BREAKING NEWS
Search

ನನ್ನ ಹಣೆಯ ಬಿಂದಿಗೆ ,ಮಾಂಗಲ್ಯವೂ ಹಿಂದುತ್ವ- ಅಂಜಲಿ ನಿಂಬಾಳ್ಕರ್

99

ಶಿರಸಿ:- ಹಿಂದುತ್ವ ,ಹಿಂದುತ್ವದ ಸರ್ಟಿಫಿಕೇಟ್ ಹೇಳಲು ಯಾರೂ ಅಷ್ಟೊಂದು ದೊಡ್ಡವರಾಗಿಲ್ಲ, ನನ್ನ ಕೈ ನಲ್ಲಿರುವ ಓಂ ಮತ್ತು ತ್ರಿಶೂಲದ ಟ್ಯಾಟೂ ,ತಾಳಿ ,ಬಿಂದಿಗೆ ತೋರಿಸಿ ಇದೂ ಕೂಡ ಹಿಂದುತ್ವ ಎಂದ ಅಂಜಲಿ ನಿಂಬಾಳ್ಕರ್ ಬಿಜೆಪಿ ಗೆ ಟಕ್ಕರ್ ನೀಡಿದ್ದಾರೆ. ಇಂದು ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಹಿಂದುತ್ವ ,ಹಿಂದುತ್ವದ ಸರ್ಟಿಫಿಕೇಟ್ ಹೇಳಲು ಯಾರೂ ಅಷ್ಟೊಂದು ದೊಡ್ಡವರಾಗಿಲ್ಲ.

ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆ.ಶಿರಸಿ.

ಪಕ್ಷ ಜಿಲ್ಲೆಗೆ ಮಾಡಿದ ಅಭಿವೃದ್ಧಿ ,ಐದು ಗ್ಯಾರಂಟಿ ಮೇಲೆ ಚುನಾವಣೆ ಪ್ರಚಾರಕ್ಕೆ ಹೋಗುತ್ತೇವೆ. ಬಿಜೆಪಿಯವರು ಪರೇಶ್ ಮೇಸ್ತಾ ವಿಷಯದಲ್ಲಿ ಎಷ್ಟು ಗಲಾಟೆ ಮಾಡಿದರು,ಆವರ ತಾಯಿಗೆ ಯಾರಾದರೂ ಏನಾದ್ರು ಕೇಳಿದರಾ ಬಿಜೆಪಿಗರು?, ಪರೇಶ್ ಮೇಸ್ತಾ ತರ ಹುಡುಗರನ್ನು ಬೆಂಕಿ ಹಾಕಿಸಲು ಮುಂದೆ ಕಳುಹಿಸಿ ಇವರು ಹಿಂದೆ ಕುಳಿತು ತಮಾಷೆ ನೋಡಲಿಕ್ಕೆ ಬಿಜೆಪಿ ನಾಯಕರು ಕುಳಿತಿದ್ದಾರೆ.

*ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಕಾಪಿ ಮಾಡಿ ಮೋದಿ ಗ್ಯಾರಂಟಿ ಅನ್ನುತಿದ್ದಾರೆ.‌ಕಾಂಗ್ರೆಸ್ ನಲ್ಲಿ ಬಿಜೆಪಿ ತರ ಅಸಮಧಾನ ಇಲ್ಲ, ಎಲ್ಲಾ ಕುಟುಂಬದ ತರ ಬದುಕುತಿದ್ದೇವೆ.ಕುಟುಂಬದಲ್ಲಿ ಗಂಡ ಹೆಂಡತಿ ಜಗಳ ಇರುತ್ತೆ ಹಾಗಂತ ಡೈವರ್ಸ ಗೆ ಕಾರಣ ಆಗುವುದಿಲ್ಲ,
ಕುಟುಂಬದಲ್ಲಿ ಅಪ್ಪ,ಅಮ್ಮ,ಮಗಳದ್ದು ಒಂದೇ ಇರುತ್ತೆ ಅಂತ ಹೇಳಲು ಆಗೋಲ್ಲ..ಕೈನ ಬೆರಳು ಎಲ್ಲಾ ಒಂದೇ ಇಲ್ಲ ಆದ್ರಕೂಡ ಒಟ್ಟಿಗೆ ಇವೆ. ನಾವು ಕೂಡ ಒಟ್ಟಾಗಿದ್ದೇವೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಒಟ್ಟಾದ ನಾಯಕರು-ಶಿರಸಿಯಲ್ಲಿ ಸಭೆ.

ಇಂದು ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯನ್ನು ಶಿರಸಿ ತಾಲೂಕಿನ ಹುಸರಿಯ ಪಾಂಡುರಂಗ ಸಭಾಭವನದಲ್ಲಿ ನಡೆಸಲಾಯಿತು. ಹಿರಿಯ ನಾಯಕ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ,ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಕಾರವಾರದ ಶಾಸಕ ಸತೀಶ್ ಸೈಲ್ , ಶಿರಸಿ ಶಾಸಕ ಭೀಮಣ್ಣ ನಾಯ್ಕ , ಜಿಲ್ಲಾಧ್ಯಕ್ಷ ಸಾಯಿಗಾಂವಕ್ಕರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು,ಬೂತ್ ಮಟ್ಟದ ಸದಸ್ಯರು ಭಾಗಿಯಾಗಿದ್ದರು.

ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ರವರನ್ನು ಬೆಂಬಲಿಸಿ ಗೆಲ್ಲಿಸುವ ನಿರ್ಧಾರವನ್ನು ಶಾಸಕರು ಹಾಗೂ ಮುಖಂಡರು ಕೈಗೊಂಡರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!