ಮೂಲಸೌಕರ್ಯ,ಸಿಬ್ಬಂದಿ ನೇಮಕ ಕೊರತೆ ಕಾರವಾರದ ಮೆಡಿಕಲ್ ಕಾಲೇಜಿಗೆ ದಂಡ ವಿಧಿಸಿದ NMC

49

ಕಾರವಾರ:- ಮೂಲಭೂತ ಸೌಕರ್ಯ ಕೊರತೆ ಸಿಬ್ಬಂದಿ ಕೊರತೆ, ದಾಖಲೆಗಳನ್ನು ಸಮರ್ಕ ನಿರ್ವಹಣೆ ಕೊರತೆ ಹಿನ್ನಲೆ ಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾರವಾರದ KRIMS ವೈದ್ಯಕೀಯ ಕಾಲೇಜಿಗೆ ಮೂರು ಲಕ್ಷ ದಂಡ ವಿಧಿಸಿದೆ.

ರಾಜ್ಯದಲ್ಲಿ ಒಟ್ಟು 27 ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ( National Medical Council) ದಂಡ ವಿಧಿಸಿದೆ.

ಕಾರವಾರದ KRIMS ಈ ಹಿಂದೆ ಸಹ ಸಿಬ್ಬಂದಿ ನೇಮಕ ಸೇರಿದಂತೆ ಬ್ರಷ್ಟಾಚಾರದ ವಿಷಯದಲ್ಲಿ ಲೋಕಾಯುಕ್ತ ತನಿಖೆ ಎದುರಿಸುತ್ತಿದೆ.

ಈ ಹಿಂದೆ ಹಾಸ್ಟೆಲ್ ಗಳ ಸೂಕ್ತ ವ್ಯವಸ್ಥೆ ಕಲ್ಪಸದ ಹಿನ್ನಲೆ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದಲ್ಲದೇ ಡೀನ್ ಗಜಾನನ ನಾಯ್ಕ ನೇಮಕವೂ ನಿಯಮ ಬಾಹಿರ ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿಗೆ NMC ಭೇಟಿನೀಡಿ ನಂತರ ದಂಡ ವಿಧಿಸಿದೆ. ರಾಜ್ಯದಲ್ಲಿ ಒಟ್ಟು 27 ಮೆಡಿಕಲ್ ಕಾಲೇಜಿಗೆ ಎರಡು ಲಕ್ಷದಿಂದ 15 ಲಕ್ಷದ ವರೆಗೆ ದಂಡ ವಿಧಿಸಲಾಗಿದೆ. ಇವುಗಳಲ್ಲಿ ಐದು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಗುರಿಷ್ಟ 15 ಲಕ್ಷದಂಡ ವಿಧಿಸಲಾಗಿದೆ.

ದಂಡ ವಿಧಿಸಿದ ಪ್ರಮುಖ ಮೆಡಿಕಲ್ ಕಾಲೇಜುಗಳ ವಿವರ:-

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು,ಚಿತ್ರದುರ್ಗ ಮೆಡಿಕಲ್ ಕಾಲೇಜ್, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜ್,MIMS ಮಂಡ್ಯ, YIMS ಯಾದಗಿರಿ,KRIMS ಕಾರವಾರ,MMCRIಮೈಸೂರು ,GIMS ಗುಲ್ಬರ್ಗ, SIMS ಶಿವಮೊಗ್ಗ, ಕೊಡಗು ಮೆಡಿಕಲ್‌ ಕಾಲೇಜು,CIMS ಚಾಮರಾಜನಗರ, KIMS ಹುಬ್ಬಳ್ಳಿ ವೈದ್ಯಕೀಯ ಸರ್ಕಾರಿ ಕಾಲೇಜುಗಳು ಸೇರಿದ್ದು ಖಾಸಗಿ ವೈದ್ಯಕೀಯ ಕಾಲೇಜುಗಳಿಗೂ ದಂಡ ವಿಧಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!