ಕಾರವಾರ :- ಲೈಂಗಿಕ ದೌರ್ಜನ್ಯ ಆರೋಪ ಹೊಂದಿದ ಪ್ರಾಂಶುಪಾಲರನ್ನು ವಸತಿ ಶಾಲೆಗೆ ನೇಮಕ ಮಾಡಿರುವುದನ್ನು ವಿರೋಧಿಸಿ ವಸತಿ ನಿಲಯದ (Residential School )ವಿದ್ಯಾರ್ಥಿಗಳು ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಉತ್ತರ ಕನ್ನಡ Uttara Kannada district ) ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ (Banavasi)ಭಾಗದ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಇದನ್ನೂ ಓದಿ:-ಸಮುದ್ರದಲ್ಲಿ ಈಜುವ ಜನರೇ ಎಚ್ಚರ! ಕಡಲಿನಲ್ಲಿ ಮನುಷ್ಯನ ಮಾಂಸ ತಿನ್ನುವ ಬ್ಯಾಕ್ಟೀರಿಯಾ ಪತ್ತೆ.
ಊಟೋಪಚಾರ ತ್ಯಜಿಸಿ, ಬಿಸಿಲಿನಲ್ಲಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು ಹಳೆ ಪ್ರಾಂಶುಪಾಲ ರಾಘವೇಂದ್ರ ನಾಯ್ಕ ಅವರನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದ್ದು ವಿದ್ಯಾರ್ಥಿಗಳ ಪ್ರತಿಭಟನೆಗೆ ಹಳೆಯ ವಿದ್ಯಾರ್ಥಿಗಳು ಮತ್ತು ಪಾಲಕರು ಬೆಂಬಲ ಸೂಚಿಸಿದ್ದು ಅಧಿಕಾರಿಗಳು ಬಂದು ಸಮಸ್ಯೆ ಆಲಿಸಿ ವರ್ಗಾವಣೆ ರದ್ದು ಮಾಡುವ ವರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ.
ಹೊಸ ಪಾಂಶುಪಾಲರ ಅಧಿಕಾರ ಹಸ್ತಾಂತರಕ್ಕೂ ವಿರೋಧ-ಕಚೇರಿ ಬಾಗಿಲು ಮುರಿದ ವಿದ್ಯಾರ್ಥಿಗಳು.

ಇನ್ನು ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಲು ಆಗಮಿಸಿದ ಪ್ರಾಂಶುಪಾಲ ಚಂದ್ರಶೇಖರ್ ರವರಿಗೆ ವಿದ್ಯಾರ್ಥಿಗಳು ತಡೆಯೊಡ್ಡಿದರು. ಪೊಲೀಸ್ ಬಂದವಸ್ತ್ ನೊಂದಿಗೆ ಆಗಮಿಸದ ಅವರು ಭದ್ರತೆಯಲ್ಲೇ ಅಧಿಕಾರ ವಹಿಸಿಕೊಂಡರು. ಇನ್ನು ಇವರು ಅಧಿಕಾರ ವಹಿಸಿಕೊಳ್ಳುತಿದ್ದಂತೆ ಪ್ರಾಂಶುಪಾಲರ ಕೊಠಡಿಗೆ ವಿದ್ಯಾರ್ಥಿಗಳು ನುಗ್ಗಿ ಬಾಗಿಲು ಮುರಿದು ದಾಂಧಲೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ವಸತಿ ಶಾಲೆಯಲ್ಲಿ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದೆ.
ರಾಜಕಾರಣಿಗಳಿಗೆ ದಾಳವಾದ ವಿದ್ಯಾರ್ಥಿಗಳು.
12 ವರ್ಷದಿಂದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತಿದ್ದ ರಾಘವೇಂದ್ರರವರನ್ನು ವರ್ಗಾವಣೆ ಮಾಡಿ ಹೊಸದಾಗಿ ಚಂದ್ರಶೇಖರ್ ರವರಿಗೆ ಆ ಸ್ಥಾನ ನೀಡಲಾಗಿತ್ತು.ಆದರೇ ಪೂರ್ವಗ್ರಹ ಪೀಟಿತವಾಗಿ ಈ ವಿಷಯಕ್ಕೆ ಕೆಲವರು ರಾಜಕೀಯ ವ್ಯಕ್ತಿಗಳ ಎಂಟ್ರಿ ಆಗಿದೆ.
ಇದನ್ನೂ ಓದಿ:-ಈ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರಿ ಮಳೆ-ಹವಾಮಾನ ಇಲಾಖೆ ಅಲರ್ಟ
ಹಿಂದೆ ಕಾರ್ಯ ನಿರ್ವಹಿಸುತಿದ್ದ ರಾಘವೇಂದ್ರ ರವರು ಕುಮಟಾದವರಾಗಿದ್ದು ಶಿವರಾಮ್ ಹೆಬ್ಬಾರ್ ಜೊತೆ ಗುರುತಿಸಿಕೊಂಡವರು. ಚಂದ್ರಶೇಕರ್ ನಾಯ್ಕ ಸಿದ್ದಾಪುರದವರಾಗಿದ್ದು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡವರಾಗಿದ್ದಾರೆ ಎನ್ನುತ್ತದೆ ಮೂಲ.
ಇನ್ನು ಚೆಂದ್ರಶೇಖರ್ ನಾಯ್ಕ ವರ್ಗಾವಣೆಗೆ ಸ್ವತಹಾ ಸಿ.ಎಂ ಲೆಟರ್ ಕೂಡ ನೀಡಲಾಗಿದೆ.ಇನ್ನು ಇವರ ವರ್ಗಾವಣೆಗಾಗಿ ಹಾಲಿ ಶಾಸಕರೊಬ್ಬರು ಹಾಗೂ ಮಾಜಿ ಶಾಸಕರೊಬ್ಬರ ಪತ್ನಿ ಶಿಫಾರಸ್ಸು ಸಹ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:-ಮಗನ ನಾಮಕರಣ ಆಹ್ವಾನ ಪತ್ರದಲ್ಲಿ ಸೈಬರ್ ಜಾಗೃತಿ- ಸಾಮಾಜಿಕ ಕಳಕಳಿ ಮೆರೆದ ಬನವಾಸಿ ಪೊಲೀಸ್ ಸಿಬ್ಬಂದಿ
ಇನ್ನು ಯಲ್ಲಾಪುರ ಕ್ಷೇತ್ರಕ್ಕೆ ಈ ವಸತಿ ಶಾಲೆ ಬರುವುದರಿಂದ ಅಲ್ಲಿನ ಶಾಸಕ ಶಿವರಾಮ್ ಹೆಬ್ಬಾರ್ ರವರಿಗೂ ಸಹ ಈ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ ಈ ವಿಷಯ ರಾಜಕೀಯ ಬಣ್ಣ ಕ್ಕೆ ತಿರುಗಿದ್ದು ಅಲ್ಲಿನ ಸಿಬ್ಬಂದಿಗಳು,ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ವಿದ್ಯಾರ್ಥಿಗಳನ್ನು ಎತ್ತಿಕಟ್ಟಲಾಗುತಿದ್ದು ಅಹೋರಾತ್ರಿ ಮಕ್ಕಳು ಅನ್ನಾಹಾರ ತ್ಯಜಿಸಿ ಪ್ರತಿಭಟನೆ ನಡೆಸುವಂತೆ ಕುಮ್ಮಕ್ಕು ನೀಡಲಾಗುತ್ತಿದೆ .ಇದರ ಜೊತೆಗೆ ಪೋಷಕರಿಗೂ ಸಹ ಕುಮ್ಕಕ್ಕು ನೀಡಲಾಗುತಿದೆ ಎನ್ನಲಾಗಿದೆ. ಹೀಗಾಗಿ ರಾಜಕಾರಣಿಗಳ ಸ್ವಾರ್ಥಕ್ಕೆ ಇದೀಗ ಮಕ್ಕಳು ಬಲಿಪಶುವಾಗಿದ್ದಾರೆ.
ಇದನ್ನೂ ನೋಡಿ:-






