BREAKING NEWS
Search

ಪ್ರಭಾವಿಗಳನ್ನು ಸಮಾಧಾನ ಪಡಿಸಲು ಸಾಧ್ಯವಿಲ್ಲ.ನಾನು ನಿರೀಕ್ಷೆ ಮಾಡಿದ ಖಾತೆಯನ್ನೇ ನೀಡಿದ್ದಾರೆ- ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್.

577

ಕಾರವಾರ :- ಮುಖ್ಯಮಂತ್ರಿಗಳು ನಾನು ನಿರೀಕ್ಷೆ ಮಾಡಿದ ಖಾತೆಯನ್ನೇ ನೀಡಿದ್ದಾರೆ,ಕಾರ್ಮಿಕ ಖಾತೆಯ ಸಚಿವನಾಗೇ ಮುಂದುವರೆಯುತ್ತೇನೆ ಎಂದು ಕಾರವಾರದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.ಕ್ಯಾಬಿನೆಟ್ ಹಂಚಿಕೆ ಈಗಾಗಲೇ ಮುಗಿದಿದೆ,ಯಾರಿಗೂ ಕೂಡಾ ಖಾತೆ ಕುರಿತು ಅಸಮಾಧಾನ ಇಲ್ಲ, ಕಾರ್ಯಕರ್ತನಾದವನಿಗೆ ಶಾಸಕನಾಗಬೇಕು, ಶಾಸಕನಾದ ಕೂಡಲೇ ಮಂತ್ರಿಯಾಗಬೇಕು.

ಮಂತ್ರಿಯಾದ ಮೇಲೆ ಮುಖ್ಯಮಂತ್ರಿ ಸ್ಥಾನವೇ ಬೇಕು, ಇಂತಹುದೇ ಖಾತೆ ಬೇಕು ಎನ್ನುವ ಬೇಡಿಕೆ ಇರುತ್ತೆ‌ .ಪ್ರಭಾವಿಗಳನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ.

ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ ಅದರ ಕಷ್ಟ ಗೊತ್ತಿದೆ
ಮುಖ್ಯಮಂತ್ರಿಗಳು ಯಾವ ಜವಾಬ್ದಾರಿ ಕೊಟ್ಟಿದ್ದಾರೋ ಸರ್ಕಾರಕ್ಕೆ, ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು.

ಇನ್ನುಅತೃಪ್ತರೊಂದಿಗೆ ರಮೇಶ ಜಾರಕಿಹೊಳಿ ಮೀಟಿಂಗ್ ವಿಚಾರ ವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಈ ಕುರಿತು ನನಗೆ ಮಾಹಿತಿ ಇಲ್ಲ,ರಮೇಶ ಜಾರಕಿಹೊಳಿ ಈಗಲೂ ನನ್ನ ಸ್ನೇಹಿತ,ಸ್ನೇಹಿತರಾಗೇ ಇರುತ್ತಾರೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!