ಕರಾವಳಿಯಲ್ಲಿ ಮಳೆ ಅವಾಂತರ| ಎಲ್ಲಿ ಏನಾಗಿದೆ ವಿವರ ನೋಡಿ.

TextMaster 07 06 03.21.43 TextMaster 07 06 03.21.43

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಇಂದು ಸಹ ಮುಂದುವರೆದಿದೆ. ಇದರಿಂದಾಗಿ ಕರಾವಳಿ ಭಾಗದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಕಾರವಾರದಲ್ಲಿ ಮುಳುಗಿದ ಸೇತುವೆ|ಮನೆಗಳಿಗೆ ನೀರು.

Advertisement

ಕಾರವಾರ ತಾಲೂಕಿನ ಬಿಣಗಾ,ಅರಗಾ ಭಾಗದಲ್ಲಿ ಗುಡ್ಡದಿಂದ ಹರಿದು ಬಂದ ನೀರು ಸಮುದ್ರ ಸೇರದೇ ಹೆದ್ದಾರಿ ಮತ್ತು ಮನೆಗಳಿಗೆ ನೀರು ನುಗ್ಗಿದೆ.
ಬಿಣಗಾದಲ್ಲಿ ಮೂಡಲಮಕ್ಕಿ ಗ್ರಾಮದ ಸೇತುವೆ ಮುಳಿಗೆ 300 ಮನೆಗಳಿಗೆ ಸಂಪರ್ಕ ಕಡಿತವಾಗಿದೆ. ಅರಗಾದ ನೌಕಾ ನೆಲೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ತುಂಬಿ ನೌಕಾ ನೆಲೆಯ ಹೆದ್ದಾರಿ ಪ್ರದೇಶ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿದೆ. ಕಾರವಾರದ ನೌಕಾನೆಲೆ ಭಾಗದ ಬೈತಕೋಲಿನಲ್ಲಿ ಗುಡ್ಡ ಕುಸಿತವಾಗಿದೆ. ನಗರದ ಪದ್ಮನಾಭ ನಗರ,ಕಾಯ್ಕಿಣಿ ರಸ್ತೆ ಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ.

Screenshot 20230706 151644

ಕುಮಟಾ ಭಟ್ಕಳದಲ್ಲಿ ಅಬ್ಬರದ ಮಳೆ ಕಾಳಜಿ ಕೇಂದ್ರ ತೆರದ ಜಿಲ್ಲಾಡಳಿತ.

ಜಿಲ್ಲೆಯ ಕುಮಟಾದ ಹಂದಿಗೋಣ ಭಾಗದಲ್ಲಿ ಅಘನಾಶಿನಿ ನದಿಯ ಪ್ರವಾಹ ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನಲೆಯಲ್ಲಿ ಕುಮಟಾದ ಹಂದಿಗೋಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದ್ದು
6ಜನ ಸಂತ್ರಸ್ಥರಿಗೆ ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ಭಟ್ಕಳದ ರಂಗಿನಕಟ್ಟಾ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾಗಿದ್ದು ವಾಹನ ಸಂಚಾರ ಸ್ತಬ್ದವಾಗಿದೆ. ಇನ್ನು ಗಾಳಿ ಮಳೆಗೆ ಭಟ್ಕಳದ ಶಿರಾಲಿಯ ಬೇಳೂರ್ ಬಾಯರ್ ಫ್ಯಾಕ್ಟರಿಯ ಮೇಲ್ಚಾವಣಿಯ ಸೀಟುಗಳು ಹಾರಿಹೋಗಿ ಮಳೆ ನೀರು ಯಂತ್ರೋಪಕರಣಗಳ ಮೇಲೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ . ಇದಲ್ಲದೇ ಭಟ್ಕಳ ತಾಲೂಕಿನ ಹೆದ್ದಾರಿ ಭಾಗದ ತಗ್ಗು ಪ್ರದೇಶಕ್ಕೆ ನೀರು ನುಗ್ಗುತಿದ್ದು ಹಲವು ಮನೆಗಳು ಜಲಾವೃತವಾಗಿ ಜನ ಪರಬಾಡದ ಪಾಡು ಪಡುವಂತಾಗಿದೆ.

ಇನ್ನು ಹೊನ್ನಾವರದಲ್ಲಿ ಮಳೆ ಅಬ್ಬರ ಮುಂದು ವರೆದಿದ್ದು ಶರಾವತಿ ತೀರ ಭಾಗದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಗುಂಡ್ಲಬಾಳದ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು ತೋಟಗಳು ಜಲಾವೃತವಾಗಿದೆ.

ಜಿಲ್ಲೆಯಲ್ಲಿ ರೆಡ್ ಅಲರ್ಟ | ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಕೆ.

ಜಿಲ್ಲೆಯಾಧ್ಯಾಂತ ಇಂದು ಹೆಚ್ಚಿನ ಮಳೆಯಾಗುತ್ತಿರುವಿದರಿಂದ ರೆಡ್ ಅಲರ್ಟ ನೀಡಲಾಗಿದ್ದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇನ್ನೂ ಮೂರು ದಿನ ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯಲಿದ್ದು ನದಿ ಪಾತ್ರದ ಜನರು ಬೇರಡೆ ಸ್ಥಳಾಂತರ ಗೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ.

ವಿಡಿಯೋ ನೋಡಿ:-

ಭಟ್ಕಳದಲ್ಲಿ ಅವಾಂತರ ಸೃಷ್ಟಿಸಿದ ಮಳೆ|ವಿಡಿಯೋ ನೋಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement