ ಅರಣ್ಯ ವಿರುವುದರಿಂದ ಜನ ಕಾಡಿನಲ್ಲಿ ಕಟ್ಟಿಗೆ ಕಡಿಯಲು ಅರಣ್ಯ ಇಲಾಖೆ ನಿರ್ಬಂಧಿಸುತ್ತಿವೆ. ಹೀಗಾಗಿ ಕಟ್ಟಿಗೆಯನ್ನ ಅನಿವಾರ್ಯವಾಗಿ ಡಿಪೋ ಗಳಲ್ಲೇ ತೆಗೆದುಕೊಳ್ಳಬೇಕಾಗಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೇ ಈ ವರ್ಷದ ಮಾರ್ಚ ತಿಂಗಳಲ್ಲಿ ಕಟ್ಟಿಗೆ ಬೇಡಿಕೆ 35% ಗೂ ಹೆಚ್ಚಾಗಿದೆ. ಆದರೇ ಡಿಪೋ ಗಳಲ್ಲಿ ಈಗ ಹಿಂದಿನ ಸಂಗ್ರಹ ಕಾಲಿಯಾಗುತಿದ್ದು ಹೊಸ ಕಟ್ಟಿಗೆಗಳು ಇಲಾಖೆಯಿಂದ ಸರಬರಾಜು ಆಗುತ್ತಿಲ್ಲ.

Kumta| ಪೊಲೀಸರಿಗೆ ಸವಾಲು ಹಾಕಿ ಎಸ್ಕೇಪ್ ಆದ ಪುಡಿರೌಡಿ ಮಾಸೂರು ಮಹೇಶ್! 

ಹೊನ್ನಾವರ (honnavar) ವಿಭಾಗದ  28 ಡಿಪೋಗಳಲ್ಲಿ ಎಂಟು ಡಿಪೋಗಳಲ್ಲಿ ಸಂಪೂರ್ಣ ಕಟ್ಟಿಗೆ ಖಾಲಿಯಾಗಿದೆ. ಉಳಿದ ಇಪ್ಪತ್ತು ಡಿಪೋಗಳಲ್ಲಿ ಮಾತ್ರ ಅತ್ಯಲ್ಪ ಸಂಗ್ರಹವಿದೆ. ಇನ್ನು ಕಟ್ಟಿಗೆಗೆ ಹೆಚ್ಚು ಬೇಡಿಕೆ ಬಂದಿರುವುದರಿಂದ ಇಲಾಖೆ ಕಟ್ಟಿಗೆ ಕಡಿಯಲು ತಮ್ಮ ಅಕೇಶಿಯ ನೆಡುತೋಪುಗಳಲ್ಲಿ ಮರ ಕಡಿಯಲು ಅನುಮತಿ ಕೇಳಿದ್ದು ಇದೀಗ ಅನುಮತಿ ದೊರೆತಿದೆ.

ಈ ಕುರಿತು ಹೊನ್ನಾವರದ ಡಿ.ಎಫ್ ‌ಓ ಯೋಗೀಶ್ ರವರು ಮಾಹಿತಿ ನೀಡಿದ್ದು ಹೊನ್ನಾವರ ವಿಭಾಗದಲ್ಲಿ ಮೂರು ಲಕ್ಷ ಅಕೇಶಿಯ ಮರಗಳ ಕಟಾವಿಗೆ ಅನುಮತಿ ಸಿಕ್ಕಿದೆ. ಈಗಾಗಲೇ ಹೊನ್ನಾವರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಇಲಾಖೆಯ ವ್ಯಾಪ್ತಿಯ ನಡುತೋಪುಗಳಲ್ಲಿ ಕಡಿತಲೆ ಪ್ರಾರಂಭ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Gokarna|ಸಮುದ್ರಕ್ಕಿಳಿದು ಅಲೆಗೆ ಸಿಲುಕಿದ ಮೂರು ಜನ ಪ್ರವಾಸಿಗರ ರಕ್ಷಣೆ

ಸಧ್ಯ ಹೊನ್ನಾವರದಲ್ಲಿ ಎಂಟು ಕಟ್ಟಿಗೆ ಡಿಪೋ ವ್ಯಾಪ್ತಿಯ ಪ್ರದೇಶದಲ್ಲಿ  ಶವ ಸಂಸ್ಕಾರಕ್ಕೂ ಕಟ್ಟಿಗೆ ಸಿಗದಂತಾ ಪರಿಸ್ಥಿತಿ ಇದೆ.ಇನ್ನು ಕಾರವಾರದಲ್ಲಿ ಸಹ ಹೋಟೆಲ್ ಉದ್ಯಮಿಗಳು ಕಮರ್ಷಿಯಲ್ ಸಿಲೆಂಡರ್ ಸಿಗದೇ ಕಟ್ಟಿಗೆ ಬಳಕೆ ಮಾಡುತಿದ್ದು ಈಗಿರುವ ಸಂಗ್ರಹ ಅರ್ದಕ್ಕಿಂತ ಹೆಚ್ಚು ಖಾಲಿಯಾಗಿವೆ. ಹೀಗಾಗಿ ಇದೀಗ ಕಟ್ಟಿಗೆಗೆ ಬೇಡಿಕೆ ಬರುತಿದ್ದಂತೆ ಅರಣ್ಯ ಇಲಾಖೆ ಸಹ ಕ್ರಮ ಕೈಗೊಳ್ಳುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement