ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್(congress) 3 ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ 17 ಅಭ್ಯರ್ಥಿಗಳು ಸೇರಿ 57 ಹುರಿಯಾಳುಗಳನ್ನು ಅಖೈರುಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ:-ಕಾಂಗ್ರೆಸ್ ನಾಯಕರು ಯಾರಿಗೆ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ- ಅನಂತಕುಮಾರ್ ಹೆಗಡೆ!
ಮೈಸೂರು-ಕೊಡಗು ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇನ್ನು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರೊ. ಎಂ.ವಿ.ರಾಜೀವ್ ಗೌಡ ಅವರನ್ನು ಪೈಪೋಟಿಗೆ ಇಳಿಸಿದೆ.
ಯಾವ ಲೋಕಸಭಾ ಕ್ಷೇತ್ರಕ್ಕೆ (Karnataka Loksabha constituency )ಯಾರ‍್ಯಾರು ಅಭ್ಯರ್ಥಿ
ಬೀದರ್ -ಸಾಗರ್ ಖಂಡ್ರೆ
ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್
ಬಾಗಲಕೋಟೆ – ಸಂಯುಕ್ತ ಪಾಟೀಲ್
ಉತ್ತರ ಕನ್ನಡ – ಅಂಜಲಿ ಲಿಂಬಾಳ್ಕರ್
ಚಿಕ್ಕೋಡಿ – ಪ್ರಿಯಾಂಕ ಜಾರಕಿಹೊಳಿ
ಕಲಬುರಗಿ – ರಾಧಾಕೃಷ್ಣ
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್
ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ
ದಕ್ಷಿಣ ಕನ್ನಡ – ಪದ್ಮರಾಜ್
ಬೆಂಗಳೂರು ಸೆಂಟ್ರಲ್ – ಮನ್ಸೂರ್ ಅಲಿ ಖಾನ್
ಚಿತ್ರದುಗ – ಚಂದ್ರಪ್ಪ
ಮೈಸೂರು – ಎಂ.ಲಕ್ಷ್ಮಣ್
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಧಾರವಾಡ – ವಿನೋದ್ ಅಸೂಟಿ
ಬೆಂಗಳೂರು ಉತ್ತರ – ರಾಜೀವ್ ಗೌಡ
ರಾಯಚೂರು – ಕುಮಾರ್ ನಾಯಕ್
ಕೊಪ್ಪಳ – ರಾಜಶೇಖರ್ ಹಿಟ್ನಾಳ್






