ಮೀಸಲಾತಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ – ವಕೀಲನಿಗೆ ₹25000 ದಂಡ ವಿಧಿಸಿದ ಸುಪ್ರೀಂಕೋರ್ಟ್!

TextMaster 07 04 12.38.55 TextMaster 07 04 12.38.55

ನ್ಯಾಷನಲ್ ಡೆಸ್ಕ : ದೇಶದಲ್ಲಿ ಅನುಸರಿಸುತ್ತಿರುವ ಮೀಸಲಾತಿ ವ್ಯವಸ್ಥೆಯನ್ನು ಹಂತ ಹಂತವಾಗಿ ತೆಗೆದುಹಾಕಲು ಮತ್ತು ಪರ್ಯಾಯ ವಿಧಾನವನ್ನು ರೂಪಿಸುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court )ವಜಾ‌ ಮಾಡುವ ಜೊತೆ ಅರ್ಜಿದಾರ ವಕೀಲನಿಗೆ ₹25,000 ದಂಡ ವಿಧಿಸಿದೆ.

ಪ್ರಕರಣ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠವು, ಅರ್ಜಿಯು ಕ್ಷುಲ್ಲಕವಾಗಿದೆ, ಅನಗತ್ಯವಾಗಿದೆ. ಈ ಹಿನ್ನಲೆ ಅರ್ಜಿ ವಜಾ ಮಾಡುವುದಲ್ಲದೇ, ಅರ್ಜಿದಾರರಾದ ವಕೀಲ ಸಚಿನ್ ಗುಪ್ತಾ ಅವರ ಮೇಲೆ ₹ 25,000 ವೆಚ್ಚವನ್ನು ವಿಧಿಸಿದೆ ಎಂದು ಹೇಳಿತು.

Advertisement

ಈ ಪಿಐಎಲ್(PIL) ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ. ನಾವು ₹ 25,000 ವೆಚ್ಚವನ್ನು ಸುಪ್ರೀಂ ಕೋರ್ಟ್‌ನ ವಕೀಲರ ಕಲ್ಯಾಣ ನಿಧಿಗೆ ಪಾವತಿಸಲು ನಿರ್ದೇಶಿಸುತ್ತೇವೆ. ಪಾವತಿಯ ರಸೀದಿಯನ್ನು 2 ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಇದೇ ಪೀಠವು ಜಾತಿ ವ್ಯವಸ್ಥೆಯ ಮರುವರ್ಗೀಕರಣ ಕೋರಿ ಸಲ್ಲಿಸಿದ್ದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಹ ವಜಾಗೊಳಿಸಿದೆ.

ಇದನ್ನೂ ಓದಿ:- ಇಂದಿನ ದಿನ ಭವಿಷ್ಯ ತಿಳಿಯಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement