ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಮಂಗಳೂರು ವಲಯದ ಐಜಿಪಿಯವರ ನಿರ್ದೇಶನದಂತೆ ಮದ್ಯಪಾನ ಮತ್ತು ಹೆಲ್ಮೆಟ್ ಧರಿಸದೇ ಸವಾರಿ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುವ ದೃಷ್ಟಿಯಿಂದ ಉತ್ತರ ಕನ್ನಡ (uttrarakannada) ಜಿಲ್ಲೆಯಾಧ್ಯಾಂತ ಸಂಚಾರಿ ಪೊಲೀಸರು (traffic police )ರಸ್ತೆಗಿಳಿದು ದಂಡದ ಬಿಸಿ ಮುಟ್ಟಿಸಲು ಕಾರ್ಯಾಚರಣೆ ನಡೆಸಿದ್ದಾರೆ.
ಆದರೇ ರಾತ್ರಿ ವೇಳೆ ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಕುಡುಕರೇ ಬಿಸಿ ಮುಟ್ಟಿಸಿದ್ದಾರೆ. ಹೌದು ಕಾರವಾರದಲ್ಲಿ ಸಂಚಾರಿ ಪೊಲೀಸರು ಸರ್ಕಲ್ ಗಳಲ್ಲಿ ನಿಂತು ದಂಡ ಹಾಕುಲು ರಾತ್ರಿ ಎಂಟರ ನಂತರ ಕಾರ್ಯಾಚರಣೆಗೆ ಇಳಿದಿದ್ದಾರೆ.
ಕೆಲವು ಪೊಲೀಸ್ ಸಿಬ್ಬಂದಿ ಬಾರ್ ಮುಂದೆಯೇ ನಿಂತು ಕುಡಿದು ಬರುವ ವಾಹನ ಸವಾರರನ್ನು ಬೈಕ್ ಹತ್ತುತ್ತಲೇ ಹಿಡಿದು ದಂಡ ಹಾಕಿದ್ದಾರೆ. ಮೊದಲ ದಿನ ಹತ್ತಕ್ಕೂ ಹೆಚ್ಚು ಜನರಿಗೆ ದಂಡದ ಬಿಸಿ ಮುಟ್ಟಿದೆ. ಈ ಸುದ್ದಿ ಕುಡುಕರ ಗ್ರೂಪ್ ಗಳಲ್ಲಿ ಹರಿದಾಡಿದೆ.
ನಂತರ ಮರು ದಿನ ಕೂಡ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.ಆದರೇ ಕುಡಿದು ಹೆಲ್ಮೆಟ್ ಸಹ ದರಸದ ಹಾಗೂ ಹಲವು ವಾಹನಗಳಿಗೆ ದಾಖಲೆಯೇ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇನ್ನೇನೂ ಸಾವಿರಾರು ರುಪಾಯಿ ದಂಡ ಹಾಕಬೇಕು ಎನ್ನುವಾಗ ಪೊಲೀಸ್ (police )ಅಧಿಕಾರಿಗಳಿಗೆ ಪ್ರಭಾವಿ ವ್ಯಕ್ತಿಗಳಿಂದ ಪೋನ್ ಬರಲು ಪ್ರಾರಂಭವಾಗಿ ,ಕೈಗೆ ಸಿಕ್ಕವರನ್ನು ಬಿಟ್ಟುಕಳುಹಿಸುವ ದಯನೀಯ ಸ್ಥಿತಿಗೆ ಬಂದಿದ್ದಾರೆ.
ಇನ್ನು ಕುಡುಕರ ಪ್ರಭಾವ ಎಷ್ಟಿತ್ತೆಂದರೇ ಪೊಲೀಸರಿಗೇ ಬಂದವಸ್ತ್ ಕಲ್ಪಿಸುವ ಸ್ಥಿತಿ ಕಾರವಾರದ ಬೀದಿಯಲ್ಲಿ ಬಂದೊದಗಿತ್ತು. ಹಲವರು ಪೊಲೀಸರಿಗೆ ದಮ್ಕಿ ಹಾಕಿ ಹೋದರೇ ,ಕೇಸ್ ಮಾಡಪ್ಪ ಮನೆಗೆ ನೋಟಿಸ್ ಕಳಿಸು ದಂಡ ಕಟ್ಟುತ್ತೇನೆ ಎಂದರೇ , ಕೆಲವರು ಕುಡಿದ ಅಮಲಿನಲ್ಲಿ ಕೋರ್ಟ ಗೆ ನೋಟಿಸ್ ಕಳುಹಿಸು ಎಂದು ಆವಾಜ್ ಹಾಕಿದ್ದಾರೆ.ಇನ್ನು ಕೆಲವರು ತಪ್ಪು ಮಾಹಿತಿ ನೀಡಿ ಪ್ರಭಾವಿಗಳ ಪ್ರಭಾವ ಬಳಸಿ ತಪ್ಪಿಸಿಕೊಂಡಿದ್ದಾರೆ.
ಇನ್ನು ಪೊಲೀಸರು ರಾತ್ರಿ ಹೆಚ್ಚಿನ ಡ್ಯೂಟಿ ಮಾಡಿ ಪ್ರಕರಣ ದಾಖಲಿಸಿದ್ದು ದಿನ್ನಕ್ಕೆ ಮೂರರಿಂದ ನಾಲ್ಕು ಎನ್ನುತ್ತದೆ ಮೂಲಗಳು.
ಇನ್ನು ಜಿಲ್ಲೆಯ ಇತರೆ ಭಾಗದಲ್ಲೂ ಸಹ ಇದಕ್ಕೆ ಬಿನ್ನವಾಗಿರದೇ ಅಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿದ್ದು ಮೂರು ದಿನ ಕಾರ್ಯಾಚರಣೆ ನಡೆಸುವ ವೇಳೆಗಾಗಲೇ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳ ಕರೆಗಳು ,ಬಾರ್ ಮಾಲೀಕರ ಕರೆಗಳಿಗೆ ಬೇಸತ್ತ ಪೊಲೀಸರು ತಮ್ಮ ಕೆಲಸ ಸಮರ್ಪಕವಾಗಿ ಮಾಡಲಾಗದೇ ಕೈ ಚಲ್ಲಿ ಕೂರಿಸಿದೆ.
ಇದನ್ನೂ ಓದಿ:-ರೈತರ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
ಇನ್ನು ಮಾಧ್ಯಮಗಳು ಸಹ ಎಷ್ಟು ಪ್ರಕರಣ ದಾಖಲಿಸಿದ್ದೀರ ಎಂದು ಮಾಹಿತಿ ಕೇಳಿದಾಗ ಮಾಹಿತಿ ನೀಡಲು ಪೊಲೀಸ್ ಇಲಾಖೆ ಬಳಿ ಅಂಕೆ ಸಂಖ್ಯೆ ಲೆಕ್ಕಾಚಾರ ಸಹ ಸಿಗದೇ ಸುಮ್ಮನಾಗಿಬಿಟ್ಟಿದ್ದಾರೆ.
ಇನ್ನು ಸದ್ಯ ಕುಡುಕರ ರಗಳೆಯಿಂದ ಪ್ರಭಾವಿಗಳ ಒತ್ತಡದಿಂದ ರಾತ್ರಿ ಕಾರ್ಯಾಚರಣೆಯನ್ನು ಸಂಚಾರಿ ಪೊಲೀಸರು ನಿಲ್ಲಿಸಿ ಬಿಟ್ಟಿದ್ದು ಈಗ ಕುಡುಕರಿಗೆ ಪೈಪ್ ನಲ್ಲಿ ಊದುವ ರಗಳೆ ತಪ್ಪಿದರೇ ,ಪೊಲೀಸರಿಗೆ ದೊಡ್ಡವರ ಕರೆ ಬಂದು ಬೈಸಿಕೊಳ್ಳುವುದು ತಪ್ಪಿದಂತಾಗಿದೆ. ಹೀಗಾಗಿ ಕರಾವಳಿಯ ಬೀದಿಯಲ್ಲಿ ಹೋಗುವವರು ಎಚ್ಚರದಿಂದ ಹೆಜ್ಜೆ ಹಾಕದಿದ್ದರೇ ಯಮಲೋಕಕ್ಕೆ ಫ್ರೀಯಾಗಿ ಟಿಕೆಟ್ ಸಿಗೋದಂತು ಗ್ಯಾರಂಟಿ. (ಪೊಲೀಸ್ ಇಲಾಖೆಯಿಂದ ಮೂರು ದಿನದಲ್ಲಿ ಎಷ್ಟು ಪ್ರಕರಣ ದಾಖಲಾಗಿದೆ ಎಂಬ ವರದಿ ನೀಡಿದಲ್ಲಿ ಪ್ರಕಟಿಸಲಾಗುವುದು)






