ಆಧಾರ್ Update ಮಾಡಿಸಿಕೊಳ್ಳುವ ಜನರೇ ಹುಷಾರ್! ನಿಮ್ಮ ಖಾತೆಯಿಂದ ಮಾಯವಾಗಲಿದೆ ಹಣ

cyber crime cyber crime

ಕಾರವಾರ :- ರಾಜ್ಯದಲ್ಲಿ ಗ್ಯಾರಂಟಿ ಕಾರ್ಡ ಮಾಡಿಸಿಕೊಳ್ಳುವ ಬಾರಾಟೆ ಜೋರಾಗಿದೆ. ಹೀಗಾಗಿ ಆಧಾರ್ ಅಪಟುಡೇಟ್( Update) ಮಾಡಿಸಿಕೊಳ್ಳಬೇಕಾದ್ದು ಅನಿವಾರ್ಯ . ಆದ್ರೆ ನಿಮ್ಮ ಮೊಬೈಲ್ ಗೆ ಬರುವ ಆಧಾರ್ ಅಪಟುಡೇಟ್ ಮೆಸೇಜ್ ನನ್ನು ನಂಬಬೇಡಿ.ಏಕೆಂದರೇ ಆದಾರ್ Update ಗೆ ಮೆಸೇಜ್ ಬರುವುದಿಲ್ಲ. ಏನಾದ್ರು ಈ ಮೆಸೇಜ್ ನಂಬಿ ಕ್ಲಿಕ್ ಮಾಡಿದರೇ ನಿಮ್ಮ ಖಾತೆಯಲ್ಲಿ ಇರುವ ಅಷ್ಟೂ ಹಣ ವಂಚನೆ ಮಾಡುವವರ ಪಾಲಾಗುತ್ತದೆ.

ಹೌದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಆರ್.ಮಣಿಪಂಡಿ ಎಂಬುವವರು ತಮ್ಮ ಮೊಬೈಲ್ ಗೆ ಬಂದ ಮೆಸೇಜ್ ನೋಡಿ ಕ್ಲಿಕ್ ಮಾಡಿದ್ದಾರೆ. ನಂತರ
ಇಂಡಿಯನ್ ಪೋಸ್ಟ್ ಬ್ಯಾಂಕ್ ಹೆಸರಿನ ವೆಬ್ ಪೇಜ್ ಓಪನ್ ಆಗಿದೆ. ತಕ್ಷಣ ಇವರಿಗೆ ಕರೆ ಬಂದಿದ್ದು ಜೊತೆಗೆ ಮೊಬೈಲ್ ಗೂ OTP ಬಂದಿದೆ. ಕರೆ ಮಾಡಿದವರು OTP ಕೇಳಿದ್ದು ಅವರು ನೀಡಿದ್ದಾರೆ. ತಕ್ಷಣ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ 32 ಸಾವಿರ ಹಣ ಕಾಲಿಯಾಗಿದ್ದು,ಇದೀಗ ಕಾರವಾರದ ಸೈಬರ್ ಕ್ರೈಮ್ ವಿಭಾಗಕ್ಕೆ ಬಂದು ದೂರು ನೀಡಿದ್ದಾರೆ. ಆದರೇ ಈ ಹಣ ಮರಳಿ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಕನಿಷ್ಟ ಐದು ಖಾತೆಗಳಿಗೆ ವರ್ಗವಾಗಿ ನಂತರ ಒಂದು ಖಾತೆಗೆ ಹೋಗಿ ಅಲ್ಲಿ ಡ್ರಾ ಮಾಡುತ್ತಾರೆ ವಂಚಕರು.ಹೀಗಾಗಿ ಈ ರೀತಿಯ ಫೇಕ್ ಮೆಸೇಜ್ ನೋಡಿ ಯಾರೂ ಮೋಸ ಹೋಗದಿರಿ.

Advertisement

ಇದನ್ನೂ ಓದಿ:- ಮೀಸಲಾತಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ – ವಕೀಲನಿಗೆ ₹25000 ದಂಡ ವಿಧಿಸಿದ ಸುಪ್ರೀಂಕೋರ್ಟ್!

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement