Sagarnews:ಅಪರೂಪದ ‘ಕಾಡುಪಾಪ’ ಪತ್ತೆ

TextMaster 09 24 08.35.16 TextMaster 09 24 08.35.16

ಸಾಗರ: ಸಾಗರ-ಸಿಗಂದೂರು ರಸ್ತೆಯ ಖಾಸಗಿ ಲೇ ಔಟ್‌ನಲ್ಲಿ ಅಪರೂಪದ ತಳಿಯ ಕಾಡುಪಾಪ ಶನಿವಾರ ಕಾಣಿಸಿಕೊಂಡಿದೆ.

ಲೇ ಔಟ್‌ನ ಬೇಲಿಯ ನಡುವೆ ಕಾಣಿಸಿಕೊಂಡ ಈ ಕಾಡುಪಾಪವನ್ನು ಇಂಗ್ಲಿಷ್‌ನಲ್ಲಿ ಸ್ಲೆಂಡರ್ ಲೋರಿಸ್ (Slender Loris)ಎಂದು ಕರೆಯುತ್ತಾರೆ. ನಿಧಾನವಾಗಿ ಸಾಗುವ, ಓಡಲು, ಹಾರಲು ಬಾರದ ಸೌಮ್ಯ ಸ್ವಭಾವದ ಪ್ರಾಣಿ ಎಂದು ಗುರುತಿಸಲಾಗಿದೆ.

Advertisement

ಕಾಗೆಯ ದಾಳಿ ಮಾಡಿದರೆ ಅದಕ್ಕೆ ತೊಂದರೆಯಾಗಬಹುದು ಎಂದು ಸ್ಥಳೀಯರು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿಯವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಖಿಲೇಶ್ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಸಮೀಪದ ಕಾಡಿಗೆ ಅದನ್ನು ಬಿಡುವ ವ್ಯವಸ್ಥೆ ಮಾಡಿದರು.

ಈ ತಳಿಯ ಕಾಡುಪಾಪ ರಾತ್ರಿ ವೇಳೆ ಮಿಡತೆ, ಚಿಟ್ಟೆಗಳನ್ನು ತಿಂದು ಬದುಕುತ್ತದೆ. ಹಗಲಿನಲ್ಲಿ ಇದಕ್ಕೆ ಕಣ್ಣು ಕಾಣಿಸುವುದಿಲ್ಲ. ದಟ್ಟ ಕಾಡಿನಲ್ಲಿ ವಾಸಿಸುವ ಈ ಪ್ರಾಣಿ ಪೇಟೆಯ ಸಮೀಪ ಬಂದಿರುವುದು ಆಶ್ಚರ್ಯ ತಂದಿದೆ’ ಎಂದು ಅಖಿಲೇಶ್ ಚಿಪ್ಪಳಿ ತಿಳಿಸಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement