BREAKING NEWS
Search

Sirsi:ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೇ ಕೋರಿಕೆ ಬರೆದ ವಿದ್ಯಾರ್ಥಿ!

86

ಕಾರವಾರ :- ದೇವರಲ್ಲಿ ಒಳಿತಿಗಾಗಿ ಹರಕೆ ಕಟ್ಟಿಕೊಳ್ಳುವುದು ಸಾಮಾನ್ಯ ಆದ್ರೆ ಉತ್ತರ ಕನ್ನಡದ ಶಿರಸಿಯೊಲ್ಲೊಬ್ಬ ಪಿ.ಯು.ಸಿ ವಿದ್ಯಾರ್ಥಿ ತನಗೆ ಉತ್ತಮ ಅಂಕ ನೀಡಿ ರ್ಯಾಂಕ್ ನಲ್ಲಿ ಉತ್ತೀರ್ಣ ಮಾಡಬೇಕು ಎಂದು ಕೋರಿಕೆ ಈಡೇರಿಕೆಗಾಗಿ ದೇವರ ಶಿರದಮೇಲೆಯೇ ಕೋರಿಕೆ ಬರೆದು ಪೊಲೀಸರ ಅಥಿತಿಯಾಗಿದ್ದಾನೆ. ಹೌದು ಪೆ.4 ರಂದು ಶಿರಸಿಯ ನರಬೈಲ್ ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಸ್ಥಾನದಲ್ಲಿ ಘಟನೆ ನಡೆದಿದ್ದು ಅಲ್ಲಿನ ಶಿವಲಿಂಗದ ಮೇಲೆ ಜೆ.ಇ 2024 ,2026 ಎಂಬ ಇಂಗ್ಲಿಷ್ ಅಕ್ಷರ ಬರೆದಿತ್ತು.ಈ ವಿರೋಪತೆಗೆಯನ್ನು ಪೂಜೆಗೆ ಆಗಮಿಸಿದ ದೇವಸ್ಥಾನ ಅರ್ಚಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವಸ್ಥಾನದ ಮುಂಭಾಗದಲ್ಲಿ ಇದ್ದ ಸಿಸಿ ಕ್ಯಾಮರಾ ತಪಾಸಣೆ ನಡೆಸಿದ್ರು.ಆದ್ರೆ ಮುಖ ಸಮರ್ಪಕವಾಗಿ ಕಂಡಿರದಿದ್ದರೂ ಕಾಲೇಜಿನ ಸಮವಸ್ತ್ರದ ಜಾಡು ಹಿಡಿದು ತನಿಖೆ ಕೈಗೊಂಡಾಗ ಕೆ.ಹೆಚ್. ಬಿ ಕಾಲೋನಿಯ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿ ಎಂದು ಪತ್ತೆಯಾಗಿದ್ದು ವಿಚಾರಣೆ ನಡೆಸಿದಾಗ ಈತ ಪಿಯುಸಿ ಮೊದಲ ವರ್ಷದಲ್ಲಿ ಶೇ. 98% ಅಂಕ ಪಡೆದು ರ್ಯಾಂಕ್ ನಲ್ಲಿ ಉತ್ತೀರ್ಣನಾಗಿದ್ದ. ದೇವರ ಮೇಲೆ ಅತೀವ ಭಕ್ತಿ ಹೊಂದಿದ್ದ ಈತ ಜೆ.ಇ ಪರೀಕ್ಷೆ ಕಟ್ಟಿದ್ದು ಫಲಿತಾಂಶದಲ್ಲಿ ಹೆಚ್ಚು ಅಂಕ ಬಾರದ ಕಾರಣ ಹೀಗೆ ಬರೆದಿದ್ದು ಬೆಳಕಿಗೆ ಬಂದಿದೆ.ಆರೋಪಿ ಅಪ್ರಾಪ್ತ ಬಾಲಕನಾದ ಕಾರಣ ಬಾಲಸ್ನೇಹಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ:-ಶಿರಸಿ ಸೋಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ವಿರೂಪ ಗೊಳಿಸಿದ ಕಿಡಿಗೇಡಿಗಳು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!