Shirur ಭೂ ಕುಸಿತದಲ್ಲಿ ಮಡಿದ ಜಗನ್ನಾಥ್ ಪುತ್ರಿಗೆ ಉದ್ಯೋಗದ ಭರವಸೆ ನೀಡಿ ಕೈಕೊಟ್ಟ ಜಿಲ್ಲಾಡಳಿತ!

Shiruru landslide incident Jagannath family statement Shiruru landslide incident Jagannath family statement

Shirur Landslide News :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ(Ankola) ತಾಲೂಕಿನ ಶಿರೂರು ಭೂ ಕುಸಿತವಾಗಿ ಒಂದು ತಿಂಗಳುಗಳು ಕಳೆದಿದೆ.

ಶಿರೂರಿನ ಭೂಕುಸಿತ ಘಟನೆಯಲ್ಲಿ 11 ಜನ ಅಸುನೀಗಿದ್ದಾರೆ.ಇದರಲ್ಲಿ ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ , ಕೇರಳ ಮೂಲದ ಅರ್ಜುನ್ ಶವ ದೊರಕಬೇಕಿದೆ.

ಆದರೇ ಶಿರೂರಿನ ಜಗನ್ನಾಥ್ ಕುಟುಂಬದ ಇಬ್ಬರು ಮಕ್ಕಳಿಗೆ ಜಿಲ್ಲಾಡಳಿತ ಗುತ್ತಿಗೆ ಆಧಾರದಲ್ಲಿ ಕುಮಟಾ ಅಥವಾ ಅಂಕೋಲ ತಹಶಿಲ್ದಾರ ಕಚೇರಿಯಲ್ಲಿ ಕೆಲಸ ನೀಡುವ ಭರವಸೆ ನೀಡಲಾಗಿತ್ತು . ಇದಲ್ಲದೇ ಕೇಂದ್ರ ಸಚಿವ ಕುಮಾರಸ್ವಾಮಿ ರವರು ಸಹ ಶಿರೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲಸ ಕೊಡಿಸುವ ಆಶ್ವಾಸನೆ ನೀಡಿದ್ದರು.

Advertisement

ಕೆಲಸ ಕೊಡದೇ ಕೈಕೊಟ್ಟ ಜಿಲ್ಲಾಡಳಿತ!

ಜಗನ್ನಾಥ್ ಪುತ್ರಿ ಪಲ್ಲವಿ ಹೇಳಿಕೆ.


ಜಗನ್ನಾಥ್ ರವರ ಮಗಳು ಪಲ್ಲವಿ ರವರ ಬಯೋಡಾಟ ವನ್ನು ಕುಮಟಾ ಎಸಿ ಕಲ್ಯಾಣಿ ಕಾಂಬ್ಳೆ ಪಡೆದುಕೊಂಡಿದ್ದರು. ಆದರೇ ಕೆಲಸದ ಬಗ್ಗೆ (Job) ಏನೂ ಹೇಳದ ಕಾರಣ ಪಲ್ಲವಿ ಸಹೋದರ ಕುಮಟಾ ಎಸಿ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ.

ಆಗ ಕುಮಟಾ ಎಸಿ ಕಲ್ಯಾಣಿ ಕಾಂಬ್ಳೆರವರು ಈಗ ಯಾವುದೇ ಕೆಲಸ ಇಲ್ಲ ಮುಂದೆ ನೋಡೋಣ ಎಂದು ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಜಗನ್ನಾಥ್ ನಾಯ್ಕ ಪುತ್ರಿ ಪಲ್ಲವಿ ಕೆಲಸ ಕೊಡುವುದಾಗಿ ಹೇಳಿದ್ದರು ಆದರೇ ಅಲ್ಲಿಗೆ ಹೋದರೇ ಯಾವ ಕೆಲಸ ಕಾಲಿ ಇಲ್ಲ ಎಂದು ಹೇಳಿ ಕಳಿಸಿದ್ದಾರೆ. ಶವ ಸಿಗದ ಕಾರಣ ಪರಿಹಾರ ಸಹ ಸಿಕ್ಕಿಲ್ಲ. ತಂದೆಯವರ ಯಾವ ವಸ್ತುಗಳು ಸಿಕ್ರಿದ್ರೂ ತೊಂದರೆಯಿಲ್ಲ, ಸಿಕ್ಕರೆ ಸಾಕು ಮುಂದಿನ ಕಾರ್ಯ ಮಾಡಿಕೊಳ್ಳುತ್ತೇವೆ ಎಂದು ನೋವು ತೋಡಿಕೊಂಡಿದ್ದಾರೆ.

ಕೇಂದ್ರ ಸಚಿವರ ಆಶ್ವಾಸನೆ ಈಡೇರುತ್ತಾ?

ಶಿರೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿರವರು ಸಹ ಉದ್ಯೋಗ ಕೊಡಿಸುವ ಆಶ್ವಾಸನೆ ನೀಡಿದ್ದು ಸ್ಥಳೀಯ ಮುಖಂಡ ಸೂರಜ್ ಸೋನಿ ರವರಿಗೆ ಈ ಕುರಿತು ದಾಖಲೆ ಸಂಗ್ರಹಿಸಿ ನೀಡುವಂತೆ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರಕಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement