ತೆನೆ ಬಿಟ್ಟು ಕಮಲ ಹಿಡಿದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ.

169

ಕಾರವಾರ :- ವಿಧಾನ ಸಭಾ ಚುನಾವಣೆ ಸಮೀಪಿಸುತಿದ್ದಂತೆ ಪಕ್ಷ ತೊರೆದು ಹೊಸ ಪಕ್ಷ ಸೇರುವುದು ನಾಯಕರ ಪಾಲಿಗೆ ಹೊಸದೇನಲ್ಲ.
ಆದ್ರೆ ಇದೀಗ ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಅವರಿಗೆ ಎದುರಾಳಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಮೊಮ್ಮಗ ಜೆಡಿಎಸ್ ಮುಖಂಡ ಶಶಿಭೂಷಣ್ ಹೆಗಡೆ ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು‌.

ಶಶಿಭೂಷಣ್ ಹೆಗಡೆ ಹಿಂದೆ ಕುಮಟಾ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆಗೆ ಸ್ಪರ್ದಿಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು.ಇದಾದ ನಂತರ 2018 ರಲ್ಲಿ ಶಿರಸಿ ಕ್ಷೇತ್ರದಲ್ಲಿ ಸ್ಪರ್ದಿಸಿ 26,625 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಈ ಹಿಂದೆ 2004 ರಲ್ಲಿ ಕುಮಟಾ ದಲ್ಲಿ ಬಿಜೆಪಿ ಯಿಂದ ಸ್ಪರ್ದಿಸಿ 31,273 ಮತ ಪಡೆದು ಕಾಂಗ್ರಸ್ ನ ಮೋಹನ್ ಕೆ.ಶಟ್ಟಿ ವಿರುದ್ಧ 3,465 ಮತದಲ್ಲಿ ಸೋತರೇ,2008 ರಲ್ಲಿ ಕುಮಟಾ ದಲ್ಲಿ ಬಿಜೆಪಿಯಿಂದ ಸ್ಪರ್ದಿಸಿ 30,201 ಮತ ಪಡೆದು ಅಂದಿನ ಜನತಾದಳದ ದಿನಕರ್ ಶಟ್ಟಿ ವಿರುದ್ಧ 591 ಮತಗಳ ಅಂತರದಲ್ಲಿ ಸೋಲುವ ಮೂಲಕ ಮೂರನೇ ಸ್ಥಾನದಲ್ಲಿ ಇದ್ದರು. ಮೂರು ಸೋಲಿನ ನಂತರ ಜೆಡಿಎಸ್ ನಲ್ಲೇ ತಮ್ಮ ಅಸ್ತಿತ್ವ ಉಳಿಸಿಕೊಂಡು ಶಿರಸಿ ಕ್ಷೇತ್ರದಲ್ಲಿ ತಮ್ಮ ಹಿಡಿತ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದ್ದ ಇವರಿಗೆ ಜೆಡಿಎಸ್ ನಿಂದ ಮತ್ತೊಮ್ಮೆ ಈ ಭಾರಿ ಸ್ಪರ್ದಿಸಲು ಅವಕಾಶ ವದಗಿಬಂದರೂ ಸ್ಪರ್ದಿಸುವ ಮನಸ್ಸು ಮಾಡಲಿಲ್ಲ. ಆದರೇ ಕಾಗೇರಿ ವಿರುದ್ಧ ಕಾಂಗ್ರೆಸ್ ಒಂದೊಳ್ಳೆ ಬ್ರಾಹ್ಮಣ ನಾಯಕನಿಗಾಗಿ ಹುಡುಕಾಟ ನಡೆಸಿದ್ದು ಶಿಶಿಭೂಷಣ್ ಹೆಗಡೆ ಗೆ ಗಾಳ ಹಾಕಲು ಪ್ರಯತ್ನ ಪಟ್ಟಿತ್ತು.

ಆದರೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಯತ್ನದ ಫಲ ,ಕಾಗೇರಿ ಚಾಣುಕ್ಯ ನೀತಿ ಕೊನೆಗೂ ಮತ್ತೆ ಶಶಿಭೂಷಣ್ ಹೆಗಡೆ ಬಿಜೆಪಿ ಗೆ ಸೇರ್ಪಡೆಗೊಳಿಸಿಕೊಳ್ಳಲು ಸಫಲರಾಗಿದ್ದು ಇದೀಗ ಕಾಗೇರಿ ರವರಿಗೆ ಪ್ರಭಲ ಬ್ರಾಹ್ಮಣ ನಾಯಕರು ಸ್ಪರ್ದೆ ಇಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಭಾರಿ ಶಶಿಭೂಷಣ್ ಹೆಗಡೆ ಸ್ಪರ್ದೆಇಲ್ಲ!

ಶಶಿಭೂಷಣ್ ಹೆಗಡೆ ಈಭಾರಿ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ದೆ ಮಾಡುವುದಿಲ್ಲ. ಬದಲಾಗಿ ಪಕ್ಷದ ಕೆಲಸದಲ್ಲಿ ಇವರನ್ನು ತೊಡಗಿಸಿಕೊಳ್ಳಲಾಗುತ್ತದೆ. ಇದಲ್ಲದೇ ಈ ಭಾರಿ ಯಾವುದೇ ಕ್ಷೇತ್ರದಿಂದ ತಾನು ಸ್ಪರ್ದೆ ಮಾಡುವುದಿಲ್ಲ ಎಂಬುದನ್ನು ಸ್ವತಹಾ ಶಶಿಭೂಷಣ್ ಹೆಗಡೆ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಸ್ಪರ್ದೆ ಮಾಡದಿದ್ದರೇ ಅವರ ಸ್ಥಾನಕ್ಕೆ ಇವರನ್ನು ನಿಲ್ಲಿಸುವ ಲೆಕ್ಕಾಚಾರ ಬಿಜೆಪಿ ಪಕ್ಷದ್ದಾಗಿದೆ.

ಶಶಿಭೂಷಣ್ ಹೆಗಡೆ ಕಳಂಕ ರಹಿತ ರಾಜಕಾರಣಿ .ಯಾವುದೇ ಕ್ರಿಮಿನಲ್ ಹಿನ್ನಲೆ,ಬ್ರಷ್ಟಾಚಾರ ವಿಲ್ಲದ ರಾಯಲ್ ರಾಜಕಾರಣಿ. ವಿವಾದ ಸಹ ಇವರ ಬೆನ್ನಿಗಿಲ್ಲ. ಇದಲ್ಲದೇ ದಿ. ರಾಮಕೃಷ್ಣ ಹೆಗಡೆ ಮೊಮ್ಮಗ ಸಹ .ಇನ್ನು ಕೇಂದ್ರ ರಾಜ್ಯಗಳಲ್ಲಿ ಎಲ್ಲಾ ಪಕ್ಷದ ದೊಡ್ಡಮಟ್ಟದ ರಾಜಕಾರಣಿಗಳ ಜೊತೆ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ‌‌. ಬಿಜೆಪಿಗೆ ಬೇಕಿರುವ ಎಲ್ಲಾ ಗುಣಗಳು ಇವರಲ್ಲಿದೆ. ಹೀಗಾಗಿ ಬಿಜೆಪಿ ಕೊನೆಗೂ ಬಲೆಯಿಂದ ತಪ್ಪಿಸಿಕೊಂಡು ಈಜುತಿದ್ದ ಮೀನನ್ನು ಮತ್ತೆ ಬಲೆಗೆ ಬೀಳಿಸಿಕೊಳ್ಳಲು ಸಫಲವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!