Uttrakannada|ರೈತರ ತೋಟ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.

249

ಕಾರವಾರ:- ತೋಟಗಾರಿಕೆ ಇಲಾಖೆಯ ವತಿಯಿಂದ 2023-24 ನೇ ಸಾಲಿನಲ್ಲಿ ಖಾಲಿ ಜಮೀನಿನಲ್ಲಿ ತೋಟ ಮಾಡಿಕೊಳ್ಳಲು ಆಸಕ್ತಿ ಹೊಂದಿರುವ ರೈತರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ( MGNREGA) ಹೊಸ ತೋಟ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಈ ಯೋಜನೆಯಡಿಯಲ್ಲಿ ಅಡಿಕೆ, ತೆಂಗು, ಮಾವು, ಗೇರು ಮುಂತಾದ ಬಹುವಾರ್ಷಿಕ ಬೆಳೆಗಳ ತೋಟವನ್ನು ನಿರ್ಮಿಸಿಕೊಳ್ಳಬಹುದು ಅಲ್ಲದೇ ಅಪ್ರಧಾನ ಹಣ್ಣುಗಳು (Minor Fruits) ಮತ್ತು ಸಾಂಬಾರು ಬೆಳೆಗಳನ್ನು ತೋಟದಲ್ಲಿ ಹಾಗೂ ಜಮೀನಿನಲ್ಲಿ ಬದುಗಳಲ್ಲಿ ನಾಟಿ ಮಾಡಿಕೊಳ್ಳಲೂ ಸಹ ಸಹಾಯಧನ ಲಭ್ಯವಿರುತ್ತದೆ.

ಇದನ್ನೂ ಓದಿ:- (ಫೋಟೋದ ಮೇಲೆ ಕ್ಲಿಕ್ ಮಾಡಿ)

ಆಸಕ್ತಿಯುಳ್ಳ ರೈತರು ತಮ್ಮ ಜಮೀನಿನ ಪಹಣಿ ಪತ್ರ, ಆಧಾರ ಕಾರ್ಡ್, ನರೇಗಾ ಜಾಬ್ ಕಾರ್ಡ, ಹಾಗೂ ಪಡಿತರ ಚೀಟಿ ಯೊಂದಿಗೆ ತೋಟಗಾರಿಕೆ ಕಛೇರಿಯಲ್ಲಿ ದಾಖಲಾತಿಗಳನ್ನು ಸಲ್ಲಿಸಲು ಸುಚಿದ್ದಾರೆ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9353548931,8310478112,8317498506,7619274889 ಗೆ ಸಂಪರ್ಕಿಸಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!