ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,ಗ್ರೀಷ್ಮಋತು, ಆಷಾಢ ಮಾಸ, ಶುಕ್ಲ ಪಕ್ಷ
ತಿಥಿ: ದ್ವಾದಶಿ 25:16 ವಾರ: ಶುಕ್ರವಾರ
ನಕ್ಷತ್ರ: ವಿಶಾಖ 16:09 ಯೋಗ: ಸಾಧ್ಯ 25:30
ಕರಣ: ಬಾಲವ 25:16 ಇಂದಿನ ವಿಶೇಷ: ಶಯನ ದ್ವಾದಶಿ, ಶಾಕವ್ರತಾರಂಭ, ಆಷಾಢ ಶುಕ್ರವಾರ ಅಮೃತಕಾಲ: ಭಾನುವಾರ ಬೆಳಗ್ಗೆ 05 ಗಂಟೆ 09 ನಿಮಿಷದಿಂದ ಬೆಳಗ್ಗೆ 06 ಗಂಟೆ 40 ನಿಮಿಷದವರೆಗೆ.
ಮೇಷ:ಆರೋಗ್ಯ ಉತ್ತನ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ, ಆತ್ಮಭಿಮಾನದ ಜೊತೆಗೆ ಗೌರವವು ಲಭ್ಯ, ಸಹೋದ್ಯೋಗಿಗಳಿಂದ ಮೆಚ್ಚುಗೆ, ಕೌಟುಂಬಿಕವಾಗಿ ಸಂತಸ ನೆಮ್ಮದಿ.
ವೃಷಭ: ಸಂಗೀತ ಕಲಾವಿದರಿಗೆ ಬೇಡಿಕೆ, ಗಣ್ಯ ವ್ಯಕ್ತಿಗಳಿಂದ ಸಹಾಯ, ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಒತ್ತಡ.
ಮಿಥುನ: ಹಿತಶತ್ರುಗಳಿಂದ ಎಚ್ಚರ, ಹಣದ ಒಳಹರಿವಿನಲ್ಲಿ ಕ್ಷೀಣ, ಆಸ್ತಿಯಿಂದ ನಷ್ಟ.
ಕರ್ಕಾಟಕ: ಸ್ವಂತ ವ್ಯಾಪಾರದಲ್ಲಿ ಮಧ್ಯಮ ಅಭಿವೃದ್ಧಿ, ಕಾರ್ಯಗಳಲ್ಲಿ ಹಿನ್ನಡೆ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ
ಸಿಂಹ: ಕರಕುಶಲ ವ್ಯಾಪಾರಗಳಿಗೆ ಲಾಭ, ಕೃಷಿಕರಿಗೆ ಲಾಭ, ಕಾರ್ಮಿಕರಿಂದ ಕಷ್ಟ.ಇದನ್ನೂ ಓದಿ:-ಯಲ್ಲಾಪುರ|ಕನ್ಯೆ ಸಿಗಲಿಲ್ಲ ಎಂದು ಹವ್ಯಕ ಯುವಕ ಆತ್ಮಹತ್ಯೆ
ಕನ್ಯಾ: ಹಣದ ಒಳಹರಿವು, ಮಂದಗತಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು, ಆರೋಗ್ಯಕ್ಕಾಗಿ ಚಿಕಿತ್ಸೆ ಅವಶ್ಯಕತೆ.
ತುಲಾ: ವಿದೇಶಿ ಉದ್ಯೋಗಸ್ಥರಿಗೆ ಅನುಕೂಲತೆಗಳು, ಲಭ್ಯ ಉದ್ಯೋಗದಲ್ಲಿನ ತೊಂದರೆಗಳು ಕ್ಷೀಣಿಸುತ್ತವೆ, ಯುವಕರು ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ.
ವೃಶ್ಚಿಕ: ಆರೋಗ್ಯ ಮಧ್ಯಮ,ದಾಂಪತ್ಯದಲ್ಲಿ ಸಾಮರಸ್ಯ, ಕಾರ್ಮಿಕರಿಗೆ ಶುಭ, ಸಾಲ ಮರುಪಾವತಿಸಲು ಶ್ರಮವಹಿಸಿ.ಇದನ್ನೂ ಓದಿ:-ಯಲ್ಲಾಪುರ||ಕಾಡಿನಲ್ಲಿ ಬಿದ್ದ ನಂಬರ್ ಪ್ಲೇಟ್ ಜಾಡು ಹಿಡಿದು ಅರಣ್ಯಗಳ್ಳರನ್ನು ಹಿಡಿದ ಅರಣ್ಯ ಇಲಾಖೆ! ಹೇಗೆ ಗೊತ್ತಾ?
ಧನಸ್ಸು: ಆರೋಗ್ಯಕ್ಕಾಗಿ ವ್ಯಾಯಾಮದ ಅವಶ್ಯವಿದೆ, ಕೆಲಸಗಳ ನಿಮಿತ್ತ ಪ್ರಯಾಣ, ವ್ಯವಹಾರದಲ್ಲಿ ಜಾಗ್ರತೆ.
ಮಕರ:ಆರೋಗ್ಯ ಉತ್ತಮ, ಮೂಳೆಯ ತಜ್ಞರಿಗೆ ಬೇಡಿಕೆ, ಕೃಷಿಯ ಕಡೆ ಆಸಕ್ತಿ, ನಿಸ್ವಾರ್ಥ ಸೇವೆಗಳಿಂದ ಯಶಸ್ಸು.
ಕುಂಭ: ಸರ್ಕಾರಿ ನೌಕರರಿಗೆ ಒತ್ತಡ, ಹೊಸ ಯೋಜನೆಗಳನ್ನು ಮರುಪರಿಶೀಲಿಸಿ, ವಿದ್ಯಾರ್ಥಿಗಳು ಶ್ರಮವಹಿಸಿ.
ಮೀನ: ಬೆಂಕಿಯಿಂದ ಎಚ್ಚರವಹಿಸಿ, ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅಭಿವೃದ್ಧಿ, ಸಂಗಾತಿಯ ಆದಾಯದಲ್ಲಿ ಹೆಚ್ಚಳ. ಇದನ್ನೂ ಓದಿ:-ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಸಿಗೋದು ಯಾವಾಗ? ಅಪ್ಡೇಟ್ ಕೊಟ್ಟ ಸಿಎಂ ಸಿದ್ದು






