Sagar | ಬೆಂಬಲಿಗರ ಅಡ್ಡಕ್ಕೆ ದಾಳಿ -ತಹಸೀಲ್ದಾರ್ ಗೆ ಬೆದರಿಕೆ ಹಾಕಿದ ಶಾಸಕ ಬೇಳೂರು ಗೋಪಾಲಕೃಷ್ಣ.
ವರದಿ:-ರವಿ ಸಾಗರ
ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಸಾಗರದ (sagar)ತಹಶೀಲ್ದಾರ್ ಕಲ್ಲು ಕೋರೆ ,ಅಕ್ರಮ ಮರಳು ಸಾಗಾಟ , ಜಾಗ ಒತ್ತುವರಿ ಸಂಬಂಧ ದಾಳಿ ನಡೆಸಿ ಕ್ರಮ ಕೈಗೊಂಡಿದ್ದಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಗರಂ ಆಗಿದ್ದಾರೆ. ತಮ್ಮ ಬೆಂಬಲಿಗರ ಅಕ್ರಮಗಳನ್ನ ಮುಟ್ಟಿದ್ದಕ್ಕೆ ಸಿಟ್ಟಿಗೆದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಸಾಗರದಲ್ಲಿ ನಡೆದ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ತಹಶೀಲ್ದಾರ್ ಡಾ.ಪ್ರತಿಭಾರವರಿಗೆ ವರ್ಗಾವಣೆ ಮಾಡುವ ಬೆದರಿಕೆ ಹಾಕಿದರು.
ನೀವು ಎಲ್ಲೇ ದಾಳಿ ನಡೆಸಿದರೂ ನನ್ನ ಗಮನಕ್ಕೆ ಬರಬೇಕು , ನಾವು ಸ್ಥಳೀಯ ಮುಖಂಡರಿಗೆ,ನಮ್ಮವರಿಗೆ ಕೆಲವು ಕಡೆ ವ್ಯವಸ್ತೆ ಮಾಡಿರುತ್ತೇವೆ. ನೀವು ಮೀಡಿಯಾದೊಂದಿಗೆ ಹೋಗಿ ದಾಳಿ ನಡೆಸುವ ಅವಷ್ಯಕತೆ ಏನಿತ್ತು. ನಾನು ಹೇಳಿದಂಗೆ ಕೇಳಿದ್ರೆ ಇಲ್ಲಿ ಇರಿ. ಇಲ್ಲದಿದ್ರೆ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಈಮೂಲಕ ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಯಾವರೀತಿ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿ ಎನ್ನುವಂತಿದೆ.
ಕೆರೆ ವಿರೂಪಗೊಳಿಸಿದ ಹಾಗೂ ಒತ್ತುವರಿ ದೂರು ಹಿನ್ನೆಲೆ – ಸಾಗರ ತಹಶೀಲ್ದಾರ್ ರಿಂದ ಸ್ಥಳ ಪರಿಶೀಲನೆ.
ಸಾಗರ ತಾಲೂಕು ಆನಂದಪುರ ಹೋಬಳಿ ಹೊನ್ನೆಸರ ಗ್ರಾಮದ ವಿರೂಪಾಕ್ಷ ಕೆರೆ ಅಂಗಳಕ್ಕೆ ತಹಶೀಲ್ದಾರ್ ಡಾ. ಪ್ರತಿಭಾ ಭೇಟಿ ನೀಡಿ ಪರಿಶೀಲಿಸಿದರು. ಪುರಾತನ ಕೆರೆಯುನ್ನ ಪುನರುಜ್ಜೀವನದ ಹೆಸರಿನಲ್ಲಿ ವಿರೂಪ ಆರೋಪ ಹಾಗೂ ಒತ್ತುವರಿ ತೆರವಿಗೆ ಗ್ರಾಮಸ್ಥರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸಾಗರ ತಹಶೀಲ್ದಾರ್ ಸ್ಥಳ ಪರಿಶೀಲಿಸಿದರು.

ನಕ್ಷೆಯಲ್ಲಿನ ಸರ್ಕಾರಿ ವಿರೂಪಾಕ್ಷ ಕೆರೆಯನ್ನು (ಸರ್ವೇ ನಂಬರ್ 53) ಪುನಶ್ಚೇತನ ಹೆಸರಿನಲ್ಲಿ ವಿರೂಪ ಗೊಳಿಸಲಾಗಿದೆ. ಕೆರೆ ಕೋಡಿಯ ಮೇಲೆ ಕಬ್ಬಿಣದ ಶೇಡ್ ನಿರ್ಮಿಸಲಾಗಿದೆ. ಕೆರೆ ತೂಬನ್ನು ಕೆರೆಗೆ ತಳ್ಳಲಾಗಿದೆ. ಹಾಗೆಯೇ ತೂಬಿನ ನೀರು ಕೆಳಗಿನ ಜಮೀನಿಗೆ ಸಂಪರ್ಕ ಕಲ್ಪಿಸಲು ಇರುವ ಚರಂಡಿಯನ್ನು ಮುಚ್ಚಲಾಗಿದೆ. ಇದರಿಂದ ಕೆರೆ ಕೆಳಗಿನ ರೈತರ ಜಮೀನಿಗೆ ಬೇಸಿಗೆಯಲ್ಲಿ ನೀರಿಲ್ಲದಂತೆ ಆಗಿದೆ.
ರೈತರಿಗೆ ಹಾಗೂ ಜಾನುವಾರುಗಳಿಗೆ ಜೀವನಾಡಿ ಕೆರೆಗೆ ಸಂಪರ್ಕವಾಗಿದ್ದ ಸರ್ಕಾರಿ ಜಾಗದಲ್ಲಿ ಮಣ್ಣು ಅಗೆದು ತೆಗೆದು ಅವೈಜ್ಞಾನಿಕ ಧರೆ ನಿರ್ಮಿಸಲಾಗಿದೆ. ಇದರಿಂದ ಕಾಡುಪ್ರಾಣಿಗಳು ನೀರು ಕುಡಿಯಲು ಕೆರೆಗೆ ಬರುವ ದಾರಿ ಕಡಿತವಾಗಿದೆ. ಕೆರೆ ಸುತ್ತಮುತ್ತಲೂ ಇದ್ದಿದ್ದ ಅನಾದಿಕಾಲದ ಅಗಳ ಮುಚ್ಚಲಾಗಿದೆ. ಇದರಿಂದ ಮಳೆಗಾಲದ ಇಡೀ ಬೆಟ್ಟದ ನೀರು ಕೆರೆ ಅಂಗಳಕ್ಕೆ ನುಗ್ಗಿ ರೈತರ ಜಮೀನಿಗೆ ಲಕ್ಷಾಂತರ ಹಾನಿ ಆಗಿದೆ.
ಇದನ್ನೂ ಓದಿ:-Sagar | ಮರಳುಲಾರಿ ಡಿಕ್ಕಿ ಯುವತಿ ಸಾವು -ಲಾರಿ ಚಾಲಕ ಪರಾರಿ.
ಸರ್ಕಾರಿ ಅನುದಾನ ಹಾಗೂ ದಾನಿಗಳ ನೆರವಿನಿಂದ ನಡೆಸಿರುವ ಕಾಮಗಾರಿಯಲ್ಲಿ ಕೆರೆಯ ಮೂಲ ಸ್ವರೂಪವನ್ನೇ ನಾಶ ಮಾಡಲಾಗಿದೆ. JCB ಯಂತ್ರಗಳಿಂದ ಕೆರೆಯ ಏರಿಯನ್ನು ಅಗೆದು, ಪಿಚ್ಚೆ ಕಲ್ಲುಗಳನ್ನು ತೆಗೆದು, ವೈಜ್ಞಾನಿಕ ತಳಹದಿ ಇಲ್ಲದೆ ಕಾಮಗಾರಿ ನಡೆಸಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಈ ಕಾಮಗಾರಿಗೆ ಇಲಾಖೆಯ ತಾಂತ್ರಿಕ ಅನುಮತಿ ಇದೆಯೇ? DPR ನಲ್ಲಿ ಏನಿದೆ? ಎಷ್ಟು ಹಣ ಬಿಡುಗಡೆಯಾಗಿದೆ? ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಪುರಾತನ ಕೆರೆಗಳ ಸಂರಕ್ಷಣೆ ನಿಯಮದ ಪ್ರಕಾರ ಕೆಲಸ ನಡೆಯಬೇಕು, ಆದರೆ ಇಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬುದು ಗ್ರಾಮಸ್ಥರ ದೂರು.ಅಷ್ಟೇ ಅಲ್ಲದೆ, ನಿಯಮಾನುಸಾರ ಕೆರೆ ಅಚ್ಚುಕಟ್ಟುದಾರರು ಕೆರೆ ಸಮಿತಿಯಲ್ಲಿ ಸದಸ್ಯರಿರಬೇಕು. ಆದರೆ ಕೆರೆಗೆ ಸಂಬಂಧವೇ ಇಲ್ಲದ ವ್ಯಕ್ತಿಗಳಿಂದ ಕೆರೆ ಸಮಿತಿ ರಚಿಸಿ ಕೆರೆ ಪುನಶ್ಚೇತನ ಹಾಗೂ ಕೆರೆ ಅಂಗಳದಲ್ಲಿ ದೇವಸ್ಥಾನ ನಿರ್ಮಾಣದ ಕಾರ್ಯಪ್ರಾರಂಭವಾಗಿದೆ.
ಕೆರೆ ಉಸ್ತುವಾರಿಯನ್ನು ಹೆಗ್ಗೋಡಿನ ಸಂಸ್ಥೆಯೊಂದು ನಡೆಸ ಬಹುದು ಎಂದು ನೋಂದಾವಣೆ ಆಗದ ಕೆರೆ ಸಮಿತಿ ನಿರ್ಧರಿಸಿದೆ. ಭವಿಷ್ಯದಲ್ಲಿ ವಿರೂಪಾಕ್ಷ ಕೆರೆ ಇತ್ತು ಎಂಬುದನ್ನೇ ಮರೆ ಮಾಚುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಕೆರೆ ಏರಿಯನ್ನೂ ಅಗೆದು ಟ್ರೆಂಚ್ ನಿರ್ಮಿಸಿ ಪೈಪ್ಲೈನ್ ಮಾಡಿದ್ದಾರೆ.
ಅದರ ಮತ್ತೊಂದು ತುದಿಯನ್ನು ಕೆರೆ ಪಕ್ಕದ ತಮ್ಮ ಜಮೀನಿನ ಬಾವಿಗೆ ನೀರು ತುಂಬಿಸಲು ವ್ಯವಸ್ಥೆ ಮಾಡಿದ್ದಾರೆ. ಗ್ರಾಮಸ್ಥರ ದೂರಿನ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಗಮನಿಸಿದರೆ ಈ ಕೆರೆ ವಿರೂಪ ಗೊಳಿಸುವ ಕೃತ್ಯಕ್ಕೆ ಸ್ಥಳೀಯ ಅಧಿಕಾರಿಗಳ ಬೆಂಬಲವೂ ಇದೆ ಎಂದು ಸ್ಥಳೀಯರು ಆರೋಪಿಸಿದರು.
ಕಳೆದ ನಾಲ್ಕು ವರ್ಷದಿಂದ ಸ್ಥಳೀಯ ಆಡಳಿತ ಹಾಗೂ ಸರ್ಕಾರಕ್ಕೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದುವರೆಗೂ ಕ್ರಮ ಕೈಗೊಳ್ಳದೆ ಇರುವುದು ಗಮನಿಸಿದರೆ ಈ ಕೃತ್ಯದ ಹಿಂದಿರುವ ಶಕ್ತಿ ಯಾವುದು ಎಂಬುದು ಗ್ರಾಮಸ್ಥರ ಪ್ರಶ್ನೆ.
ತಹಶೀಲ್ದಾರ್ ಭೇಟಿ ಮತ್ತು ಪರಿಶೀಲನ ವೇಳೆ ವಾಸ್ತವ ಅಂಶ ಗಮನಕ್ಕೆ ತರುವಲ್ಲಿ ಗ್ರಾಮಸ್ಥರು ಸಫಲರಾಗಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಕ್ರಮಕೈಗೊಳ್ಳದೆ ಸಬೂಬು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಎಚ್ಚರಿಸಿದ್ದಾರೆ.
ಸಾಗರ ತಹಶೀಲ್ದಾರ್ ಡಾ. ಪ್ರತಿಭಾ, ಗ್ರಾಮಸ್ಥರ ದೂರುಗಳಿಗೆ ಸ್ಥಳದಲ್ಲೇ ಸ್ಪಂದಿಸಿದರು. ಪಿಡಿಒ ಹಾಗೂ ಗ್ರಾಮಲೆಕ್ಕಿಗರು ತಕ್ಷಣ ಈ ಬಗ್ಗೆ ಕಾರ್ಯಪ್ರವೃತ್ತರಾಗಲು ಸ್ಥಳದಲ್ಲೇ ಸೂಚಿಸಿದರು. ಅಲ್ಲದೆ ಪುರಾತನ ಕೆರೆ ಸಂರಕ್ಷಣೆಗೆ ಸರ್ಕಾರವೂ ಬದ್ಧ ವಾಗಿದೆ ಎಂದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಧಿಕಾರಿ ವರ್ಗ
ಯಾವುದೇ ಆಸೆ, ಆಕಾಂಕ್ಷೆ, ಒತ್ತಡಕ್ಕೂ ಮಣಿಯದೆ ಕೆರೆ ಸಂರಕ್ಷಣೆಗೆ ಧೈರ್ಯ ಹಾಗೂ ಪ್ರಾಮಾಣಿಕವಾಗಿ ಅಧಿಕಾರಿಗಳು ಮುಂದಾಗಲಿ ಎಂಬುದು ಸಾರ್ವಜನಿಕರ ಆಶಯ.ತಹಶೀಲ್ದಾರ್ ಭೇಟಿಯ ವೇಳೆ ಗ್ರಾಮಸ್ಥರು, ಗ್ರಾಮ ಲೆಕ್ಕಿಗರಾದ ಭವ್ಯ ಕೆ. ಆರ್. ಹಾಗೂ ಸಹಾಯಕ ಮಂಜಪ್ಪ ಇದ್ದರು.
