Sirsi | ಕಸದ ವಿಚಾರದಲ್ಲಿ ಗಲಾಟೆ ಮಾಡಿ ಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆ
ಕಾರವಾರ :- ಮನೆಯ ಹಿಂಭಾಗದಲ್ಲಿ ಕಸ ಚಲ್ಲಿದ ವಿಚಾರದಲ್ಲಿ ಅಕ್ಕ -ಪಕ್ಕದ ಮನೆಯವರು ಗಲಾಟೆ ವಿಕೋಪಕ್ಕೆ ಹೋಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಶಿರಸಿ (sirsi) ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜೊತೆಗೆ ದಂಡ ವಿಧಿಸಿ ಆದೇಶಿಸಿದೆ.
ಘಟನೆ ಏನು?
ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರದ್ದಾನಂದಗಲ್ಲಿಯ ಆರೋಪಿಗಳಾದ ರಮೇಶ ಗಜಾನನ ಮಡಗಾಂವಕರ ಹಾಗೂ ಆತನ ತಾಯಿಯಾದ ಸಾವಿತ್ರಿ ಇಬ್ಬರು ಸೇರಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಪಕ್ಕದ ಮನೆಯ ಹಾಗೂ ಸಂಬಂಧಿಗಳೂ ಆದ ಶಕೂ ನಾರಾಯಣ ಮಡಗಾಂವಕರ್ ಜೊತೆ ಗಲಾಟೆಗಳಿದ್ದು ದಿನಾಂಕ:07-12-2015 ರಂದು ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ದೂರುದಾರಳಾದ ಶಕೋ ಕೊಂ ನಾರಾಯಣ ಮಡಗಾಂವಕರ ಇವರೊಂದಿಗೆ ಮನೆಯ ಹಿಂಭಾಗದಲ್ಲಿ ಕಸ ಚೆಲ್ಲಿರುವ ವಿಚಾರವಾಗಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ರಂಗನಾಥ ಮಡಗಾಂವಕರ ತನ್ನ ತಾಯಿಗೆ ಏಕೆ ಬೈಯತ್ತೀರೆಂದು ಪ್ರಶ್ನೆ ಮಾಡಿದಾಗ ಒಂದನೇ ಆರೋಪಿತನಾದ ರಮೇಶ ಮಡಗಾಂವಕರ ಇತನು ಅವಾಚ್ಯದಿಂದ ಬೈದು ಮನೆಯ ಬಾಗಿಲಿನಲ್ಲಿ ನಿಂತಿದ್ದ ರಂಗನಾಥನನ್ನು ರಸ್ತೆಗೆ ಎಳೆದೋಯ್ದು, ಕೆಡವಿ ನೆಲಕ್ಕೆ ಬೀಳಿಸಿ ಆತನ ಎದೆ ಮತ್ತು ಹೊಟ್ಟೆಯ ಮೇಲೆ ಬಲವಾಗಿ ತುಳಿದು, ಗುದ್ದಿ ರಸ್ತೆಗೆ ಜಜ್ಜಿದ ಪರಿಣಾಮವಾಗಿ ರಂಗನಾಥ ಮಡಗಾಂವಕರ ಪ್ರಜ್ಞಾಹೀನನಾದ ಕೂಡಲೇ ಆರೋಪಿತರು ಆತನನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಅಂಬುಲೇನ್ನ ಸಹಾಯದಿಂದ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ರಂಗನಾಥ ಮಡಗಾಂವಕರ ಮರಣ ಹೊಂದಿದ್ದು ಈ ಕುರಿತಂತೆ ಇಬ್ಬರು ಆರೋಪಿತರ ಮೇಲೆ 302,504, ಸಹ ಕಲಂ 34 ಐಪಿಸಿ ಅಡಿಯಲ್ಲಿ ಗುನ್ನಾ ನಂ-122/2015 ದಾಖಲಾಗಿತ್ತು. ಈ ಕುರಿತಂತೆ ಆಗಿನ ತನಿಖಾಧಿಕಾರಿಯಾಗಿದ್ದ ಆರ್.ಎಲ್.ಗಣಪತಿ ಸಿ.ಪಿ.ಐ ಶಿರಸಿ ಇವರು ಆರೋಪಿತರನ್ನು ದಸ್ತಗಿರ ಮಾಡಿ ತನಿಖೆಗೊಳಪಡಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
Sirsi| ಸಾಲ ಮರುಪಾವತಿ ಕೇಳಲು ಹೋದ ಮಹಿಳೆಯರಿಗೆ ಥಳಿಸಿದ ಅನ್ಯಕೋಮಿನ ಯುವಕರು -ದೂರು ದಾಖಲು
ಸರ್ಕಾರದ ಪರವಾಗಿ ಪಬ್ಲಿಕ್ ಪ್ರೋಸಿಕ್ಯೂಟರ್‌ರಾದ, ಶ್ರೀ ರಾಜೇಶ್.ಎಂ.ಮಳಗಿಕರ್ ರವರು ನ್ಯಾಯಾಲಯವು ಪ್ರಕರಣದ ವಿದ್ಯಮಾನಗಳನ್ನು ಮತ್ತು ಲಭ್ಯವಿದ್ದ ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಅರೋಪಿತರಿಗೆ ಶಿಕ್ಷೆ ವಿಧಿಸಬೇಕೆಂದು ತಮ್ಮ ಸುದೀರ್ಘ ವಾದ ಮಂಡಿಸಿದರು.
ಶಿರಸಿ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ಶಿರಸಿಯ (sirsi)ನ್ಯಾಯಾಧೀಶರಾದ ಕಿರಣ ಕಿಣಿ ರವರು ಪ್ರಕರಣದಲ್ಲಿರುವ ಸಾಕ್ಷದಿಂದ ಆರೋಪಿತನ ವಿರುದ್ಧ ಆರೋಪವು ಸಾಭೀತಾಗಿದ್ದರಿಂದಾ ಅಪರಾಧದ ಕಲಂ. 302 ಹಾಗೂ 504 ಸಹ ಕಲಂ: 34 ಐಪಿಸಿ ರ ಅಡಿಯ ಅಪರಾಧಕ್ಕೆ ಒಂದನೇ ಅರೋಪಿ ರಮೇಶ ಮಡಗಾಂವಕರ ಇತನಿಗೆ ಕಲಂ: 302 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ರೂ 25,000/ ದಂಡ ಹಾಗೂ ಎರಡನೇ ಆರೋಪಿತಳಾದ ಸಾವಿತ್ರಿ ಮಡಗಾಂವಕರ ಇವರಿಗೆ ಕಲಂ:504 ಐಪಿಸಿ ಅಡಿಯಲ್ಲಿ 2000/- ದಂಡ ವಿಧಿಸಿದ್ದಲ್ಲದೆ ದೂರುದಾರಳಾದ ಶಕೂ ಇವಳಿಗೆ 2000/- ಪರಿಹಾರ ನೀಡುವಂತೆ ಆದೇಶಿಸಿದ್ದು ಒಂದನೇ ಆರೋಪಿ ರಮೇಶ ಮಡಗಾಂವಕರ ಇತನು ದೂರುದಾರಳಿಗೆ 50.000/- ರೂಪಾಯಿ ಪರಿಹಾರ ನೀಡತಕ್ಕದ್ದೇಂದು, ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದೆಂದು ತೀರ್ಪನ್ನು ನೀಡಿರುತ್ತಾರೆ.
ಪ್ರಕರಣದ ವಿಚಾರಣೆಗೆ ಕಾಲಕ್ಕೆ ನಗರ ಠಾಣೆ ಹೆಚ್.ಸಿ ತುಕಾರಾಮ ಬಣಕಾರ ಸಾಕ್ಷಿದಾರರನ್ನು ಹಾಜರುಪಡಿಸಿ ಅಭಿಯೋಜನೆಗೆ ಸಹಕರಿಸಿದರು. ನಗರ ಠಾಣೆಯ ಪಿ.ಎಸ್.ಐ ನರಸಿಂಹಲು ಕೊರ್ಟ ಮಾನಿಟರಿಂಗ್ ಮಾಡಿ ವಿಚಾರಣೆಗೆ ಸಹಕರಿಸಿದ್ದರು.







