ಆಸ್ಪತ್ರೆಗೆ ಜ್ವರ ಎಂದು ಬಂದ ವ್ಯಕ್ತಿಗೆ ಇನ್ನೊಬ್ಬ ರೋಗಿಗೆ ನೀಡಬೇಕಾದ ಚಿಕಿತ್ಸೆ ನೀಡಿದ ಕಾರವಾರದ KIMS ವೈದ್ಯರು- ಸಿಬ್ಬಂದಿ ಮಾಡಿದ ಎಡವಟ್ಟಿಗೆ ಬೆಲೆ ತೆತ್ತ ರೋಗಿ!

305

ಕಾರವಾರ :-ಜ್ವರ ತಂಡಿ ಎಂದು ತಪಾಸಣೆಗೆ ಬಂದ ವ್ಯಕ್ತಿಗೆ ಡೆಂಗ್ಯೂ( dengue fever)ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಮೂರು ದಿನದ ವರೆಗೆ ಚಿಕಿತ್ಸೆ ನೀಡಿ ವೈದ್ಯರ ಎಡವಟ್ಟು ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕ್ರಿಮ್ಸ್ ಮೆಡಿಕಲ್ (KIMS medical College )ಕಾಲೇಜಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಅಂಕೋಲ ತಾಲೂಕಿನ (Ankola) ಬೇಲಿಕೇರಿಯ (Belikeri) ಅರವಿಂದ್ ಎಂಬುವವರು ಜ್ವರ,ತಂಡಿ ಯಿಂದಾಗಿ ಕಾರವಾರದ ಕ್ರಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ಮಾಡಿಸಿದ್ದರು.

ಈ ವೇಳೆ ಇವರದ್ದೇ ಹೆಸರಿನ ಇನ್ನೂಬ್ಬ ವ್ಯಕ್ತಿ ಸಹ ರಕ್ತ ತಪಾಸಣೆ ಮಾಡಿಸಿದ್ದರು. ಆದರೇ ರಿಪೋಟನ್ನು ಕೊಡುವ ವೇಳೆ ಲ್ಯಾಬ್ ಸಿಬ್ಬಂದಿಗಳ ಅಚಾತುರ್ಯದಿಂದ ಇಬ್ಬರ ರಕ್ತ ತಪಾಸಣಾ ವರದಿ ಅದಲು ಬದಲಾಗಿದ್ದು , ರಕ್ತಮಾದರಿ ವರದಿ (blood report )ನೋಡಿದ ವೈದ್ಯರು ಬೇಲಿಕೇರಿಯ ಅರವಿಂದ ರವರಿಗೆ ಡೆಂಗ್ಯೂ ಜ್ವರ ಇದೆ ಎಂದು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ಕೊಟ್ಟಿದ್ದಾರೆ.

ಮೂರು ದಿನದ ನಂತರ ತಪಾಸಣೆ ವೇಳೆ ಬದಲಾಗಿದ್ದ ಅರವಿಂದ್ ವರದಿಯಲ್ಲಿ ಕಿಡ್ನಿ ಸಮಸ್ಯೆ ,ಶುಗರ್ ಇರುವ ವರದಿ ನೋಡಿ ವೈದ್ಯರಿಗೆ ತಪಾಸಣಾ ವರದಿ ಬದಲಾಗಿದ್ದು ಗಮನಕ್ಕೆ ಬಂದಿದೆ. ಇನ್ನು ಈ ವಿಷಯ ತಿಳಿಯುತಿದ್ದಂತೆ ಬೇಲಿಕೇರಿಯ ಅರವಿಂದ್ ರವರು ಭಯದಲ್ಲಿ ಆದ ಪ್ರಮಾದದ ಬಗ್ಗೆ ಆಡಿಯೋ ರೆಕಾರ್ಡ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದಾರೆ.

ಇನ್ನು ಬದಲಾದ ವರದಿಯಂತೆ ಡೆಂಗ್ಯೂ ಜ್ವರದ ಜೊತೆ ಕಿಡ್ನಿ ವೈಫಲ್ಯ ಹಾಗೂ ಶುಗರ್ ಗೂ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಅಂಕೋಲದ ಅರವಿಂದ್ ರವರಿಗೆ ಸಮಸ್ಯೆ ಆಗಿರುವ ಸಾಧ್ಯತೆಗಳಿದ್ದು, ಇಂದು ಸಿಟಿ ಸ್ಕ್ಯಾನ್ ಮಾಡಲಾಗಿದೆ. ಇದನ್ನೂ ಓದಿ:-ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಡ್ರಾಮ ಮಾಡಿ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ.- ನಾಲಿಗೆ ಹೊರಳಿಸಿದ ಕಾರವಾರ ಜಿಲ್ಲಾ ಸರ್ಜನ್ (ಅಕ್ಷರದ ಮೇಲೆ ಕ್ಲಿಕ್ ಮಾಡಿ)

ಈ ವರದಿ ಬಂದ ನಂತರ ಅರವಿಂದ್ ರವರಿಗೆ ಬದಲಿ ಚಿಕಿತ್ಸೆ ನೀಡಿದ್ದರಿಂದ ಏನು ಸಮಸ್ಯೆ ಆಗಿದೆ ಎಂಬುದು ತಿಳಿದು ಬರಲಿದೆ. ಸದ್ಯ ಈತನನ್ನು ವಾರ್ಡ ನಿಂದ ಡಿಸ್ಚಾರ್ಜ ಮಾಡಿ ಕಳುಹಿಸಲಾಗಿದೆ.
ರಕ್ತ ತಪಾಸಣಾ ಸಿಬ್ಬಂದಿ ಮಾಡಿದ ತಪ್ಪಿಗೆ ಇದೀಗ ಅರವಿಂದ್ ಬೆಲೆ ತೆರುವಂತೆ ಮಾಡಿದೆ.

ಇದನ್ನೂ ಓದಿ:- ಕುಡುಕರ ಕಾಟಕ್ಕೆ ಕಾರವಾರ ಪೊಲೀಸರು ಸುಸ್ತು! ಪ್ರಕರಣ ದಾಖಲಿಸುವುದನ್ನೇ ಕೈ ಬಿಟ್ಟ ಪೊಲೀಸರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!