ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅರಣ್ಯದಲ್ಲಿ ಸರಣಿ ಮರಕಳ್ಳತನ ನಡೆಯುತ್ತಲೇ ಇದೆ.ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಎಷ್ಟು ಪ್ರಯತ್ನ ಪಟ್ಟರೂ ಕಾಡು ಕಳ್ಳರು ಬಚಾವ್ ಆಗುತ್ತಲೇ ಇದ್ದಾರೆ.
ಆದ್ರೆ ಮುಂಡಗೋಡಿನಲ್ಲಿ ಮಾತ್ರ ಮರಗಳನ್ನು ಕಡಿದು ಸಾಗಿಸುವ ಅರಣ್ಯಗಳ್ಳರನ್ನ ಕಾಡಿನಲ್ಲಿ ಬಿದ್ದ ವಾಹನದ ನಂಬರ್ ಪ್ಲೇಟ್ ನಿಂದ ಪತ್ತೆ ಹಚ್ಚಿ ವಾಹನ ಸಮೇತ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ.
ಜೂ 11 ರಂದು ಮುಂಡಗೋಡಿನ ಗುಂಜಾವತಿ ಅರಣ್ಯದಿಂದ 3 ಹಸಿ ಸಾಗವಾನಿ ಮರಗಳನ್ನು ಕಡಿದು 12 ನಾಟಾಗಳನ್ನು ಮಾಡಿ ವಾಹನದಲ್ಲಿ ಲೋಡ್ ಮಾಡಿಕೊಂಡು ಅರಣ್ಯದಿಂದ ಹೊರಗೆ ಬರುತ್ತಿದ್ದಾಗ ವಾಹನವು ಕೆಸರಿನಲ್ಲಿ ಸಿಕ್ಕಿಹಾಕಿದ್ದರಿಂದ ಅರಣ್ಯಗಳ್ಳರು ತಾವಾದರೂ ಬಚಾವ್ ಆದರೆ ಸಾಕು ಎಂದು ಸುಮಾರು 3 ಲಕ್ಷ ರೂ 12 ನಾಟಾಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.
ಇಲಾಖೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಯಲ್ಲಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಮಾರ್ಗದರ್ಶನದಲ್ಲಿ ಮುಂಡಗೋಡ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಶೈಲ್ ವಾಲಿ ನಿರ್ದೇಶನದಂತೆ ಮುಂಡಗೋಡ ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳೊಳ್ಳಿ ನೇತೃತ್ವದಲ್ಲಿ ಆರೋಪಿಗಳನ್ನು ಹಿಡಿಯಲು ತಂಡ ರಚಿಸಿ ಅರಣ್ಯ ಇಲಾಖೆ ರಚಿಸಲಾಯಿತು. ಕಾಡಿನಲ್ಲಿ ಬಿದ್ದಿದ್ದ ವಾಹನದ ನಂಬರ್ ಪ್ಲೇಟ್ ಆಧರಿಸಿ ಅರಣ್ಯ ಇಲಾಖೆಯ 3 ತಂಡಗಳು ಜೂ 25 ರಂದು ಕೃತ್ಯದಲ್ಲಿ ಭಾಗಿಯಾದ ಎರಡು ಆರೋಪಿಗಳು ಹಾಗೂ ವಾಹನವನ್ನು ವಶಕ್ಕೆಪಡೆಯವಲ್ಲಿ ಯಶಸ್ವಿಯಾಗಿದೆ.
ಪ್ರಕರಣವನ್ನು ಭೇದಿಸಿದ ತಂಡದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀಶೈಲ್ ಐನಾಪುರ, ಫಕ್ಕಿರೇಶ ಸುಣಗಾರ, ಸಂತೋಷ ಕುರುಬರ, ಕುಮಾರಿ ಸುನಿತಾ ಬಿ.ಎಂ., ಶಂಕರ ಬಾಗೇವಾಡಿ, ಚಂದ್ರಕಾಂತ ಮಕ್ರಿ, ಗಸ್ತು ಅರಣ್ಯ ಪಆಲಕರಾದ ಶ್ರೀಧರ ಭಜಂತ್ರಿ, ದೇವಾರಜ ಆಡಿನ, ಮುಸ್ತಾಕಲಿ ಒಂಟಿ, ಸಾಗರ ಕೊಣ್ಣೂರ, ನಿಸಾರಹ್ಮದ ಪಾಶಾ,ಮುತ್ತಣ್ಣ ಹಿರೇಕಣಗಿ, ಶಿವಪ್ಪ ಭೀಮರಾಯ್ ಹಾಗೂ ವಾಚರಗಳಾದ ಅಶೋಕ ಮೇಲಿನಮನಿ, ಬಸವರಾ, ವಾಹನ ಚಾಲಕ ಶಿವಾನಂದ ಲಮಾಣಿ ಪಾಲ್ಗೊಂಡಿದ್ದರು.






