ಕಾರವಾರ :- ಅಂಕೋಲ ಸರ್ಕಾರಿ ಆಸ್ಪತ್ರೆಯಲ್ಲಿ (Ankola government hospital ) ವೈದ್ಯನಾಗಿ ಕಾರ್ಯ ನಿರ್ವಹಿಸಿ ಇದೀಗ ಬೇರೆಡೆ ಕಾರ್ಯ ನಿರ್ವಹಿಸುತ್ತಿರುವ ಪ್ರಭಾವಿ ವೈದ್ಯರೊಬ್ಬರು ಎದುರಿಗೆ ಇರುವವರನ್ನು ಬೆತ್ತಲಾಗಿ ನೋಡುವ ಚಪಲಕ್ಕೆ ಬಿದ್ದು ಮೊಬೈಲ್ ನಲ್ಲಿ ಜಾಹಿರಾತು ನೋಡಿ ಆರ್ಡರ್ ಮಾಡಿ ಲಕ್ಷಗಟ್ಟಲೇ ಹಣವನ್ನು ವಂಚಿಸುವವರಿಂದ ಕಳೆದುಕೊಂಡ ಘಟನೆ ವರದಿಯಾಗಿದೆ.
ಇವರು ಈ ಹಿಂದೆ ಅಂಕೋಲದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು ನಂತರ ಬೇರೆಡೆ ಕಾರ್ಯ ನಿರ್ವಹಿಸುತಿದ್ದು ಮಾಜಿ ಮುಖ್ಯಮಂತ್ರಿಯೊಬ್ಬರ ಸಂಬಂಧಿ ಸಹ ಆಗಿರುವುದು ದುರಂತ.
ಡಾ.ನಿತ್ಯಾನಂದ (ಹೆಸರು ಬದಲಿಸಲಾಗಿದೆ) ರವರು ಆನ್ ಲೈನ್ ( online shopping) ನಲ್ಲಿ ಎದುರಿಗಿರುವ ವ್ಯಕ್ತಿಗಳು ಬೆತ್ತಲಾಗಿ ಸ್ಕ್ಯಾನ್ ಮಾಡುವ ಕನ್ನಡಕ( x-ray )(sunglass )ಜಾಹಿರಾತು ನೋಡಿ ಕರೀದಿಸಲು ಮುಂದಾಗಿದ್ದಾರೆ. ಆನ್ ಲೈನ್ ನಲ್ಲಿ ಇದರ ದರ ಏಳು ಲಕ್ಷ ಎಂದು ಇದ್ದು ವೀಕ್ಷಿಸಿದ ಹತ್ತು ನಿಮಿಷದಲ್ಲಿ ಬುಕ್ಕಿಂಗ್ (online booking )ಮಾಡಿದ್ರೆ ಶೇ.70 ರಿಯಾಯಿತಿ ( discount) ಸಿಗಲಿದ್ದು ₹10 ಲಕ್ಷದ ಕನ್ನಡಕ ಎರಡುಲಕ್ಷದ ಹತ್ತುಸಾವಿರಕ್ಕೆ ದೊರೆಯಲಿದೆ ಎಂದು ಉಲ್ಲೇಖಿಸಿ 83 ಸಾವಿರ ಮೊದಲು ಪೋನ್ ಪೇ ( phonepe) ಮಾಡುವಂತೆ ತಿಳಿಸಲಾಗಿತ್ತು.
ಇದನ್ನೂ ಓದಿ:-ಮಂಚಕ್ಕೆ ಕರೆದ ನಿರ್ದೇಶಕನ ಕುರಿತು ಮನ ಬಿಚ್ಚಿದ ರೆಜಿನಾ ಕ್ಯಾಸಂಡ್ರಾ.
ಇದನ್ನು ನಂಬಿದ ಡಾ.ನಿತ್ಯಾನಂದ( ಹೆಸರು ಬದಲಿಸಲಾಗಿದೆ) ಕೂಡಲೇ ₹83 ಸಾವಿರ ಸಂದಾಯ ಮಾಡಿದ್ದಾರೆ. ಸಂದಾಯ ಮಾಡಿದ 15 ನಿಮಿಷದಲ್ಲಿ 23 ಸಾವಿರ ಹಣ ಮರಳಿ ಆ ವೈದ್ಯರ ಖಾತೆಗೆ ಜಮವಾಗಿದ್ದು ,ಇದನ್ನು ನಂಬಿದ ಆ ವೈದ್ಯ ₹1,27000 ಹಣವನ್ನು ಆನ್ ಲೈನ್ ನಲ್ಲಿ ಪಾವತಿ ಮಾಡಿದ್ದಾರೆ.
ಇದಾದ ನಂತರ ಕನ್ನಡಕ ಡೆಲಿವರಿ ( delivery)ಗಾಗಿ ನಾಲ್ಕೈದು ದಿನ ಕಾದರೂ ಬೆತ್ತಲೆ ಸ್ಕ್ಯಾನ್ ಮಾಡುವ ಕನ್ನಡಕ ಬರಲಿಲ್ಲ. ಹೀಗಾಗಿ ವೆಬ್ ಸೈಟ್ ನಲ್ಲಿ ಇರುವ ನಂಬರ್ ಗೆ ಕಾಲ್ ಮಾಡಿದಾಗ ನಂಬರ್ ಅಸ್ತಿತ್ವದಲ್ಲಿ ಇರಲಿಲ್ಲ.ಹೀಗಾಗಿ ತಾನು ಮೋಸಹೋಗಿರುವ ಕುರಿತು ಅರಿವಾಗಿದೆ.
ಆದ್ರೆ ತಾನು ಅಷ್ಟೊಂದು ಹಣ ಕಳೆದುಕೊಂಡಿದ್ದಕ್ಕೆ ಅವರ ಆಪ್ತರಲ್ಲಿ ಆದ ಮೋಸದ ಬಗ್ಗೆ ಹೇಳಿಕೊಂಡಿದ್ದು ಹೇಗೆ ಹಣ ಮರಳಿ ಪಡೆಯುವುದು ಎಂದು ಸಲಹೆ ಕೇಳಿದ್ದಾರೆ. ಹೀಗೆ ಕೇಳಿದ ಸಲಹೆ ಸೈಬರ್ ಕ್ರೈಮ್ ವಿಭಾಗದ ಕಾರವಾರದ ಕಚೇರಿವರೆಗೂ ತಲುಪಿ ನಂತರ ಮಾಧ್ಯಮದ “ಮೈಕ್ “ನಲ್ಲಿ ಪ್ರಚಾರವಾಗಿ ಇದೀಗ ಜ್ಞಾನವಂತರೇ ಹೀಗೆ ಹಾದಿ ತಪ್ಪಿದರೆ ಹೇಗೆ ಎಂಬ ಪ್ರಶ್ನೆ ಏಳುವಂತೆ ಮಾಡಿದ್ದು ” ನಿತ್ಯಾನಂದನ ರಸಿಕ ಪುರಾಣ” ಸದ್ದು ಮಾಡುತ್ತಿದೆ.
ಇದನ್ನೂ ಓದಿ:- ಪೊಲೀಸರಿಗೆ ಸೀಮೆಯೆಣ್ಣೆ ಎರಚಿ ಬೆಂಕಿಹಚ್ಚಲು ಯತ್ನಿಸಿದ ಫೈರ್ ಲೇಡಿ!
ಬೇಸರದ ವಿಷಯವೇನೆಂದರೇ ಈರೀತಿ ಆನ್ ಲೈನ್ ವಂಚನೆಗೆ ಒಳಗಾದರೂ ಮರ್ಯಾದೆ ಪ್ರಶ್ನೆಗಳು ಎದ್ದು ದೂರು ಕೊಡದೇ ಹಿಂದೆ ಸರಿಯುವ ಜನರು ಹೆಚ್ಚಿದ್ದಾರೆ.ಹೀಗಾಗಿ ಅನ್ ಲೈನ್ ನಲ್ಲಿ ಈರೀತಿಯ ವಂಚನೆ ಯಾವ ಕಡಿವಾಣ ಸಹ ಇಲ್ಲದೇ ನಡೆಯುತ್ತಿದೆ. ಹೀಗಾಗಿ ಜನ ಜಾಗೃತವಾಗಿದ್ರೆ ಇಂತಹ ವಂಚಕರ ವಿರುದ್ಧ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ನೀಡಿದಲ್ಲಿ ಮುಂದೊಂದು ದಿನ ಬೇರೆಯವರು ಸಹ ವಂಚನೆಗೊಳಗಾಗುವುದನ್ನು ತಡೆಯಬಹುದಾಗಿದೆ.






