ಚಕ್ಕುಲಿ ಕಂಬಳದ ವಿಡಿಯೋ ನೋಡಿ:-
ಕಾರವಾರ :- ಗೌರಿ ಗಣೇಶ ಹಬ್ಬ ( Gowri Ganesha festival) ಬಂತು ಅಂದ್ರೆ ಸಾಕು ಗಣೇಶನ ನೈವೇದ್ಯಕ್ಕೆ ತರ ತರದ ಚಕ್ಕುಲಿಗಳು ತಯಾರಾಗುತ್ತದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತ್ರ ಗಣೇಶ ಚತುರ್ಥಿ ಮೊದಲೇ ತರ ತರದ ಚಕ್ಕುಲಿ ಮಾಡುವ ಸಿದ್ದತೆ ಜೋರಾಗಿರುತ್ತದೆ. ಅರೇ ಇಷ್ಟು ಬೇಗ ಚಕ್ಕುಲಿ ಮಾಡ್ತಾರಾ ಎಂದು ನೀವು ಕೇಳಬಹುದು.
ಇದನ್ನೂ ಓದಿ:-SIRSI| ನಕಲಿ ಬಂಗಾರ ತೋರಿಸಿ 9 ಲಕ್ಷ ದರೋಡೆ ಮಾಡಿದ ಕಳ್ಳರ ಬಂಧನ.
ಹೌದು ಶಿರಸಿ ಸುತ್ತಮುತ್ತಲಿನ ಕೆಲವೇ ಹಳ್ಳಿಗಳಲ್ಲಿ ರೂಢಿಯಲ್ಲಿರುವ ಅಪರೂಪದ ಕಲೆ ಎಂದ್ರೆ ಕೈ ಚಕ್ಕುಲಿ ಕಂಬಳ. ಕೈ ಚಕ್ಕುಲಿ ಕಂಬಳದಲ್ಲಿ ಯಾವುದೇ ಆಧುನಿಕ ಯಂತ್ರ ಬಳಸದೇ ಹಿಟ್ಟನ್ನು ಕೈಯಲ್ಲಿಯೇ ಹದಮಾಡಿ, ಕೈಯಲ್ಲೇ ಚಕ್ಕುಲಿ ಸುತ್ತುವ ಪದ್ಧತಿ ಇದು. ಈ ಕಲೆ ಶಿರಸಿ ಸುತ್ತಮುತ್ತಲಿನ ಕೆಲವೇ ಹಳ್ಳಿಗಳಲ್ಲಿ ಹಿಂದಿನಂದಲೂ ನಡೆದುಕೊಂಡು ಬಂದಿದ್ದು ಈಗನ ಪೀಳಿಗೆ ಸಹ ಮುಂದುವರೆಸಿಕೊಂಡು ಹೋಗುತ್ತಿದೆ.
ಶಿರಸಿಯ ಹೆಗಡೆಕಟ್ಟಾ, ಹೆಗ್ಗಾರು, ಕಲ್ಮನೆ, ಬಾಳೆಗದ್ದೆ ಈ ಭಾಗಗಳಲ್ಲಿ ಇನ್ನೂ ಕೈ ಚಕ್ಕುಲಿ ಕಂಬಳವೇ ರೂಢಿಯಲ್ಲಿದೆ.

ಈ ಚಕ್ಕುಲಿ ಬೇರೆ ಚಕ್ಕುಲಿಗಳಿಗಿಂತ ರುಚಿ ಹಾಗೂ ಬಾಳಿಕೆ ಜಾಸ್ತಿ.ತೆಂಗಿನ ಎಣ್ಣೆಯಲ್ಲಿಯೇ ಮಾಡುವ ಈ ಚಕ್ಕುಲಿ ಮೂರು ನಾಲ್ಕು ತಿಂಗಳುಗಳ ಕಾಲ ಇಡಬಹುದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನೂರಾರು ವಿವಿಧ ತಳಿಯ ಅಕ್ಕಿಗಳು ಬಂದರೂ ಕೈ ಚಕ್ಕುಲಿ ಕಂಬಳಕ್ಕೆ ಅತೀ ಹಳೆಯ ಕಾಲದ ಹೆಗ್ಗೆ, ಮುಳ್ಳರಿಯಾ, ಆಲೂರು ಸಣ್ಣ, ಮಟ್ಟಣಗಾ,ಪದ್ಮರೇಖಾ ಈ ರೀತಿಯ ಅಕ್ಕಿ ಗಳನ್ನೇ ಬಳಸೋದು ಇನ್ನೊಂದು ವಿಶೇಷ.

ಹಬ್ಬಕ್ಕೂ ಎರಡು ತಿಂಗಳ ಮೊದಲು ಮನೆಯಲ್ಲಿ ಬೆಳದ ಭತ್ತದ ಅಕ್ಕಿಯನ್ನು ತಾವೇ ಕುಟ್ಟಿ ಪುಡಿ ಮಾಡಿಸಿ ಚಕ್ಕುಲಿ ಮಾಡಲು ಸಿದ್ದ ಮಾಡಲಾಗುತ್ತದೆ.ಹೀಗೆ ಸಿದ್ದವಾದ ಚಕ್ಕುಲಿ ಹಿಟ್ಟನ್ನು ಹದವಾಗಿ ತೆಯಾರಿಸಿ ಕೈಯಲ್ಲೇ ಭತ್ತಿ ಹೊಯ್ದಂತೆ ಹೊಯ್ದು ತರ ತರದ ಚಕ್ಕುಲಿ ಮಾಡಲಾಗುತ್ತದೆ. ಹೀಗೆ ಶಿರಸಿಯಲ್ಲಿ ಹಲವು ಗ್ರಾಮದಲ್ಲಿ ಈ ರೀತಿಯ ವಿಶಿಷ್ಟ ಚಕ್ಕುಲಿ ಕಂಬಳ ಎನ್ನುವ ಆಚರಣೆ ಚಾಲ್ತಿಯಲ್ಲಿದ್ದು ಗ್ರಾಮದ ಪ್ರತಿ ಮನೆಯಲ್ಲಿ ಹತ್ತಿ ಹೊಯ್ದಂತೆ ಚಕ್ಕುಲಿಯನ್ನು ಹೊಯ್ದು ,ಸುತ್ತಿ ಚಕ್ಕಲಿ ಮಾಡಲಾಗುತ್ತದೆ. ಪ್ರತಿ ಮನೆಯಲ್ಲೂ ಸಹ ಈ ವಿಶಿಷ್ಟ ಚಕ್ಕುಲಿ ಮಾಡಲಾಗುತ್ತದೆ.
ಇದನ್ನೂ ಓದಿ:-SIRSI | 2024 ರವಿಶ್ವ ಸುಂದರಿ ಪಟ್ಟಕ್ಕೇರಿದ ಡಾ.ಶೃತಿ ಹೆಗಡೆ

ಹೀಗೆ ಮಾಡಿದ ಚಕ್ಕುಲಿಯನ್ನು ಮನೆಗೆ ಬಂದ ಅಥಿತಿಗಳಿಗೆ ಹಾಗೂ ಊರಿನವರಿಗೆ ಹಂಚಿ ಸಂತಸ ಪಡುವ ಮೂಲಕ ಸಹಬಾಳ್ವೆಯ ಸಂದೇಶ ಸಾರುತ್ತಾರೆ.
ಶಿರಸಿಯ ಹೆಗಡೆ ಕಟ್ಟದಲ್ಲಿ ನಡೆಯಿತು ಚಕ್ಕುಲಿ ಕಂಬಳ
ಶಿರಸಿಯ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದಲ್ಲಿ “ಕೈ ಚಕ್ಕುಲಿ ಕಂಬಳ” ಸ್ಪರ್ಧೆ ಆಯೋಜನೆ ಮಾಡಲಾಗಿತ್ತು ನೂರಾರು ನುರಿತ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೈಚಳಕ ತೋರಿಸಿದ್ರು. ಪ್ರತೀ ವರ್ಷ ಚೌತಿ ಸಂದರ್ಭದಲ್ಲಿ ಮಾಡುವ ಕೈ ಚಕ್ಕುಲಿ ಕಂಬಳಕ್ಕೆ ಇಂದಿನಿಂದ ಚಾಲನೆ ನೀಡಲಾಯಿತು.
ಕಂಬಳದಲ್ಲಿ ಚಕ್ಕುಲಿ ಸುತ್ತುವ ಸ್ಪರ್ಧೆ ಹಾಗೂ ತಿನ್ನುವ ಸ್ಪರ್ಧೆ ಯನ್ನು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದಿಂದ ಶನಿವಾರ ಆಯೋಜನೆ ಮಾಡಲಾಗಿತ್ತು. ಇದರ ಜೊತೆ ವಿವಿಧ ಬಗೆಯ ಚಕ್ಕುಲಿ ಪ್ರದರ್ಶನ ಹಾಗೂ ಮಾರಾಟ ಜೊತೆಗೆ ಆರತಿ ಕಟ್ಟು, ರಾಖಿ ಹಾಗೂ ಪುಸ್ತಕ ಸ್ಟಾಲ್ ಗಳು ಸಹ ಹೆಗಡೆಕಟ್ಟ ಸಹಕಾರ ಸಂಘದಲ್ಲಿ ಆಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ:-SIRSI| ತಪ್ಪು ಮಾಡಿದ್ದು ಮಗ-ಅಪ್ಪನಿಗೆ ಕೊಡ್ತು COURT ಶಿಕ್ಷೆ?
ಅನಾದಿಕಾಲದಿಂದಲೂ ರೂಢಿಯಲ್ಲಿರುವ ಕೈ ಚಕ್ಕುಲಿ ಕಂಬಳವನ್ನ ಈ ಭಾಗದ ಜನರು ಇಲ್ಲಿಯರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಕೆಲವರು ವಿದ್ಯಾಭ್ಯಾಸ ಕಾರಣದಿಂದಲೋ, ಅಥವಾ ಉದ್ಯೋಗದ ಕಾರಣದಿಂದ ಬೆಂಗಳೂರು ಇತರೆ ಹೊರ ಊರಿನತ್ತ ಮುಖ ಮಾಡುತ್ತಿದ್ದಾರೆ. ಅಂತವರಿಗೂ ಈ ಕಲೆಯನ್ನು ಕಲಿಸುತ್ತಿದ್ದು ಒಟ್ಟಾರೆ ನಮ್ಮ ಹಿರಿಯರ ಆಚರಣೆ, ಪದ್ಧತಿಗಳು ಮುಂದಿನ ತಲೆಮಾರಿಗೂ ತಲುಪಬೇಕು ಹಾಗೂ ರೂಢಿಯಲ್ಲಿರಬೇಕು ಎಂಬುದೇ ಇವರ ಆಶಯವಾಗಿದ್ದು ಈ ಮೂಲಕ ಪರಂಪರೆ ಆಚರಣೆ ಉಳಿಸುವ ಹಾಗೂ ಬೆಳಸುವ ಜೊತೆ ಸಹಬಾಳ್ವೆ ತತ್ವ ಸಾರುವ ಈ ಕಂಬಳ ಮಾದರಿ ಎನಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ಭೂ ಕುಸಿತದ ವಿಡಿಯೋ ನೋಡಿ:-






