Ankola Shree Jataka temple, the plant itself is prasada

ankola| ಈ ದೇವಸ್ಥಾನದಲ್ಲಿ ಗಿಡವೇ ಪ್ರಸಾದ!

74

ಕಾರವಾರ :- ದೇವಸ್ಥಾನ (temple) ದಲ್ಲಿ ಬರುವ ಭಕ್ತರಿಗೆ ತೀರ್ಥ ,ಪ್ರಸಾದ ನೀಡೋದು ಸಾಮಾನ್ಯ .ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ಗಿಡಗಳನ್ನು ನೀಡುವ ಮೂಲಕ ಹಸಿರು ಕ್ರಾಂತಿಗೆ (Green Revolution )ಹೊಸ ಅಡಿಪಾಯ ಹಾಕಿದೆ .

ಹೌದು ಉತ್ತರ ಕನ್ನಡ ಜಿಲ್ಲೆಯ (uttrakannada district )ಅಂಕೋಲ(ankola) ತಾಲೂಕಿನ ಬಿಳಿಹೊಂಯ್ಗಿ ಗ್ರಾಮದ ಶ್ರೀ ಜೈನಜಟಕ, ಶ್ರೀ ಮಹಾದೇವಿ, ಶ್ರೀ ನಾಗದೇವತೆ ಸನ್ನಿದಿಯಲ್ಲಿ. ಜೈನ ಸಂಪ್ರದಾಯದ ಈ ದೇವಸ್ಥಾನಕ್ಕೆ ಜೈನರು,ಮೀನುಗಾರರು,ಹಾಲಕ್ಕಿ ಜನಾಂಗ ಸೇರಿದಂತೆ ಹಲವರು ನಡೆದುಕೊಳ್ಳುತ್ತಾರೆ. ಪ್ರತಿ ವರ್ಷದ ಜೂನ್ ತಿಂಗಳಲ್ಲಿ ಉತ್ತಮ ಮಳೆ ಬೆಳಗಾಗಿ ಈ ಗ್ರಾಮದ ಜನರು ಈ ದೇವರಲ್ಲಿ ಸಸಿಗಳನ್ನು ಇಟ್ಟು ಬೇಡಿಕೊಳ್ಳುತ್ತಾರೆ.

ನಂತರ ಪ್ರಸಾದವಾಗಿ ಸಿಗುವ ಈ ಸಸಿಗಳನ್ನು ತಮ್ಮ ಮನೆಯಲ್ಲಿ ನೆಟ್ಟು ಪೋಷಿಸುವ ಮೂಲಕ ಈ ಪರಿಸರಕ್ಕೆ ಕೊಡಿಗೆ ನೀಡುತ್ತಾ ಬಂದಿದ್ದಾರೆ. ಈ ಬಾರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಊರಿನ ಜನರ ಸಹಕಾರದಲ್ಲಿ ನೆರವೇರಿಸಿದ್ದು ,ಹೋಮ ಹವನಗಳ ಜೊತೆ ಗಿಡಗಳನ್ನು ಸಹ ಇಟ್ಟು ಪೂಜೆ ಮಾಡುವ ಮೂಲಕ ಪರಿಸರ ಪ್ರೇಮ ಮೆರೆದರೆ ,ಬಂದ ಪುರೋಹಿತರಾದಿಯಾಗಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಗಿಡಗಳನ್ನು ನೀಡಿದ್ದು ಹೊಸ ಮುನ್ನುಡಿ ಬರದಿದ್ದಾರೆ.

ಇನ್ನು ಈ ಊರಿನಲ್ಲಿ ಮುಂಗಾರು ಪ್ರಾರಂಭದಲ್ಲಿ ಇಲ್ಲಿನ ಜಟಕ ದೇವರನ್ನು ಊರಿನ ಗದ್ದೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಮೂಲಕ ತಮ್ಮ ಹೊಲದಲ್ಲಿ ಉತ್ತಮ ಬೆಳೆಯ ಆಶಿರ್ವಾದ ಬೇಡುವ ಇಲ್ಲಿನ ಜನರು ,ದೇವರಿಗೆ ಕಾಣಿಕೆ ರೂಪದಲ್ಲಿ ಬೆಳೆದ ಬೆಳೆ ಜೊತೆ ಗಿಡವನ್ನು ಸಹ ನೀಡಿ ಕಾಣಿಕೆ ಅರ್ಪಿಸುತ್ತಾರೆ.

ಇನ್ನು ಪ್ರಸಾದ ರೂಪದಲ್ಲಿ ಗ್ರಾಮದ ಜನರಿಗೆ ,ಬರುವ ಭಕ್ತರಿಗೆ ಗಿಡಗಳನ್ನು ನೀಡುವ ಮೂಲಕ ಮನೆಯಲ್ಲಿ ಗಿಡಗಳನ್ನು ಬೆಳಸಬೇಕು ಎಂಬ ಉದ್ದೇಶ ಈ ದೇವಸ್ಥಾನದ ಆಡಳಿತಮಂಡಳಿಯದ್ದು. ಹೀಗಾಗಿ ಈ ಬಾರಿ ಒಂದೇ ದಿನದಲ್ಲಿ 1500 ಕ್ಕೂ ಹೆಚ್ಚು ಗಿಡಗಳನ್ನು ಬಂದ ಭಕ್ತರಿಗೆ ನೀಡಿದ್ದು ,ನೇರಲೆ,ನೆಲ್ಲಿ, ಸಂಪಿಗೆ,ಅಶೋಕ, ಹಲಸು ಹೀಗೆ ಹತ್ತು ಹಲವು ಜಾತಿಯ ಗಿಡಗಳನ್ನು ನೀಡಿದ್ದಾರೆ. ಈ ಕಾರ್ಯಕ್ಕೆ ಅರಣ್ಯ ಇಲಾಖೆಯವರು ಸಹ ಕೈಜೋಡಿಸಿ ಊರಿನ ಸುತ್ತಮುತ್ತಲೂ ಗಿಡಗಳನ್ನು ನೆಟ್ಟಿದ್ದು ಹಸಿರು ಕಾಂತ್ರಿಗೆ ಮುನ್ನುಡಿ ಬರೆದಿದ್ದಾರೆ.

ಇದನ್ನೂ ಓದಿ:-ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ 1.42 ಕೋಟಿ ಐ.ಟಿ ನೋಟೀಸ್ – ಮೇಲ್ಮನವಿ ಅಂಗೀಕಾರ

ಇಂದಿನ ಕಾಲದಲ್ಲಿ ದೇವಸ್ಥಾನಗಳು ಎಂದರೇ ದುಡ್ಡು ಮಾಡುವ ಕೇಂದ್ರ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತಿರುವಾಗಲೇ , ಈ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಗಿಡಗಳನ್ನು ನೀಡುವ ಮೂಲಕ ಮಾದರಿಯಾಗುತ್ತಿರುವುದು ನಿಜವಾಗಿಯೂ ಶ್ಲಾಘನೀಯ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!