KSRTC ಬಸ್‌ಗಳ ಲೈವ್ ಲೊಕೇಶನ್ ನಿಮ್ಮ ಮೊಬೈಲ್‌ನಲ್ಲಿ |ಶೀಘ್ರವೇ VTMS ಜಾರಿ

KSRTC ಬಸ್‌ಗಳ ಲೈವ್ ಲೊಕೇಶನ್ ಮೊಬೈಲ್‌ನಲ್ಲಿ ನೋಡಬಹುದು. ವಿಟಿಎಂಎಸ್ ಜಾರಿಗೆ ಬಂದು 24×7 ಟ್ರ್ಯಾಕಿಂಗ್, ಪ್ಯಾನಿಕ್ ಬಟನ್ ಹಾಗೂ ಸುರಕ್ಷತೆ ಹೆಚ್ಚಳ.
KSRTC buses equipped with VTMS live tracking system in Karnataka KSRTC buses equipped with VTMS live tracking system in Karnataka
KSRTC buses equipped with VTMS live tracking system in Karnataka

KSRTC ಬಸ್‌ಗಳ ಲೈವ್ ಲೊಕೇಶನ್ ನಿಮ್ಮ ಮೊಬೈಲ್‌ನಲ್ಲಿ |ಶೀಘ್ರವೇ VTMS ಜಾರಿ

Ksrtc bus news/ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ ಪ್ರಯಾಣವನ್ನು ಮತ್ತಷ್ಟು ಸುಧಾರಿಸಲು ಮಹತ್ವದ ಹೆಜ್ಜೆ ಇಟ್ಟಿದೆ.

 ರಾಜ್ಯದಾದ್ಯಂತ ಸಂಚರಿಸುವ 8,000ಕ್ಕೂ ಹೆಚ್ಚು ಬಸ್‌ಗಳ ಮೇಲೆ ನೈಜ ಸಮಯದ ನಿಗಾ ವಹಿಸುವ ಉದ್ದೇಶದಿಂದ ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಸಿಸ್ಟಮ್ (VTMS) ಅನ್ನು ಶೀಘ್ರದಲ್ಲೇ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ.

ಈ ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ, ಪ್ರಯಾಣಿಕರು ಮೊಬೈಲ್ ಆಪ್ ಅಥವಾ ವೆಬ್‌ಸೈಟ್ ಮೂಲಕ ಬಸ್‌ಗಳ ಲೈವ್ ಲೊಕೇಶನ್, ಆಗಮನ ಸಮಯ ಮತ್ತು ಮಾರ್ಗದ ವಿವರಗಳನ್ನು ನಕ್ಷೆಯಲ್ಲೇ ನೋಡಬಹುದಾಗಿದೆ. ಇದರಿಂದ ಬಸ್ ಪ್ರಯಾಣ ಹೆಚ್ಚು ಸುಲಭ, ಸುರಕ್ಷಿತ ಮತ್ತು ಸಮಯಪಾಲನೆಯಾಗಲಿದೆ.

Advertisement

ವಿಟಿಎಂಎಸ್ ಕಾರ್ಯಾಚರಣೆ ಮೇಲ್ವಿಚಾರಣೆಗಾಗಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಈಗಾಗಲೇ ಸ್ಥಾಪನೆ ಮಾಡಲಾಗಿದ್ದು, ಬಸ್ ಸಂಚಾರದ ಪ್ರತಿಯೊಂದು ಚಲನವಲನವನ್ನು 24 ಗಂಟೆಯೂ ನಿಗಾದಲ್ಲಿ ಇಡಲಿದೆ.

24×7 ಬಸ್ ಮೇಲ್ವಿಚಾರಣೆ ವ್ಯವಸ್ಥೆ.

ಹೊಸ ಟೆಂಡರ್ ಪ್ರಕ್ರಿಯೆಯ ಮೂಲಕ ಜಾರಿಗೊಳ್ಳುತ್ತಿರುವ ಈ ಯೋಜನೆ,

ಬಸ್‌ಗಳ ನೈಜ ಸಮಯದ ಟ್ರ್ಯಾಕಿಂಗ್,ನಿಗದಿತ ವೇಳಾಪಟ್ಟಿ ಪಾಲನೆ,ಮಾರ್ಗ ವಿಚಲನಗಳ ಪತ್ತೆ,ತುರ್ತು ಸಂದರ್ಭಗಳಲ್ಲಿ ತಕ್ಷಣದ ಎಚ್ಚರಿಕೆ,ಪ್ಯಾನಿಕ್ ಬಟನ್ ಒತ್ತಿದ ಕೂಡಲೇ ಸ್ಪಂದನೆಹೀಗೆ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸಾರಿಗೆ ಕೇಂದ್ರ ನಿಯಂತ್ರಣ ಕೇಂದ್ರ (CCS) ಮೂಲಕ ದಿನದ 24 ಗಂಟೆ ಮೇಲ್ವಿಚಾರಣೆ ನಡೆಯಲಿದೆ.

Haliyala | KSRTC ಬಸ್ ಅಪಘಾತ ಬಸ್ ನಲ್ಲಿ ಸಿಲುಕಿಕೊಂಡ ಶಾಲಾ ವಿದ್ಯಾರ್ಥಿ |20 ಜನರಿಗೆ ಗಾಯ 

735 ಹೊಸ ಬಸ್‌ಗಳಿಗೂ VTMS ಅನ್ವಯ.

ಪ್ರಸ್ತುತ ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ 1,286 ವಾಹನಗಳಲ್ಲಿ AIS-140 ಪ್ರಮಾಣಿತ ಟ್ರ್ಯಾಕಿಂಗ್ ಸಾಧನಗಳು ಮತ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಉಳಿದ ಎಲ್ಲಾ ಬಸ್‌ಗಳಿಗೂ ಈ ವ್ಯವಸ್ಥೆ ವಿಸ್ತರಿಸಲಾಗುತ್ತದೆ.

 ಜೊತೆಗೆ, ನಿಗಮಕ್ಕೆ ಸೇರ್ಪಡೆಗೊಳ್ಳಲಿರುವ 735 ಹೊಸ ಬಸ್‌ಗಳೂ VTMS ವ್ಯಾಪ್ತಿಗೆ ಬರಲಿವೆ, ಇದರಿಂದ ಸಂಪೂರ್ಣ ಬಸ್ ಜಾಲ ಡಿಜಿಟಲ್ ಮೇಲ್ವಿಚಾರಣೆಗೆ ಒಳಪಡುವುದು.

ಒಂದು ಬಸ್‌ಗೆ 9 ಪ್ಯಾನಿಕ್ ಬಟನ್

ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಒತ್ತು ನೀಡಿರುವ ಈ ಯೋಜನೆಯಲ್ಲಿ,ಪ್ರತಿ ಬಸ್‌ಗೆ ಒಟ್ಟು 9 ಪ್ಯಾನಿಕ್ ಬಟನ್‌ಗಳು8 ಪ್ರಯಾಣಿಕರಿಗೆ,1 ಚಾಲಕನಿಗೆಅಳವಡಿಸಲಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ಬಟನ್ ಒತ್ತಿದರೆ, ತಕ್ಷಣವೇ ಕಂಟ್ರೋಲ್ ರೂಮ್ ಹಾಗೂ ರಾಜ್ಯ ಮಟ್ಟದ ಬ್ಯಾಕೆಂಡ್ ಸಿಬ್ಬಂದಿಗೆ ಲೈವ್ ಲೊಕೇಶನ್ ಸಹಿತ ಎಚ್ಚರಿಕೆ ಹೋಗುತ್ತದೆ. ಇದರಿಂದ ತಕ್ಷಣ ಸ್ಪಂದನೆ ಸಾಧ್ಯವಾಗುತ್ತದೆ.

ಈ ಸಂಪೂರ್ಣ ವ್ಯವಸ್ಥೆಯನ್ನು ಬೆಂಗಳೂರು – ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿರುವ ಕೇಂದ್ರ ನಿಯಂತ್ರಣ ಕೇಂದ್ರದಿಂದ ನಿರ್ವಹಿಸಲಾಗುತ್ತದೆ.

 ಪ್ರಯಾಣಿಕ ಸ್ನೇಹಿ ಡಿಜಿಟಲ್ ಸೌಲಭ್ಯ

VTMS ಜಾರಿಗೆ ಬಂದ ಬಳಿಕ,ಮೊಬೈಲ್ ಆಪ್ / ವೆಬ್‌ನಲ್ಲಿ ಲೈವ್ ಲೊಕೇಶನ್ ,ಬಸ್ ನಿಲ್ದಾಣಕ್ಕೆ ಬರುವ ನಿಖರ ಸಮಯ,ನಕ್ಷೆಯ ಆಧಾರಿತ ಮಾಹಿತಿ,ಬಸ್ ನಿಲ್ದಾಣಗಳ LED ಪರದೆಗಳು,ಧ್ವನಿ ಘೋಷಣೆಗಳಮೂಲಕ ಪ್ರಯಾಣಿಕರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಇದರಿಂದ ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಹಾಗೂ ನಿಖರವಾಗಿ ಯೋಜಿಸಿಕೊಳ್ಳಲು ಸಹಾಯವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement