ಕಾರವಾರ ಮಾರುತಿ ನಾಯ್ಕ ಆತ್ಮ ಹತ್ಯೆ ಪ್ರಕರಟಕ್ಕೆ ಟ್ವಿಷ್ಟ್ :ಹೊನ್ನಾವರದಲ್ಲಿ ಎಲಿಷಾ ಎಲಕಪಾಟಿ ಸೇರಿ ಮೂರು ಜನರ ಬಂಧನ

250

ಕಾರವಾರ:- ಕಾರವಾರದಲ್ಲಿ ಮಾರುತಿ ನಾಯ್ಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಾದ ಎಲಿಷಾ ಎಲಕಪಾಟಿ, ಬಸವರಾಜ ವಾಲ್ಮೀಕಿ ಹಾಗೂ ಸುರೇಶ್ ನಾಯ್ಕ್ ಎಂಬುವವರನ್ನು ಅಳ್ನಾವರ ಹಾಗೂ ಹೊನ್ನಾವರದಿಂದ ಕಾರವಾರ ಪೊಲೀಸರು ಬಂಧಿಸಿದ್ದು ,ಆರೋಪಿಗಳನ್ನು ಕಾರವಾರದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ :- ದಲಿತ ಮುಖಂಡನ ವಿಡಿಯೋ ಚಿತ್ರೀಕರಣ ಮಾಡಿದ್ದ ಮಾರುತಿ ನಾಯ್ಕ ಮೇಲೆ ಹಲ್ಲೆ.(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಈ ಹಿಂದೆ ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯನ್ನು ಮಾರುತಿ ನಾಯ್ಕ್ ರೆಕಾರ್ಡ್ ಮಾಡಿದ್ದನು.ಬಳಿಕ ಎಲಿಷ ಪಾಟಿ ಕುಟುಂಬಸ್ಥರು ಮಾರುತಿ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದರು.ಈ ಎರಡು ಪ್ರಕರಣಗಳು ಕಾರವಾರ ಗ್ರಾಮೀಣಠಾಣೆ ಮೆಟ್ಟಿಲೇರಿತ್ತು.

ಇದನ್ನೂ ಓದಿ:- ಹಿಂದೂ ದೇವರ ಅವಹೇಳನ ಹೇಳಿಕೆ-ಎಲಕಪಾಟಿ ಬಂಧನ.(ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಆದರೇ ಈತ ಸೆಲ್ಪಿ ವಿಡಿಯೋ ಮಾಡಿದ್ದು ಆತ್ಮಹತ್ಯೆಗೆ ಕಾರಣ ತಿಳಿಸಿದ್ದಲ್ಲದೇ ಡೆತ್ ನೋಟ್ ಸಹ ಬರೆದು
ಅ.20ರಂದು ಮಾರುತಿ ನಾಯ್ಕ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಬರೆದ ಡೆತ್ ನೋಟ್ ನಲ್ಲಿ ಪೊಲೀಸರು, ಎಲಿಷಾ ಎಲಕಪಾಟಿ, ಬಸವರಾಜ, ಸುರೇಶ್ ಮತ್ತಿತರರ ಹೆಸರು ದಾಖಲಾಗಿತ್ತು.
ಇನ್ನು ನಾಳೆ ಸಹ ಸ್ಥಳೀಯ ಜನರು ಮೌನ ಪ್ರತಿಭಟನೆಗೆ ಸಜ್ಜಾಗಿದ್ದರು. ಈ ಪ್ರಕರಣ ರಾಜಕೀಯ ಬಣ್ಣಕ್ಕೆ ತಿರುಗಿದ್ದು ,ಪ್ರಕರಣದ ಗಂಭೀರತೆ ಹಿನ್ನೆಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾದೀಶರ ಮುಂದೆ ಹಾಜುರುಪಡಿಸಲಾಗಿದೆ.

ಇದನ್ನೂ ಓದಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!