BJP Uttarakannada:ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಭಟ್ಕಳ ಮಾಜಿ ಶಾಸಕರಿಗೆ ಮುಖಭಂಗ! ಏನಿದು ಓದಿ?

204

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವ ವಿಷಯ ಮುನ್ನಲೆಯಲ್ಲೇ ಇದೇ .ಈ ಮಧ್ಯೆ ಪಕ್ಷದವರೇ ತನ್ನ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದು ಇದರಿಂದಾಗಿ ಹೆಚ್ಚು ಮತದಲ್ಲಿ ಗೆಲ್ಲಬೇಕಾದ ತಾನು ಅಲ್ಪ ಮತದಲ್ಲಿ ಗೆಲ್ಲುವಂತಾಯ್ತು ಹೀಗಾಗಿ ತನಗೆ ದ್ರೋಹ ಮಾಡಿದ ಪಕ್ಷದ ಹಲವು ವ್ಯಕ್ತಿಗಳ ಮೇಲೆ ಮುನಿಸಿಕೊಂಡು ಹೈಕಮಾಂಡ್ ಗೆ ದೂರು ನೀಡಿದ್ದರು. ಇದರ ಜೊತೆ ಸೋತ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಸಹ ದೂರು ನೀಡಿದ್ದರು. ಈ ದೂರಿನನ್ವಯ ಪಕ್ಷದ ಸಿಸ್ತು ಸಮಿತಿ ಹಲವರನ್ನು ಅವರ ಪದಾಧಿಕಾರಿ ಜವಬ್ದಾರಿಯಿಂದ ಮುಕ್ತಿಗೊಳಿಸಿ ಕ್ರಮ ಕೈಗೊಂಡಿತ್ತು. ಆದರೇ ಇದೀಗ ರಾಜ್ಯ ಸಮಿತಿ ನಿರ್ದೇಶನದ ಮೇಲೆ ಮರು ನೇಮಕವನ್ನು ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕರವರು ಯಲ್ಲಾಪುರ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳನ್ನು ಮರು ನೇಮಕ ಮಾಡಿದ್ದಾರೆ.

ಮರು ನೇಮಕ ಗೊಂಡವರ ವಿವರ:-

ಇನ್ನು ಕೇವಲ ಯಲ್ಲಾಪುರ ಮತ್ತು ಭಟ್ಕಳಕ್ಕೆ ಮಾತ್ರ ಸೀಮಿತವಾಗಿ ಮರು ನೇಮಕ ಆಗಿದೆ. ಯಲ್ಲಾಪುರದಲ್ಲಿ ಮರು ನೇಮಕ ಗೊಂಡವರು ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಇದ್ದವರಾದರೇ ಭಟ್ಕಳದಲ್ಲೂ ಸಹ ಸುನೀಲ್ ನಾಯ್ಕ ರನ್ನು ವಿರೋಧಿಸುವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಬೆಂಬಲಿಗರಾಗಿದ್ದಾರೆ.

ಈ ಮೂಲಕ ಹೆಬ್ಬಾರ್ ಹಾಗೂ ಸುನೀಲ್ ನಾಯ್ಕಗೆ ಏಟಿಗೆ ಎದುರೇಟನ್ನು ಪಕ್ಷ ನೀಡಿದೆ. ಹೀಗಾಗಿ ಪಕ್ಷದ ನಿರ್ಧಾರ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯನ್ನು ಮತ್ತಷ್ಟು ಪುಷ್ಟಿಕರಿಸಿದ್ದು ಭಟ್ಕಳದ ಸುನೀಲ್ ನಾಯ್ಕರಿಗೂ ಪಕ್ಷ ಚಾಡಿ ಏಟು ಕೊಟ್ಟಿದ್ದು ಮುಂದೆ ಹೆಬ್ಬಾರ್ ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಮೂಡುವಂತೆ ಮಾಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!