Siddapur | ಹತ್ಯೆ ಪ್ರಕರಣ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಪೊಲೀಸರ ವಶಕ್ಕೆ

Siddapur:-ಸಿದ್ದಾಪುರದಲ್ಲಿ ಪತಿ-ಪತ್ನಿ ಕಲಹ ಹತ್ಯೆಗೆ ತಿರುಗಿದ ಪ್ರಕರಣ; ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
Digital news collage showing a man’s portrait, an astrologer seated on a chair, a damaged white car with broken windows, police officers at the scene, and a woman’s photo blended with red and blue emergency light background representing a crime news cover image. Digital news collage showing a man’s portrait, an astrologer seated on a chair, a damaged white car with broken windows, police officers at the scene, and a woman’s photo blended with red and blue emergency light background representing a crime news cover image.
Digital news collage showing a man’s portrait, an astrologer seated on a chair, a damaged white car with broken windows, police officers at the scene, and a woman’s photo blended with red and blue emergency light background representing a crime news cover image.

Siddapur | ಹತ್ಯೆ ಪ್ರಕರಣ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಪೊಲೀಸರ ವಶಕ್ಕೆ.

Siddapur:- ಪತಿ -ಪತ್ನಿ ಕಲಹ ದಿಂದ ಗಲಾಟೆ ಬಿಡಿಸಲು ಬಂದ ಚಿಕ್ಕಪ್ಪನಿಗೆ ಯುವಕರ ಗುಂಪು ಚಾಕು ಇರಿದು ಹತ್ಯೆ ಮಾಡಿದ ಘಟನೆ ನಡೆದಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur) ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿದೆ.

Siddapur news
ಚಾಕು ಇರಿತ ದಿಂದ ಮೃತರಾದ ವಸಂತ್ ಹಾಗೂ ಗಾಯಗೊಂಡವರ ಚಿತ್ರ

ವಸಂತ್ ನಾಯ್ಕ (41)ಮೃತ ವ್ಯಕ್ತಿಯಾಗಿದ್ದು ಮಹೇಶ್ ಹಾಗೂ ಕುಮಾರ್ ಇಬ್ಬರಿಗೆ ಗಂಭೀರ ಗಾಯವಾಗಿದ್ದು,ಶಿವಮೊಗ್ಗದ ಮೆಗ್ಗನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Siddapur| ಕಾಲು ಮುರಿದುಕೊಂಡ ಕಾಡುಕೋಟ| ರಕ್ಷಣೆ ಮಾಡಿದರೂ ಉಳಿಯಲಿಲ್ಲ ಜೀವ! ಏನಾಯ್ತು ಗೊತ್ತಾ?

Advertisement

ಆರೋಪಿ  ಸುಚಿತ್ರ ಗಂಡನಿಂದ ಬೇರ್ಪಟ್ಟು  ಶಿವಮೊಗ್ಗ ದಲ್ಲಿ ಜ್ಯೋತಿಷಿ ಕಮಲಾಕಾರ ಭಟ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಮನೆಯಲ್ಲಿಯೇ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದಳು.

Kamlakar Bhatt Guruji astrologist
ಬಂಧಿತ ಆರೋಪಿತರು

ಇನ್ನು ತಾಯಿಗೆ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಅಕ್ರಮ ಸಂಬಂಧ ದ ಬಗ್ಗೆ ಶಂಕೆ ಹೊದ್ದಿದ್ದ ಮಗಳಿಗೆ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರ ಕಿರುಕಳು ನೀಡುತಿದ್ದು ,ಇದರಿಂದ ಬೇಸತ್ತು ತಾಯಿ ಸುಚಿತ್ರಾಗೆ ತಿಳಿಸದೇ ಸಿದ್ದಾಪುರಕ್ಕೆ ತಂದೆ ಮಹೇಶ್ ಗೆ ಕರೆಮಾಡಿ ಚಿಕ್ಕಪ್ಪ ವಸಂತ್ ಮನೆಗೆ ಬಂದಿದ್ದಳು .

Karwar/siddapur murder case
ಪ್ರಕರಣ ನಡೆದ ಸ್ಥಳ ಹಾಗೂ ಜಕುಂ ಗೊಂಡ ಜ್ಯೋತಿಷಿ ಕಮಲಾಕರ್ ಭಟ್ ಕಾರು

ಸುಚಿತ್ರಾ ಮಗಳನ್ನು ಹುಡುಕಿಕೊಂಡು ಜ್ಯೋತಿಷಿ ಕಮಲಾಕರ್ ಭಟ್ ವಾಹನದಲ್ಲಿ ತಂದೆ ಜೊತೆ ಕೆಲವು ಯುವಕರೊಂದಿಗೆ ಅವರಗುಪ್ಪ ದ ವಸಂತ್ ನಾಯ್ಕ ರವರ ಮನೆಗೆ ಬಂದಿದ್ದು ಆಕೆಯ ಪತಿ ಮಹೇಶ್ ಕೂಡ ಇದ್ದು ಸುಚಿತ್ರಾ ,ಮಹೇಶ್ ನಡುವೆ ವಾಗ್ವಾದ ನಡೆದಿದೆ.

Siddapura ಕಾಲುಜಾರಿ ಬಿದ್ದು ವಾಡೆಹೊಳೆ ಜಲಪಾತದಲ್ಲಿ ಇಬ್ಬರು ನೀರುಪಾಲು

ಈ ಸಂದರ್ಭದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ರವರ ಕಾರನ್ನು ಜಕಂ ಮಾಡಿದ್ದು ಗಲಾಟೆ ತಾರಕಕ್ಕೆ ಹೋಗಿ ಸುಚಿತ್ರ ಜೊತೆ ಬಂದಿದ್ದ ಯುವಕರು ಗಲಾಟೆ ಬಿಡಿಸಲು ಮಧ್ಯ ಪ್ರವೇಶಿಸಿದ್ದ ವಸಂತ್ ಗೆ ಚಾಕು ಇರಿದಿದ್ದಲ್ಲದೇ ಸುಚಿತ್ರ ಪತಿ ಮಹೇಶ್ ಹಾಗೂ ಪಕ್ಕದ ಮನೆಯ ಕುಮಾರ್ ಎಂಬುವವರಿಗೂ ಚಾಕು ಇರಿಯಲಾಗಿದೆ.

ವಸಂತ್ ಆಸ್ಪತ್ರೆ ಮಾರ್ಗದಲ್ಲೇ ಮೃತಪಟ್ಟಿದ್ದು ,ಮಹೇಶ್ ಹಾಗೂ ಕುಮಾರ್ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.ಘಟನೆ ಸಂಬಂಧ ವಸಂತ್ ಅತ್ತಿಗೆ ಸಂಧ್ಯ ನಾಯ್ಕ ದೂರು ನೀಡಿದ್ದು ಈ ದೂರಿನಾದಾರದಡಿ ಆರೋಪಿಗಳಾದ ಸುಚಿತ್ರಾ, ಲೋಕನಾಥ್, ಜ್ಯೋತಿಷಿ ಕಮಲಾಕರ ಭಟ್  ಸೇರಿದಂತೆ ಒಟ್ಟು ಏಳು ಜನರನ್ನ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.

ಸ್ಥಳಕ್ಕೆ ಎಸ್.ಪಿ ದೀಪನ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement