ಕಾರವಾರ:- ವಿಧಾನ ಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಅಭ್ಯರ್ಥಿಗಳು ಕರ್ಚುಮಾಡುವಂತಿಲ್ಲ.ಆದ್ರೆ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಹಣ ಕರ್ಚುಮಾಡಿದರೂ ಮಾಹಿತಿ ಸರಿಯಾಗಿ ನೀಡದೇ ಇದೀಗ ಚುನಾವಣೆ ಆಯೋಗ ನೋಟಿಸ್ ನೀಡಿದೆ.
ಚುನಾವಣೆ ಅಂದಾಕ್ಷಣ ಅಭ್ಯರ್ಥಿಗಳು ಮತ ಪಡೆಯಲು ಕರ್ಚುಮಾಡುವ ಹಣಕ್ಕೆ ಲೆಕ್ಕವಿಲ್ಲ.ಹೀಗಾಗಿಯೇ ಚುನಾವಣಾ ಆಯೋಗ 40 ಲಕ್ಷ ದ ಮಿತಿಯನ್ನು ಹೇರಿದೆ.ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮಾಜಿ ಕಾರ್ಮಿಕ ಸಚಿವ ಹಾಗೂ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಭಟ್ಕಳ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಸುನೀಲ್ ನಾಯ್ಕಗೆ 40 ಲಕ್ಷಕ್ಕಿಂತಲೂ ಅಧಿಕ ಕರ್ಚು ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಈ ಹಿಂದೆ ಅಂಕೋಲಕ್ಕೆ ಪ್ರಧಾನಿ ಮೋದಿ ಆಗಮಿಸಿದಾಗ ಜನರನ್ನು ಕರೆತರಲು ತಮ್ಮ ಕಾರ್ಯಕರ್ತರ ಹೆಸರಿನಲ್ಲಿ ನೂರಕ್ಕೂ ಹೆಚ್ಚು ವಾಯುವ್ಯ ಸಾರಿಗೆ ಬಸ್ ಅನ್ನು ಬುಕ್ ಮಾಡಿದ್ದರು .ಇದರ ಕರ್ಚನ್ನು ಆಯೋಗಕ್ಕೆ ಸಲ್ಲಿಸಿದ ಲೆಕ್ಕಪತ್ರದಲ್ಲಿ ನಮೂದು ಮಾಡಿರಲಿಲ್ಲ.
ಮೇ 3 ರಂದು ಅಂಕೋಲಾದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಸಮಾವೇಶದ ಸಭಾ ಕಾರ್ಯಕ್ರಮದ ವೆಚ್ಚವನ್ನು ಬಿಜೆಪಿಯ ಎಲ್ಲ ಆರು ಅಭ್ಯರ್ಥಿಗಳಿಗೆ ಸಮನಾಗಿ ಹಂಚಿಕೆ ಮಾಡಲಾಗಿದ್ದು ಒಬ್ಬೊಬ್ಬ ಅಭ್ಯರ್ಥಿಗೂ ತಲಾ ₹18,19,978 ವೆಚ್ಚದಂತೆ ಹಂಚಿಕೆ ಮಾಡಲಾಗಿದೆ.
ಶಿರಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಹೊರತಾಗಿ ಉಳಿದೆಲ್ಲ ಅಭ್ಯರ್ಥಿಗಳ ವೆಚ್ಚದ ವಿವರದಲ್ಲಿ ಈ ಲೆಕ್ಕವೂ ಸೇರಿಸಲಾಗಿದೆ. ಆದರೇ ಚುನಾವಣಾ ವೀಕ್ಷಕರು ಶಾಡೋ ಅಕೌಂಟ್ ನಲ್ಲಿ ಇವರ ಕರ್ಚು ಹೆಚ್ಚಾಗಿರುವ ಕುರಿತು ದಾಖಲೆ ನೀಡಿದ್ದು ಈಗಿನ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ 40 ಲಕ್ಷಕ್ಕಿಂತ ಹೆಚ್ಚು ಕರ್ಚು ಮಾಡಿದ್ದು ನಿಗದಿಗಿಂತ 1.5 ಲಕ್ಷ ಹೆಚ್ಚು ಕರ್ಚುಮಾಡಿದ್ದಾರೆ.
ಭಟ್ಕಳ ಮಾಜಿ ಬಿಜೆಪಿ ಶಾಸಕ ಸುನಿಲ್ ನಾಯ್ಕ 40 ಲಕ್ಷ ನಿಗದಿಗಿಂತ 5 ಲಕ್ಷ ಹೆಚ್ಚು ಕರ್ಚು ಮಾಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ತಾವು ಮಾಡಿದ ವೆಚ್ಚದ ವಿವರಗಳನ್ನು ಜಿಲ್ಲೆಯ ಆರೂ ಕ್ಷೇತ್ರದ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಬಿಜೆಪಿಯ ಬಹುತೇಕ ಅಭ್ಯರ್ಥಿಗಳ ವೆಚ್ಚ ₹ 32 ಲಕ್ಷ ದಾಟಿದ್ದರೆ, ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ₹ 20 ಲಕ್ಷಕ್ಕಿಂತ ಕಡಿಮೆ ವೆಚ್ಚ ಮಾಡಿದ್ದಾಗಿ ಮಾಹಿತಿ ಸಲ್ಲಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರಿಗೆ ಗರಿಷ್ಠ ₹ 28 ಲಕ್ಷ ವೆಚ್ಚದ ಮಿತಿ ನಿಗದಿಪಡಿಸಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ವೆಚ್ಚದ ಮಿತಿ ಸಡಿಲಗೊಳಿಸಿದ್ದ ಆಯೋಗ ಅದನ್ನು ಗರಿಷ್ಠ ₹ 40 ಲಕ್ಷಕ್ಕೆ ಏರಿಕೆ ಮಾಡಿತ್ತು.
ಜಿಲ್ಲೆಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ಆಯೋಗ ನಿಗದಿಪಡಿಸಿದ್ದ ಮಿತಿಗಿಂತ ಹೆಚ್ಚು ವೆಚ್ಚ ಮಾಡಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಒಟ್ಟೂ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಎಲ್ಲ ಅಭ್ಯರ್ಥಿಗಳು ಈಚೆಗಷ್ಟೇ ಚುನಾವಣಾ ಆಯೋಗಕ್ಕೆ ತಾವು ಚುನಾವಣೆಗೆ ಮಾಡಿರುವ ಖರ್ಚು ವೆಚ್ಚದ ವರದಿ ಸಲ್ಲಿಸಿದ್ದಾರೆ. ಈ ಪೈಕಿ ಬಿಜೆಪಿ ಅಭ್ಯರ್ಥಿಗಳಲ್ಲಿ ಬಹುತೇಕರು ಹೆಚ್ಚು ವೆಚ್ಚ ಮಾಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ. ಸಮಾವೇಶ, ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದ ಬೂತ್ ಏಜೆಂಟರ ವೆಚ್ಚವನ್ನೇ ಬಹುತೇಕ ಅಭ್ಯರ್ಥಿಗಳು ಹೆಚ್ಚು ತೋರಿಸಿದ್ದಾರೆ.
ಆರ್.ವಿ.ದೇಶಪಾಂಡೆ;ಹಳಿಯಾಳ;ಕಾಂಗ್ರೆಸ್;₹31,96,648
ಸುನೀಲ ಹೆಗಡೆ;ಹಳಿಯಾಳ;ಬಿಜೆಪಿ;₹38,37,316
ಎಸ್.ಎಲ್.ಘೋಟ್ನೇಕರ್;ಹಳಿಯಾಳ;ಜೆಡಿಎಸ್; ₹20,52,429
ರೂಪಾಲಿ ನಾಯ್ಕ;ಕಾರವಾರ;ಬಿಜೆಪಿ;₹32,02,558
ಸತೀಶ ಸೈಲ್;ಕಾರವಾರ;ಕಾಂಗ್ರೆಸ್;₹13,68,526
ಚೈತ್ರಾ ಕೊಠಾರಕರ್;ಕಾರವಾರ;ಜೆಡಿಎಸ್;₹6,89,545
ದಿನಕರ ಶೆಟ್ಟಿ;ಕುಮಟಾ;ಬಿಜೆಪಿ;₹37,02,136
ನಿವೇದಿತ್ ಆಳ್ವ;ಕುಮಟಾ;ಕಾಂಗ್ರೆಸ್;₹32,37,114
ಸೂರಜ್ ನಾಯ್ಕ ಸೋನಿ;ಕುಮಟಾ;ಜೆಡಿಎಸ್;₹14,90,730
ಸುನೀಲ ನಾಯ್ಕ;ಭಟ್ಕಳ;ಬಿಜೆಪಿ;₹30,48,984
ಮಂಕಾಳ ವೈದ್ಯ;ಭಟ್ಕಳ;ಕಾಂಗ್ರೆಸ್;₹17,82,563
ವಿಶ್ವೇಶ್ವರ ಹೆಗಡೆ ಕಾಗೇರಿ;ಶಿರಸಿ;ಬಿಜೆಪಿ;₹15,58,089
ಭೀಮಣ್ಣ ನಾಯ್ಕ;ಶಿರಸಿ;ಕಾಂಗ್ರೆಸ್;₹29,18,360
ಉಪೇಂದ್ರ ಪೈ;ಶಿರಸಿ;ಜೆಡಿಎಸ್;₹5,09,050
ಶಿವರಾಮ ಹೆಬ್ಬಾರ;ಯಲ್ಲಾಪುರ;ಬಿಜೆಪಿ;₹38,16,363
ವಿ.ಎಸ್.ಪಾಟೀಲ್;ಯಲ್ಲಾಪುರ;ಕಾಂಗ್ರೆಸ್;₹18, 61,276
ನಾಗೇಶ ನಾಯ್ಕ;ಯಲ್ಲಾಪುರ;ಜೆಡಿಎಸ್;₹8,95,016
ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿಗಳು ನಿಗದಿಗಿಂತ ಹೆಚ್ಚು ಕರ್ಚು ಮಾಡಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಮತ್ತೊಮ್ಮೆ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ KPCC ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾದ
ಶಂಭುಶಟ್ಟಿ ರವರು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.
ಇನ್ನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ತಲಾ ₹30 ಲಕ್ಷ, ಬಿಜೆಪಿ ತಲಾ ₹20 ಲಕ್ಷ ಪಕ್ಷದ ನಿಧಿ ನೀಡಿದ್ದಾಗಿ ಆಯಾ ಪಕ್ಷಗಳ ಅಭ್ಯರ್ಥಿಗಳು ಘೋಷಿಸಿದ್ದಾರೆ.
ಅಭ್ಯರ್ಥಿಗಳು ಮಾಡಿರುವ ವೆಚ್ಚದ ಮೂಲದ ಕುರಿತು ಆಯೋಗ ಕೇಳಿದ್ದ ಮಾಹಿತಿ ಕಾಲಂನಲ್ಲಿ ಈ ವಿವರ ಸಲ್ಲಿಸಿದ್ದಾರೆ.
ಹಳಿಯಾಳ ಕ್ಷೇತ್ರದ ಶಾಸಕ, ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹಾಗೂ ಯಲ್ಲಾಪುರದ ಬಿಜೆಪಿ ಶಾಸಕ, ಬಿಜೆಪಿ ಶಿವರಾಮ ಹೆಬ್ಬಾರ ಅವರು ತಾವು ಪಕ್ಷದ ನಿಧಿ ಪಡೆದಿಲ್ಲ ಎಂದು ಘೋಷಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳೆಲ್ಲರೂ ಪಕ್ಷದಿಂದ ಯಾವುದೇ ನಿಧಿ ಪಡೆದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಆದ್ರೆ ಇದೀಗ ಚುನಾವಣಾ ವೀಕ್ಷಕರು ಶಾಡೋ ಅಕೌಂಟ್ ನಲ್ಲಿ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್,ಭಟ್ಕಳ ಬಿಜೆಪಿ ಮಾಜಿ ಶಾಸಕ ಸುನೀಲ್ ನಾಯ್ಕ 40 ಲಕ್ಷಕ್ಕಿಂತ ಅಧಿಕ ಕರ್ಚನ್ನು ಮಾಡಿರುವ ವರದಿ ನೀಡಿ ನೋಟೀಸ್ ನೀಡಿದ್ದು ಇದು ಸಾಭೀತಾದಲ್ಲಿ ಯಲ್ಲಾಪುರ ಶಾಸಕ ಹೆಬ್ಬಾರ್ ರವರು ಶಾಸಕ ಸ್ಥಾನದಿಂದ ಅನರ್ಹ ಗೊಂಡರೇ ,ಭಟ್ಕಳ ಬಿಜೆಪಿ ಮಾಜಿ ಶಾಸಕ ಸುನೀಲ್ ನಾಯ್ಕ ಆರು ವರ್ಷ ಚುನಾವಣೆ ಸ್ಪರ್ದೆಯಿಂದ ಅನರ್ಹರಾಗಲಿದ್ದಾರೆ.







