ಹೊನ್ನಾವರದಲ್ಲಿ ಗರಿ ಗೆದರಿದ ಕೋಳಿ ಅಂಕ- ನಿಷೇಧದ ನಡುವೆ ಲಕ್ಷಾಂತರ ರುಪಾಯಿ ವಹಿವಾಟು!

230

ಕಾರವಾರ:- ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ (honnavara) ರಾಜಾ ರೋಷವಾಗಿ ಅಕ್ರಮ ಕೋಳಿ ಅಂಕ ಹಾಗೂ ಬೆಟ್ಟಿಂಗ್ ದಂಧೆನಡೆಯುತಿದ್ದು ಸಾವಿರಾರು ಜನ ಕೋಳಿ ಪಡೆಯ ಮೋಜು ಮಸ್ತಿಯಲ್ಲಿ ನಿರತರಾಗುವ ಜೊತೆ ಸಾವಿರಾರು ರುಪಾಯಿ ಕೋಳಿ ಜೂಜಿಗೆ ಕಟ್ಟಿ ಜೂಜು ಆಡುತಿದ್ದು ಪಕ್ಷಿ ಪ್ರಿಯರು ವಿರೋಧ ವ್ಯಕ್ತಪಡಿಸಿದ್ಧಾರೆ‌

ಹೊನ್ನಾವರದ ಕರ್ಕಿ(karki) ಬಳಿಯ ಮೂಡುಗಣಪತಿ ದೇವಸ್ಥಾನ ಪಕ್ಕದ ಗುಡ್ಡದ ಮೇಲೆ ಭಾನುವಾರ ಕೋಳಿ ಜೂಜಾಟ (koli anka) ನಡೆದಿದ್ದು ನಿಷೇಧಿತ ಅಕ್ರಮ ಜೂಜಾಟದಲ್ಲಿ ನೂರಾರು ಜನರು ಭಾಗಿಯಾಗಿದ್ದರು.

ಇದನ್ನೂ ಓದಿ:- ಸಂಸದ ಅನಂತ್ ಕುಮಾರ್ ಹೆಗೆಡೆಗೆ ಹೈಕೋರ್ಟ್ ನಿಂದ ಬುದ್ದಿವಾದ! ಏನಿದು ಪ್ರಕರಣ

ಪ್ರತಿ ದಿನ ಹೊನ್ನಾವರ ,ಕುಮಟಾ ಭಾಗದಲ್ಲಿ ಕೋಳಿ ಜೂಜಾಟ ನಡೆಯುತಿದ್ದು ಲಕ್ಷಾಂತರ ರುಪಾಯಿ ಅಕ್ರಮ ವಹಿವಾಟು ನಡೆಯುತ್ತಿದೆ.

ಕೋಳಿ ಜೂಜಾಟ -ಪೊಲೀಸರ ಮೌನ?

ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ ,ಭಟ್ಕಳ ಭಾಗದಲ್ಲಿ ನಿರಂತರ ಕೋಳಿ ಜೂಜಾಟ ನಡೆಯುತ್ತದೆ. ಹಿಂಸಾತ್ಮಕ ರೀತಿಯಲ್ಲಿ ನಡೆಯುವ ಈ ಜೂಜಾಟದಲ್ಲಿ ಕೋಳಿಗಳಿಗೆ ಸಾವಿರಾರು ರುಪಾಯಿ ಬೆ‍ಟ್ಟಿಂಗ್ ಮಾಡಲಾಗುತ್ತದೆ. ಒಂದೇ ದಿನದಲ್ಲಿ ಲಕ್ಷಾಂತರ ರುಪಾಯಿ ವಹಿವಾಟು ಸಹ ನಡೆಯುತ್ತದೆ.

ಈ ಕುರಿತು ಹೊನ್ನಾವರ ಪೊಲೀಸರಿಗೆ ಮಾಹಿತಿ ಇದ್ರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪಕ್ಷಿ ಪ್ರಿಯರ ಆರೋಪ.

ಇತ್ತೀಚೆಗೆ ಹೊನ್ನಾವರ ಭಾಗದಲ್ಲಿ ನಿರಂತರ ಕೋಳಿ (ಕೋಳಿಪಡೆ )ಜೂಜಾಟ ನಡೆಯುತ್ತಲೇ ಇದೆ.
ರಾಷ್ಟ್ರೀಯ ಪರಿಸರ ಒಕ್ಕೂಟ ಕೋಳಿ ಅಂಕದಿಂದ ಆಗುತ್ತಿರುವ ಪರಿಣಾಮಗಳ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ, ಕೋಳಿ ಅಂಕವು ಪ್ರಾಣಿಹಿಂಸೆ ತಡೆ ಕಾಯಿದೆ 1960 ಕಲಂ 11ರ ಪ್ರಕಾರ, ಅಪರಾಧ. ಈ ಕಾಯಿದೆಯನ್ನು ಎಲ್ಲ ಠಾಣೆಗಳ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಆದರೇ ಕರಾವಳಿ ಭಾಗದಲ್ಲಿ ಮಾತ್ರ ನಿರ್ಬಂಧ ಇದ್ರೂ ಕೋಳಿ ಅಂಕ ಅಥವಾ ಕೋಳಿಪಡೆ ಎಂದು ಕರೆಯುವ ಈ ಜೂಜಾಟ ನಿರಂತರ ನಡೆಯುತ್ತಲಿದೆ.

ಹಬ್ಬ ಹರಿದಿನಗಳು,ಜಾತ್ರೆಗಳು ಬಂದಾಗ ಈ ಜೂಜು ಗರಿಗೆದರುತ್ತವೆ. ಪೊಲೀಸರಿಗೆ ಮಾಹಿತಿ ನೀ

ಡಿದ್ರೂ ಕ್ರಮ ಕೈಗೊಳ್ಳದೇ ಅಕ್ರಮ ಚಟುವಟಿಕೆಗೆ ಬೆಂಬಲ ನೀಡುತ್ತಿರುವ ಆರೋಪ ಕೇಳಿಬಂದಿದ್ದು ಪೊಲೀಸರು ಈ ಜೂಜಾಟವನ್ನು ಬಂದ್ ಮಾಡಿಸಲು ಪ್ರಾಣಿ ,ಪಕ್ಷಿ ಪ್ರಿಯರು ಒತ್ತಾಯಿಸಿದ್ದಾರೆ‌




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!