BREAKING NEWS
Search

ಶಿರಸಿ-ಅಂಗ ವಿಕಲ ಮಹಿಳೆಯನ್ನು ಮದುವೆಯಾಗಿ ಹಣ ದೋಚಿ ಪರಾರಿಯಾದ ಮೌಲ್ವಿ!

1369

ಕಾರವಾರ:- ಅಂಗವಿಕಲ ಮಹಿಳೆಯನ್ನು ನಂಬಿಸಿ ಮದುವೆಯಾಗಿ ನಂತರ ಆಕೆಯ ಬಳಿ ಇದ್ದ ಹಣ ದೋಚಿ ದರ್ಗಾದಲ್ಲಿ ಇರುವ ಮೌಲ್ವಿ ಪಲಾಯನ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ನಡೆದಿದೆ.

ದಾಸನಕೊಪ್ಪಸ ಕುರೇಷಿ ಮಕ್ಬುಲ್ ಸಾಬ್ ದರ್ಗಾದ ಮೌಲ್ವಿಯಿಂದ ವಂಚನೆಗೊಳಗಾದ ಮಹಿಳೆಯಾಗಿದ್ದಾಳೆ. ಉತ್ತರ ಪ್ರದೇಶ ಮೂಲದ ಸದರಿ ಬನವಾಸಿಯ ದಾಸನಕೊಪ್ಪ ದರ್ಗಾದಲ್ಲಿ ಮೌಲ್ವಿಯಾಗಿರುವ ಮಹ್ಮದ್ ಜಾಕಿರ್ (28 ) ವಂಚನೆ ಮಾಡಿದವನಾಗಿದ್ದಾನೆ.

ವಂಚನೆಗೊಳಗಾದ ಮಹಿಳೆಯು ಅಂಗವಿಕಲೆಯಾಗಿದ್ದು ,ಈ ಹಿಂದೆ ಮದುವೆಯಾಗಿ ಹತ್ತು ವರ್ಷದ ಮಗನಿದ್ದಾನೆ. ಗಂಡ ಬಿಟ್ಟು ಹೋದ್ದರಿಂದ ಸಣ್ಣಪುಟ್ಟ ಕೆಲಸ ಮಾಡಿಕೊಂಡು ದರ್ಗಾದ ಬಳಿಯೇ ಚಿಕ್ಕ ಗುಡಿಸಲಿನಲ್ಲಿ ವಾಸವಿದ್ದ ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಈ ಕೆಗೆ ಬಾಳು ಕೊಡುವುದಾಗಿ ನಂಬಿಸಿ ಮದುವೆಯಾಗಿದ್ದಾನೆ. ಕೆಲವು ತಿಂಗಳವರೆಗೆ ಈಕೆಯೊಂದಿಗೆ ಜೀವನ ನಡೆಸಿ ಈಕೆಯ ಮನೆಯಲ್ಲಿದ್ದ ಹಣ,ಮೊಬೈಲ್ ಸೇರಿದಂತೆ ಎಲ್ಲವನ್ನೂ ದೋಚಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ವಂಚನೆಗೊಳಗಾದ ಮಹಿಳೆಯ ಬನವಾಸಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!