BREAKING NEWS
Search

ಕಾಂಗ್ರೆಸ್ ಸೇರೋದು ಸುಳ್ಳು ,ಪಕ್ಷ ,ಕಾರ್ಯಕರ್ತರು ಮುಖ್ಯ- ಬಿಜೆಪಿ ಶಾಸಕ ದಿನಕರ್ ಶಟ್ಟಿ.

134

ಕಾರವಾರ :- ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ (Mla Shivaram hebbar)ರವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಕುಮಟಾದ ಬಿಜೆಪಿ ಶಾಸಕ ದಿನಕರ್ ಶಟ್ಟಿಯವರು (Bjp Mla Denakar shatty )ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು ಕುಮಟಾ ಬಿಜೆಪಿ (Bjp)ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುವಂತೆ ಮಾಡಿತ್ತು.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿದ ಕುಮಟಾ ಬಿಜೆಪಿ ಶಾಸಕ ದಿನಕರ್ ಶಟ್ಟಿ ರವರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ನನ್ನ ತೇಜೋವಧೆ ಮಾಡಬೇಕು ಎಂದು ಚುನಾವಣಾ ಪೂರ್ವದಿಂದಲೂ ವ್ಯವಸ್ಥಿತವಾಗಿ ಷಢ್ಯಂತ್ರ ವನ್ನು ಮಾಡಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ (social media fake news) ಸುಳ್ಳು ಸುದ್ದಿ ಬಿತ್ತರಿಸುವ ಮೂಲಕ ಕ್ಷೇತ್ರದ ಜನರಲ್ಲಿ ಗೊಂದಲ ತರುತಿದ್ದಾರೆ. ನನಗೆ ಹಿಂದುತ್ವ,ಮೋದಿ ,ಪಕ್ಷ ಕಾರ್ಯಕರ್ಯರು ಮುಖ್ಯ ಪಕ್ಷ ಬಿಡುವ ಪ್ರಶ್ನೆಯೇ ಉದ್ಭವಿಸಲಾರದು.

ಬಿಜೆಪಿ ಪಕ್ಷಕ್ಕೆ ನಿಷ್ಟನಾಗಿದ್ದೇನೆ,ಮುಂದೆಯೂ ನಿಷ್ಟನಾಗಿ ಕಾರ್ಯನಿರ್ವಹಿಸುತ್ತೇನೆಯೇ ಹೊರತು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಸದ್ಯ ಕೆಲವು ದಿನಗಳಿಂದ ದಿನಕರ್ ಶಟ್ಟಿರವರು ವಿದೇಶಿ ಪ್ರವಾಸದಲ್ಲಿದ್ದು ಈ ಕಾರಣದಿಂದ ಅವರಿಗೆ ಕ್ಷೇತ್ರದ ಜನರು ಕರೆಮಾಡಿದಾಗ ನೆಟ್ಟರ್ಕ ಇಲ್ಲದೇ ಸಂಪರ್ಕಕ್ಕೆ ಸಿಗುತ್ತಿಲ್ಲ.ಈ ವಿಷಯವನ್ನೇ ಹಿಡಿದುಕೊಂಡು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತಿದ್ದಾರೆ ಹೀಗಾಗಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರ ಆಪ್ತ ವಲಯ ಮಾಹಿತಿ ನೀಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!