ಕಾರವಾರ :- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿರುವ 2023-24ನೇ ಸಾಲಿನ ಪೂರಕ ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆ ಪಾಲಿಗೆ ನಿರೀಕ್ಷೆಗೆ ಹೇಳಿಕೊಳ್ಳುವ ಲಾಭವಾಗದಿದ್ದರೂ ಮೀನುಗಾರಿಕಾ ವಲಯಕ್ಕೆ ಹಾಗೂ ಪ್ರವಾಸೋಧ್ಯಮಕ್ಕೆ ಲಾಭವಾಗಿದೆ.
ಜಿಲ್ಲೆಯ ಕರಾವಳಿ ಭಾಗಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು
ಮೀನುಗಾರಿಕಾ ಬಂದರು ಹೂಳೆತ್ತುವ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದನೆ ದೊರೆತಿದೆ. ಆದರೆ, ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಹಾಗೂ ಜಿಲ್ಲೆಯ ಜನರ ಬಹು ಬೇಡಿಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital )ಮತ್ತು ಪರಿಸರ ವಿಶ್ವವಿದ್ಯಾಲಯ ಘೋಷಣೆಯನ್ನು ಪೂರಕ ಬಜೆಟ್‌ನಲ್ಲಿ ಕೈ ಬಿಡಲಾಗಿದೆ.
ಆದರೇ ಬಜೆಟ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಸಿಟಿ, ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಲಾಗಿದೆ. ಇದರಿಂದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್) ವ್ಯಾಪ್ತಿಯಲ್ಲಿರುವ ಜಿಲ್ಲಾಸ್ಪತ್ರೆಗೂ ಎಂಆರ್‌ಐ ಸೌಲಭ್ಯ ದೊರೆಯಲಿದೆ.
ಶಿರಸಿಯಲ್ಲಿ ರಾಜ್ಯದ ಮೊದಲ ಪರಿಸರ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai)ಘೋಷಣೆ ಮಾಡಿದ್ದರು. ಇದು ಸಹ ಪೂರಕ ಬಜೆಟ್‌ನಲ್ಲಿ ಸೇರ್ಪಡೆ ಗೊಂಡಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಭಟ್ಕಳ, ಬೇಲೇಕೇರಿ ಬಂದರುಗಳಲ್ಲಿ ಎರಡು ವರ್ಷಗಳಿಗೊಮ್ಮೆ ಹೂಳು ತೆಗೆಯುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ದೋಣಿಗಳು ತಂಗುವ ಜೆಟ್ಟಿಗಳಲ್ಲಿಯೂ ಹೂಳೆತ್ತುವುದಾಗಿ ಹೇಳಲಾಗಿದೆ. ಕಾರವಾರ, ಭಟ್ಕಳ ಬಂದರು ಹೂಳೆತ್ತಲು ಹಿಂದಿನ ಸರಕಾರದ ಅವಧಿಯಲ್ಲಿಯೇ ಹಣ ಮಂಜೂರಾಗಿದೆ.
ಭಟ್ಕಳ ಜೊತೆಗೆ ಹೊನ್ನಾವರ, ಬೇಲೇಕೇರಿ ಬಂದರಿಗೆ ಆದ್ಯತೆ ದೊರೆತಿದ್ದು ಮೀನುಗಾರರ ನಿರೀಕ್ಷೆ ಫಲ ಕೊಟ್ಟಿದೆ.
ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆಧ್ಯತೆ ನೀಡಲಾಗಿದೆ. ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆ ರಚನೆ ಮಾಡುವುದಾಗಿ ಸರಕಾರ ಘೋಷಿಸಿದೆ.
ಕರ್ನಾಟಕ ಕರಾವಳಿ ತೀರದಗಳಲ್ಲಿ ಅರ್ಧದಷ್ಟು ಕಡಲತೀರ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಹಾಗಾಗಿ ಇದರಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಕ್ಕೆ ಆಧ್ಯತೆ ಸಿಗುವ ನಿರೀಕ್ಷೆ ಇದೆ.

ಹಿಂದಿನ ಬಜೆಟ್‌ನಲ್ಲಿ ತಿಳಿಸಿದಂತೆ, ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿ ₹50 ಸಾವಿರ ದಿಂದ ಮೂರು ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದ್ದು , ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದ ಡೀಸೆಲ್ ಮಿತಿ 2 ಲಕ್ಷ ಲೀಟರ್‌ವರೆಗೆ ಹೆಚ್ಚಿಸಲು 250 ಕೋಟಿ ರೂ. ನೆರವು ಮತ್ತು ಮೀನುಗಾರಿಕಾ ದೋಣಿಗಳ ಸೀಮೆ ಎಣ್ಣೆ ಎಂಜಿನ್‌ಗಳನ್ನು ಪೆಟ್ರೋಲ್‌ಗೆ ಬದಲಾಯಿಸಲು 50 ಸಾವಿರ ರೂ. ಸಹಾಯಧನ ಮತ್ತು ಕೇಣಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ಯೋಜನೆ ಮುಂದುವರಿಸಲಾಗಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಿಲ್ಲ ಸ್ಥಾನ!
ಕಳೆದ ಫೆಬ್ರುವರಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ 2023-24ನೇ ಸಾಲಿನ ಬಜೆಟ್‌ನಲ್ಲಿ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶಿರಿಸಿಯಲ್ಲಿ ಪರಿಸ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಿಸುವುದಾಗಿ ಘೋಷಿಸಿದ್ದರು. ಆದರೆ, ಯಾವುದೇ ಬೌತಿಕ ಬೆಳವಣಿಗೆ ಆಗಿರಲಿಲ್ಲ. ಈಗಿನ ಪೂರಕ ಬಜೆಟ್‌ನಲ್ಲಿ ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲಾಗುವುದು ಎಂದಷ್ಟೇ ಇದ್ದು ಉತ್ತರ ಕನ್ನಡ ಅಥವಾ ಕುಮಟಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಉಲ್ಲೇಖ ಮಾಡಲಾಗಿಲ್ಲ.
ಇನ್ನು ಹಿಂದಿನ ಬಜೆಟ್‌ನಲ್ಲಿ ಹೇಳಿದ್ದ, ಮೀನು ಉತ್ಪನ್ನ ಪೂರೈಕೆಗೆ ಪರಿಸರ ಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನ ವಿತರಣೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ 500 ಕಾಲುಸಂಕಗಳ ನಿರ್ಮಾಣಕ್ಕೆ 250 ಕೋಟಿ ರೂ. ಯೋಜನೆ. ಕುಮಟಾದ ಕೋಡ್ಕಣಿಯಲ್ಲಿ ಕೈಗಾರಿಗಾ ವಸಾಹತು ಸ್ಥಾಪನೆ. ಹೊನ್ನಾವರದಲ್ಲಿ ಚೆನ್ನಭೈರಾದೇವಿ ಸ್ಮಾರಕ ಉದ್ಯಾನ ನಿರ್ಮಾಣ ಘೋಷಣೆಗಳಿಗೆ ಪೂರಕ ಬಜೆಟ್‌ನಲ್ಲಿ ಕೈಬಿಡಲಾಗಿದೆ.






