ಕಾರವಾರ :- ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಯುವಕನೋರ್ವ ಹಲ್ಲೆಮಾಡಿದ್ದು ಆತನನ್ನು ಬಂಧಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ (uttrakannada district )ದಾಂಡೇಲಿ ನಗರದಲ್ಲಿ (Dandeli City )ಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದಾಂಡೇಲಿ ಸಾಯಿನಗರ ನಿವಾಸಿ ಅಭಿಷೇಕ್ (24) ಹಲ್ಲೆಮಾಡಿ ಬಂಧನಕ್ಕೊಳಗಾದ ಯುವಕನಾಗಿದ್ದು
ದ್ಯಾಪಪ್ಪ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಸಂಗೊಳ್ಳಿ ರಾಯಣ್ಣ ಜನ್ಮದಿನದ ಪ್ರಯುಕ್ತ ದಾಂಡೇಲಿ ನಗರದಲ್ಲಿ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಮೆರವಣಿಗೆ ನಡೆದಿದ್ದು ,ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುತಿದ್ದ ಯುವಕರಿಗೆ ಮುಂದೆ ಹೋಗದಂತೆ ತಿಳಿಸಿದ್ದ ರಿಂದ ಹಲ್ಲೆ ನಡೆಸಿದ್ದಾನೆ.
ಗಂಭೀರ ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕರೆದೊಯ್ಯಲಾಗುತ್ತಿದೆ.
ಘಟನೆ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.