ಕುಮಟಾ:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ದಲ್ಲಿ ಅಕ್ರಮ ಚಟುವಟಿಕೆಯ ಕೇಂದ್ರ ಬಿಂದುವಾಗಿದೆ. ಕಳೆದ ಒಂದು ವರ್ಷದಿಂದ ಕುಮಟಾ ದಲ್ಲಿ ಅಕ್ರಮ ದಂಧೆಗಳು ಸಕ್ರಮದಂತೆ ಯಾರ ಭಯವೂ ಇಲ್ಲದೇ ನಡೆಯುತ್ತಿರುವುದು ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಕುಮಟಾ ದಲ್ಲಿ ಓಸಿ,ಮಟ್ಕಾ,ಮಂಡಲ ಅಕ್ರಮ ದಂಧೆಗಳು ನಿರಂತರವಾಗಿ ನಡೆಯುತಿದ್ದು ಜಾತ್ರೆ ,ಕಾರ್ಯಕ್ರಮಗಳಲ್ಲಿ ಭಹಿರಂಗವಾಗಿಯೇ ನಡೆಯುತ್ತಿದೆ.

ಇನ್ನು ನಗರ ಭಾಗದ ನೆಲ್ಲಿಕೇರಿ,ಹೊಸ ಬಸ್ ನಿಲ್ದಾಣ ,ಮುರೂರು,ಹೆಗಡೆ ಕ್ರಾಸ್ ಸೇರಿದಂತೆ ಹಲವು ಭಾಗದಲ್ಲಿ ಓಸಿ,ಮಟ್ಕಾ ವ್ಯಾಪಕವಾಗಿ ನಡೆದರೇ,ಗ್ರಾಮೀಣ ಭಾಗದ ದೀವಗಿ,ಮಿರ್ಜಾನ್ ,ಕತಗಾಲ್ ,ಬಾಡ,ಅಘನಾಶಿನಿ ,ಕಾಗಾಲ್ ಭಾಗದಲ್ಲಿ ಮಂಡಲ,ಓಸಿ ದಂಧೆಗಳು ಸಾರ್ವಜನಿಕ ಸ್ಥಳಗಳಲ್ಲೇ ಯಾರ ಭಯವಿಲ್ಲದೇ ನಡೆಯುತ್ತಿದೆ.
ಮಾಹಿತಿ ನೀಡಿದ್ರೂ ಡೋಂಟ್ ಕೇರ್.
ಇನ್ನು ಅಕ್ರಮ ಚಟುವಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೇ ದಂಧೆಕೋರರಿಗೆ ಅವರೇ ಮಾಹಿತಿ ನೀಡಿ ಬೇರೆಡೆ ತೆರಳುವಂತೆ ಸೂಚಿಸುತ್ತಾರೆ ಎಂಬ ಆರೋಪ ಇದೆ. ಇದಲ್ಲದೇ ಜಾತ್ರೆ ಯಲ್ಲಿ ಪೊಲೀಸರ ಮುಂದೆಯೇ ಹಣಕ್ಕಾಗಿ ಮಂಡಲ ನೆಡೆದರೂ ಕೇಳುವುದೇ ಇಲ್ಲ ಎನ್ನುತ್ತಾರೆ ಸ್ಥಳೀಯರು.
ದೂರು ನೀಡಿದ್ರೂ ದಂಧೆ ಕೋರರ ಬೆದರಿಕೆ ಜೊತೆ ಪೊಲೀಸರ ಬೆದರಿಕೆ ಸಹ ಎದುರಿಸ ಬೇಕು ಹಾಗಾಗಿ ಇದಕ್ಕಿಂತ ಸುಮ್ಮನಾಗುವುದೇ ಲೇಸು ಎನ್ನುತ್ತಾರೆ ಹೆಸರು ಹೇಳಲು ಹೆದರುವ ಸ್ಥಳೀಯರು.

ಕುಮಟಾ ಠಾಣೆ ಸಿಪಿಐ ಆಗಿ ತಿಮ್ಮಪ್ಪ ನಾಯ್ಕ ,ಪಿ.ಎಸ್.ಐ ಆಗಿ ಸ್ಥಳೀಯರೇ ಆದ ನವೀನ್ ನಾಯ್ಕ ರವರು ಇದ್ದಾರೆ.ಇದೀಗ ಲೋಕಸಭೆ ಚುನಾವಣೆ ನಿಮಿತ್ತ ನವೀನ್ ನಾಯ್ಕ ರ ಸ್ಥಾನಕ್ಕೆ ಮಂಜುನಾಥ ಗೌಡರ್ ಬಂದಿದ್ದಾರೆ. ಆದರೇ ಕುಮಟಾ ದಲ್ಲಿ ನಡೆಯುವ ಅಕ್ರಮ ಚಟುವಟಿಕೆಗೆ ಮಾತ್ರ ಬ್ರೇಕ್ ಹಾಕುತ್ತಿಲ್ಲ.
ಠಾಣೆ ಎಂದರೇ ಭಯ!
ಕುಮಟಾ ಠಾಣೆಗೆ ದೂರು ನೀಡಲು ಹೋಗುವುದೇ ಒಂದು ಸಾಹಸದ ಕೆಲಸ! ಜನಸ್ನೇಹಿ ಠಾಣೆಯಾಗಬೇಕಿದ್ದ ಕುಮಟಾ ಠಾಣೆ ದೌರ್ಜನ್ಯ ಮಾಡುವ ಹೆದರಿಸುವ ಠಾಣೆಯಾಗಿ ಬದಲಾಗುತ್ತಿದೆ.
ಈ ಹಿಂದೆ ಪಾಸ್ ಪೋರ್ಟ ಮಾಡಿಸಲು ಅಪ್ಲೆ ಮಾಡಿದ್ದ ಪದವೀದರನೊಬ್ಬ ದಾಖಲೆ ನೀಡಲು ಠಾಣೆಗೆ ತೆರಳಿದ್ದಾಗ ಸೈಟ್ ನಲ್ಲಿ ಅಪ್ಲೋಡ್ ಮಾಡಲು ಹಣ ಕೇಳಿ ಸತಾಯಿಸಿದ್ದರು. ಕೈಯಲ್ಲಿ ಹಣವಿಲ್ಲದ ಆ ಯುವಕ ದಾಖಲೆ ಸರಿ ಇದ್ದರೂ ಕೆಲವು ಸಿಬ್ಬಂದಿಗಳ ದಾಹಕ್ಕೆ ನೊಂದು ಕೈಚಲ್ಲಿ ಕುಳಿತಾಗ ಸ್ಥಳೀಯ ಮುಖಂಡರೊಬ್ಬರು ಹಣ ನೀಡಿ ಸರಿಪಡಿಸಿದ್ರು
ಎನ್ನುತ್ತಾರೆ ಪದವೀದರ( ಪೊಲೀಸರ ಟಾರ್ಚರ್ ಸಮಸ್ಯೆ ಯಿಂದ ಹೆಸರನ್ನು ಗೌಪ್ಯವಾಗಿಡಲಾಗಿದೆ.)
ಇನ್ನು ದೂರು ನೀಡಿದ ಹಾಗೂ ಎದುರು ವ್ಯಕ್ತಿಗಳಿಂದಲೂ ಸಹ ಹಣ ಪೀಕುವ ಕೆಲವು ಪೊಲೀಸ್ ಸಿಬ್ಬಂದಿ ಯಿಂದಾಗಿ ದೂರು ಕೊಡುವುದೇ ಬೇಡ ಎನ್ನುವ ಮಟ್ಟಿಗೆ ತೊಂದರೆಗೊಳಗಾದವರು ಬಂದುಮುಟ್ಟಿದ್ದಾರೆ ಎಂದರೇ ಇಲ್ಲಿನ ಪರಿಸ್ಥಿತಿ ಏನಿದೆ ಎಂಬುದನ್ನು ತೋರಿಸುತ್ತದೆ.
ಎಸಿಬಿ ,ಲೋಕಾಯುಕ್ತಕ್ಕೆ ದೂರು ಕೊಡಲು ಸಂಕಟ!
ಬ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಟ್ಟು ಹಿಡಿಸೋಣ ಎಂಬ ಮನಸ್ಸನ್ನ ಹಲವರು ಮಾಡಿದ್ದಾರೆ. ಆದರೇ ಪೊಲೀಸರ ಮೇಲಿನ ಭಯಕ್ಕೆ ನಮಗೇಕೆ ಬೇಕು ಎಂದು ಕೈ ಚಲ್ಲಿ ಕುಳಿತ ಕೆಲವು ಜನರ ಓಡಾಟ ಮಾಡುವ ಸಮಸ್ಯೆ ಒಂದುಕಡೆಯಾದರೇ , ಕೋರ್ಟು ಕಚೇರಿ ಜೊತೆ ಪೊಲೀಸರ ಟಾರ್ಗೆಟ್ ಆಗೋ ಭಯ ಬ್ರಷ್ಟಾಚಾರ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಇದನ್ನೂ ಓದಿ:-ಕುಡಿದ ಮತ್ತಿನಲ್ಲಿ ಪೊಲೀಸರ ಮೇಲೆ ಹಲ್ಲೆ :ಯಲ್ಲಾಪುರ ಕಾಂಗ್ರೆಸ್ ಮಾಜಿ ಶಾಸಕ ಪುತ್ರನ ಬಂಧನ
ರಸ್ತೆ ಹೋಕರಿಂದಲೂ ವಸೂಲಿ!
ಹೆಲ್ ಮೆಟ್ ಹಾಕಿಲ್ಲಾ ,ಸೀಟ್ ಬೆಲ್ಟ್ ಹಾಕಿಲ್ಲ ಎಂಬುದು ಅಪರಾಧ. ಆದರೇ ಪ್ರಕರಣ ದಾಖಲಿಸುವ ಬದಲು ಅವರಿಂದಲೂ ಹಣ ವಸೂಲಿ ನಡೆಯುತ್ತಿದೆ.ಅಕ್ರಮ ಮರಳು ದಂಧೆ ಕೋರರಿಂದ ತಿಂಗಳಿಗೆ ಇಂತಿಷ್ಟು ಎಂದು ಠಾಣೆಗೆ ಜಮಾ ಆಗುತ್ತದೆ ಎಂಬ ದೂರಿದೆ. ಒಮ್ಮೊಮ್ಮೆ ಸಾರ್ವಜನಿಕರು ನೀಡಿದ ದೂರಿನಿಂದ ಅಕ್ರಮ ಮರಳು ಲಾರಿ ಹಿಡಿದರೂ ಪ್ರಕರಣ ಮಾತ್ರ ದಾಖಲಾಗದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಹೊರ ಜಿಲ್ಲೆ ,ರಾಜ್ಯಕ್ಕೆ ತೆರಳುವ ಟ್ರಕ್ ಗಳನ್ನು ಆಗಾಗ ಹಿಡಿಯುವ ಪೊಲೀಸರು ದಾಖಲಿಸಿದ ಪ್ರಕರಣ ಮಾತ್ರ ಅಲ್ಪದ್ದಾಗಿದೆ. ನಿಯಮ ಬಾಹಿರವಾಗಿ ಅಗತ್ಯ ಮಾನದಂಡಕ್ಕಿಂತ ಹೆಚ್ಚಿನ ಲೋಡ್ ಹಾಕುವ ಟ್ರಕ್ ಗಳು ದೊಡ್ಡ ದೊಡ್ಡ ಕಬ್ಬಿಣದ ಸರಳುಗಳನ್ನು ಅಡ್ಡಾದಿಡ್ಡಿ ತುಂಬಿ ಹೋಗುತ್ತವೆ ಆದ್ರೆ ಕ್ರಮಮಾತ್ರ ಇಲ್ಲ. ಈ ಹಿಂದೆ ಕುಮಟಾದಲ್ಲಿ ಹೀಗೆ ಬಸ್ ಗೆ ಅಪಘಾತವಾಗಿ ಸಾವು ಕಂಡ ನಿದರ್ಶನಗಳಿವೆ.
ಇನ್ನು ಹೇಳುತ್ತಾ ಹೋದರೇ ದೊಡ್ಡ ಪಟ್ಟಿ ದೊರೆಯುತ್ತದೆ.
ನಮಗೆ ಇವರು ಬ್ರಷ್ಟರು ಎಂದು ತೋರಿಸುವುದಕ್ಕಿಂತ ತಿದ್ದಿಕೊಂಡು ಬಡ ಜನರ ಶೋಷಣೆ ಮಾಡದೇ ನ್ಯಾಯ ಕೊಡಿಸಲಿ ಎಂಬುದಷ್ಟೇ ನಮ್ಮ ಉದ್ದೇಶ. ಹಣ ಗಳಿಸಲು ಹಲವು ದಾರಿಗಳಿವೆ ಆದರೇ ನೀರಿನ ಗುಳ್ಳೆಯಂತೆ ಯಾವಾಗ ಪ್ರಾಣ ಪಕ್ಷಿ ಹಾರಿಹೋಗುತ್ತೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಜನರನ್ನು ಅಯ್ಯೋ ಎನ್ನಿಸಿ ಪಾಪದ ಹಣ ಸೇರಿದರೂ ಮುಂದೊಂದು ದಿನ ಬಿಪಿ,ಶುಗರ್ ,ಕ್ಯಾನ್ಸರ್ ಬಂದು ವೈದ್ಯರಿಗೆ ಹಣ ಹಾಕೋದು ತಪ್ಪೋದಿಲ್ಲ. ಅದರ ಬದಲು ಜನರ ಬಾಯಲ್ಲಿ ಒಬ್ಬ ಒಳ್ಳೆ ಅಧಿಕಾರಿ ಎನಿಸಿಕೊಂಡು ಪ್ರೀತಿ ಗಳಿಸಿದ್ರೆ ಅದರ ಕದರ್ ಬೇರೆ . ಲಕ್ಷ್ಮಣ ರೇಖೆ ದಾಟಿ ಮಿತಿಮೀರಿದ್ದರಿಂದ ಒಂದಿಷ್ಟು ಬದಲಾವಣೆ ನಿರೀಕ್ಷೆಯಲ್ಲಿ ಈ ಸುದ್ದಿ ಹಾಕಲಾಗಿದೆ. ತಪ್ಪಾಯ್ತು ತಿದ್ದಿಕೊಳ್ತೀವಿ ಎಂದು ತಿದ್ದಿಕೊಂಡರೇ ನಮ್ಮ ಶ್ರಮ ಸಾರ್ಥಕ .






