Uttrakannada|ಮಳೆಗೆ ಇಬ್ಬರು ನೀರುಪಾಲು

TextMaster 07 07 07.12.17 TextMaster 07 07 07.12.17

ಕಾರವಾರ :-ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಭಾರೀ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಕಾಲು ಜಾರಿ ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ (Uttarakannada)ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಕುಳಿ (Betkuli)ಗ್ರಾಮದಲ್ಲಿ ನಡೆದಿದೆ‌.

ಸತೀಶ ಪಾಂಡುರಂಗ ನಾಯ್ಕ (40), ಉಲ್ಲಾಸ ಗಾವಡಿ (50) ನೀರುಪಾಲಾದ ದುರ್ದೈವಿಗಳಾಗಿದ್ದಾರೆ.

Advertisement

ಜಲಾವೃತವಾಗಿದ್ದ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು ಅನಾಹುತ ನಡೆದಿದ್ದು ನೀರಿನ ಆರ್ಭಟಕ್ಕೆ ಇಬ್ಬರ ಶವ ತೇಲಿಕೊಂಡು ಹೋಗಿದ್ದು ಕೆಲವು ಗಂಟೆಗಳ ಹುಡುಕಾಟದ ಬಳಿಕ ಶವ ಪತ್ತೆಯಾಗಿದೆ.

ಫೋಟೋದ ಮೇಲೆ ಕ್ಲಿಕ್ ಮಾಡಿ ಓದಿ:-

TextMaster 07 06 10.13.31

ಘಟನೆ ಸಂಬಂಧ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಜಿಲ್ಲೆಯಲ್ಲಿ ಮಳೆಗೆ ಇದು ಮೂರನೇ ಬಲಿಯಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement