Uttara kannada-ಗೃಹಲಕ್ಷ್ಮೀ ಯೋಜನೆ ಮರಣ ಹೊಂದಿದ 2724 ಖಾತೆಗೆ ಹಣ ಜಮ- ಖಾತೆ ಇಲ್ಲದವರಿಗೂ ಹಣ ಜಮಾ !

ಉತ್ತರ ಕನ್ನಡದಲ್ಲಿ ಮರಣ ಹೊಂದಿದ 2724 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಉತ್ತರ ಕನ್ನಡದಲ್ಲಿ ಮರಣ ಹೊಂದಿದ 2724 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ
ಸಾಂದರ್ಭಿಕ ಚಿತ್ರ (ai ನಿರ್ಮಿತ)

Uttara kannada-ಗೃಹಲಕ್ಷ್ಮೀ ಯೋಜನೆ ಮರಣ ಹೊಂದಿದ 2724 ಖಾತೆಗೆ ಹಣ ಜಮ- ಖಾತೆ ಇಲ್ಲದವರಿಗೂ ಹಣ ಜಮಾ !

ಕಾರವಾರ :- ಗೃಹಲಕ್ಷ್ಮೀ ಯೋಜನೆಯಲ್ಲಿ ( Gruha LakshmiScheme) ಆದ ಲೋಪವನ್ನು ಸರಿಪಡಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ನಕಲಿ ಖಾತೆ ,ಮೃತರ ಖಾತೆಗೆ ಜಮವಾದ ಹಣವನ್ನು ಮರಳಿ ಪಡೆಯುತ್ತಿದೆ.

ಇದನ್ನೂ ಓದಿ:-Uttara kannada| ಕ್ಯಾಸಲ್ ರಾಕ್ ರೈಲು ಸೇವೆ ಮತ್ತೆ ಆರಂಭ-ಸಮಯ ಏನು?

Advertisement

ಉತ್ತರ ಕನ್ನಡ ಜಿಲ್ಲೆಯಲ್ಲಿ  ಗೃಹಲಕ್ಷ್ಮೀ ಯೋಜನೆಗೆ ನೊಂದಣಿಯಾದ ಫಲಾನುಭವಿಗಳು- 3,38486 ಮಹಿಳೆಯರು ಇದ್ದರೇ ಧನಸಹಾಯ ಪಾವತಿಯಾದ ಫಲಾನುಭವಿಗಳ ಸಂಖ್ಯೆ- 312818  ಇದ್ದು ,

ಆಗಷ್ಟ್ 2023 ರಿಂದ ಮೇ 2026 ರ ವರೆಗೆ ₹1941.94 ಕೋಟಿ ಹಣ ಜಮವಾಗಿದೆ. ಈವರೆಗೆ 2026 ರ ಮೇ ವರೆಗೆ ಮಾತ್ರ ಖಾತೆಗೆ ಹಣ ಜಮ ಮಾಡಲಾಗಿದೆ.

ಇದನ್ನೂ ಓದಿ:-Uttara kannada| ಯುವ ಕಾಂಗ್ರೆಸ್ ನಲ್ಲಿ ಬುಗಿಲೆದ್ದ ಆಕ್ರೋಶ ಸಾಮೂಹಿಕ ರಾಜಿನಾಮೆ ಬೆನ್ನಲ್ಲೇ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಶಾಕಿಂಗ್ ಹೇಳಿಕೆ!

ಜಿಲ್ಲೆಯಲ್ಲಿ ಒಟ್ಟು-8088 ಜನ ಫಲಾನುಭವಿಗಳು ಮರಣ ಹೊಂದಿದ್ದಾರೆ. ಇದರಲ್ಲಿ 2724 ಜನ ಮರಣ ಹೊಂದಿದ ಖಾತೆಗೆ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ.ಇದಲ್ಲದೇ ಏಳು ಜನ ಫಲಾನುಭವಿಗಳಲ್ಲಿ ಬ್ಯಾಂಕ್ ಖಾತೆ ಹಾಗೂ ಬ್ಯಾಂಕ್  ಹೆಸರು ಇಲ್ಲದವರಿಗೆ ಹಣ ಜಮವಾಗಿದೆ.

ಬ್ಯಾಂಕ್ ಖಾತೆ ಹೊಂದಿದವರು-1807 ,ಅಂಚೆ ಖಾತೆ- 910 ಫಲಾನುಭವಿಗಳು ಹಾಗೂ ಬ್ಯಾಂಕ್ ಖಾತೆ ಹಾಗೂ ಬ್ಯಾಂಕ್  ಹೆಸರು ಇಲ್ಲದ ಫಲಾನುಭವಿಗಳು – 7 ಗಳ ಖಾತೆಗೆ ಹಣ ಜಮವಾಗಿದ್ದು ,ಇನ್ನೂ ಕೂಡ ಜಿಲ್ಲಾಡಳಿತದ ಇಲಾಖೆಯಿಂದ ಮಾಹಿತಿ ಕಲೆಹಾಕಲಾಗುತ್ತಿದೆ.ಇದನ್ನೂ ಓದಿ:-Karwar| ಮನೆಯಲ್ಲಿ ಅಕ್ರಮ ಗೋವಾ ಮದ್ಯದ ಮಾರಾಟ- ₹3,735 ಮೌಲ್ಯದ ಮದ್ಯ ವಶಕ್ಕೆ ಪಡೆದ ಪೊಲೀಸರು.

ಸದ್ಯ ಮರಣ ಹೊಂದಿದ 8088 ಫಲಾನುಭವಿಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಕಲೆಹಾಕುತಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement