Bhatkal|ಗೋಕಳ್ಳರನ್ನು ಹಿಡಿಯಲು ಹೋದವರ ಮೇಲೆ ಹಲ್ಲೆ- ಪ್ರಕರಣವನ್ನು ತಿರುಚಿದ ಪೊಲೀಸರು!

114

ಭಟ್ಕಳ: ಕಳೆದ ಮೂರುದಿನಗಳ ಹಿಂದೆ ಗೋಕಳ್ಳರನ್ನು ಹಿಂಬಾಲಿಸಿಕೊಂಡು ಹೋದ ಭಟ್ಕಳ(Bhatkal) ತಾಲೂಕಿನ ಮೂವರು ಯುವಕ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ ಹಿಂದು ಸಂಘಟನೆ ಕಾರ್ಯಕರ್ತರು ಭಟ್ಕಳ ನಗರ ಠಾಣೆಗೆ ತೆರಳಿ ಡಿವೈಎಸ್ಪಿಯವನ್ನು ಭೇಟಿಯಾಗಿ  ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಹಲ್ಲೆಗೋಳಾದ ಯುವಕ ಪ್ರವೀಣ ಮಾತನಾಡಿ ನನ್ನ ಸ್ನೇಹಿತನ ಮನೆಯಿಂದ ಊಟ ಮಾಡಿಕೊಂಡು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮಹೇಂದ್ರ ಪಿಕಪ್ ವಾಹನದಲ್ಲಿ ಗೋ ಸಾಗಾಟ ಮಾಡುತ್ತಿರುದನ್ನು ಖಚಿತ ಪಡಿಸಿಕೊಂಡು ವಾಹನವನ್ನು ಹಿಂಬಾಲಿಸಿಕೊಂಡು ಬಂದು ಕುಂಟವಾಣಿ ಚಕ್ ಪೋಸ್ಟ್ ಬಳಿ ಪೊಲೀಸರಿಗೆ ಮಾಹಿತಿ ನೀಡಿ ಅಲ್ಲಿದ್ದ ನನ್ನ ಸ್ನೇಹಿತರನ್ನು  ಕರೆದುಕೊಂಡು ಭಟ್ಕಳದ ವರೆಗೆ ಹಿಂಬಾಲಿಸಿಕೊಂಡು ಬಂದು ನಂತರ ಮತ್ತೆ ಭಟ್ಕಳ ಪುರಸಭೆ ಸಮೀಪವಿದ್ದ ಪೊಲೀಸರಿಗೂ ಮಾಹಿತಿ ನೀಡಿ ಪೊಲೀಸರು ನಮ್ಮ ಹಿಂದೆ ಬರುತ್ತಾರೆಂದು ತಿಳಿದು ಅಲ್ಲಿಂದ ವಾಹನವನ್ನು ಹಿಂಬಾಲಿಸಿ ಭಟ್ಕಳದ ಕೇರಿಯೊಳಗೆ ಹೋದ ನಮಗೆ ಹಲವಾರು ಮಂದಿಯ ಗುಂಪೊಂದು ನಮ್ಮ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.

ನಂತರ ಹಿಂದೂ ಸಂಘಟನೆ ಕಾರ್ಯಕರ್ತರಾದ ವಿಶ್ವನಾಥ ಮಾತನಾಡಿ ಮೂವರ ಮೇಲೆ ಹಲ್ಲೆ ನಡೆದ ವೇಳೆ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ವೈದ್ಯಕೀಯ ಪರೀಕ್ಷೆ ಮಾಡಿ ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಅದೇ ಹಿಂದುಗಳು ಬಂಧಿಸುವ ವಿಚಾರದಲ್ಲಿ ಪೊಲೀಸರು ಬಹಳ ಉತ್ಸಾಹದಿಂದ ಬಂಧಿಸುತ್ತಾರೆ. ಅದೇ ಅನ್ಯಕೋಮಿನವರನ್ನು ಬಂಧಿಸುವಲ್ಲಿ ಬಹಳ ನಿಷ್ಕಾಳಜಿ ಮಾಡುತ್ತಾರೆ ಎಂದು ಆರೋಪಿಸಿದರು.

ನಂತರ ಇನ್ನೋರ್ವ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಹನುಮಾನ ನಗರ ಮಾತನಾಡಿ ಕಳೆದ ಮೂರು ದಿನಗಳ ಹಿಂದೆ ಭಟ್ಕಳ ಕುಂಟವಾಣಿ ಚಕ್ ಬಳಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ಆ ಭಾಗದ ಯುವಕ ಅದನ್ನು ಹಿಂಬಾಲಿಸಿಕೊಂಡು ಭಟ್ಕಳದ ಕಲೀಫಾ ಬಳಿ ಅಡ್ಡಗಟ್ಟಿದ ವೇಳೆ ಅಲ್ಲಿದ್ದ ಹಲವಾರು ಮಂದಿ ಯುವಕ ಕುತ್ತಿಗೆ ಹಾಗೂ ಕಣ್ಣಿನ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಆದರೆ ಭಟ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು. ಪ್ರಕರಣದಲ್ಲಿ ಪೊಲೀಸರು ಅಪಘಾತ ಪ್ರಕರಣ ಎಂದು ದಾಖಲಿಸಿದ್ದಾರೆ. ಆದರೆ ಹಲ್ಲೆಗೊಳಗಾದ ಯುವಕರು  50 ರಿಂದ 60 ಮಂದಿ ಹಲ್ಲೆ ನಡೆಸಿದ್ದಾರೆ ಎಂದು ಹೇಳುತ್ತಾರೆ. ಪೊಲೀಸರು ಕೊಡಲೇ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹ ಮಾಡಿದ್ದಾರೆ.

(ಅಪಘಾತವೆಂದು ದೂರು ದಾಖಲಾದ ಪ್ರತಿ)

ಈ ಹಿನ್ನೆಲೆಯಲ್ಲಿ ನಾವು ಇಂದು ಭಟ್ಕಳ ತಾಲೂಕಿನ ಹಿಂದು ಕಾರ್ಯಕರ್ತರು ಹಾಗೂ ಪರಿವಾರದ ಕಾರ್ಯಕರ್ತರು ಡಿವೈಎಸ್ಪಿ ಭೇಟಿಯಾದ ವೇಳೆ ಮೂರು ದಿನದೊಳಗಾಗಿ ಆರೋಪಿಗಳನ್ನು ಬಂದಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಆದರೇ ಮೂರು ದಿನದೊಳಗಾಗಿ ಆರೋಪಿಗಳನ್ನು ಬಂದಿಸದೆ ಹೋದಲ್ಲಿ ನಾವು ಭಟ್ಕಳದ ಹಿಂದೂ ಕಾರ್ಯಕರ್ತರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಗೋವಿಂದ ನಾಯ್ಕ. ಹಲ್ಲೆಗೊಳಗಾದ ಚಂದ್ರಶೇಖರ ನಾಯ್ಕ  ,ಸಂತೋಷ ನಾಯ್ಕ ಹಿಂದೂ
ಕಾರ್ಯಕರ್ತರಾದ ವಿಶ್ವ ನಾಯ್ಕ,  ಕುಮಾರ ನಾಯ್ಕ, ಪಾಂಡು ಗೊಂಡ, ಚಿದು ಗೊಂಡ, ರಾಜೇಶ ಗುಳ್ಮಿ, ತುಳಸಿದಾಸ, ಯೋಗೇಶ ನಾಯ್ಕ, ದಾಸ ನಾಯ್ಕ ಮೂಢ ಶಿರಾಲಿ , ವಿಶ್ಣು ನಾಯ್ಕ ಹಾಗೂ ಮುಂತಾದ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು

ಇದನ್ನೂ ಓದಿ:- ರಸ್ತೆಯಲ್ಲೇ ಸಿಕ್ತು ಗೋವಿನ ತಲೆ!




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!