ಮಂಚಕ್ಕೆ ಕರೆದ ನಿರ್ದೇಶಕನ ಕುರಿತು ಮನ ಬಿಚ್ಚಿದ ರೆಜಿನಾ ಕ್ಯಾಸಂಡ್ರಾ

220

ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ಚೇತನ್‌ ಜೊತೆ ನಟಿಸಿದ್ದ ರೆಜಿನಾ ಕ್ಯಾಸಂಡ್ರಾ ಆ ಬಳಿಕ ಸ್ಯಾಂಡಲ್‌ವುಡ್‌ನಿಂದ ಮರೆಯಾಗಿ ಹೋಗಿದ್ದರು. ಸದ್ಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬಿಸಿಯಾಗಿದ್ದಾರೆ. ಆದ್ರೆ ಸಂದರ್ಶನವೊಂದರಲ್ಲಿ ಕಾಸ್ಟಿಂಗ್‌ ಕೌಚ್‌ ಬಗ್ಗೆ ತಮಗಾದ ಅನುಭವ ಹಂಚಿಕೊಂಡಿದ್ದಾರೆ.

ಕಾಸ್ಟಿಂಗ್‌ ಕೌಚ್‌ ಆರೋಪ ಹೊರಿಸಿದ ರಂಗಿನ ಬೆಡಗಿ!

2005ರಿಂದಲೂ ಸಿನಿಮಾ ರಂಗದಲ್ಲಿರುವ ರೆಜಿನಾ ಕ್ಯಾಸಂಡ್ರಾ ( actor Regina Cassandra)ತಮಿಳು -ತೆಲುಗು ಚಿತ್ರರಂಗದ ಖ್ಯಾತ ನಟಿ .

ಈಗ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದು,ನಿರ್ದೇಶಕರೊಬ್ಬರ ವಿರುದ್ಧ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ. ಆದರೆ, ಈ ನಿರ್ದೇಶಕ ಯಾರು ಎನ್ನುವ ಮಾಹಿತಿಯನ್ನು ಅವರು ನೀಡಿಲ್ಲ.

ಮೀ ಟೂ ಮಾತ್ರವಲ್ಲ ಕಾಸ್ಟಿಂಗ್‌ ಕೌಚ್‌ ಎನ್ನುವುದು ಕೂಡ ಸಿನಿಮಾ ರಂಗದಲ್ಲಿ ವ್ಯಾಪಕವಾಗಿದೆ. ಸಿನಿಮಾ ರಂಗಕ್ಕೆ ಕಾಲಿಡುವ ಆರಂಭದ ದಿನಗಳಲ್ಲಿ ನನಗೂ ಇದರ ಅನುಭವ ಆಗಿತ್ತು ಎಂದು ಕನ್ನಡದಲ್ಲಿ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿರುವ ರೆಜಿನಾ ಹೇಳಿದ್ದಾರೆ.

ನನ್ನ ಸಿನಿಮಾ ಜೀವನ ಆರಂಭವಾಗಿದ್ದು 2005ರಲ್ಲಿ. ಅಂದು ಅವಕಾಶಗಳಿಗಾಗಿ ನಾನು ಕೆಲವೊಂದು ವ್ಯಕ್ತಿಗಳನ್ನು ಕೇಳಿದ್ದೆ. ಈ ಹಂತದಲ್ಲಿ ನಿರ್ದೇಶಕರೊಬ್ಬರನ್ನು ನಾನು ಭೇಟಿಯಾಗಿದ್ದೆ ಎಂದು ರೆಜಿನಾ ಕ್ಯಾಸಂಡ್ರಾ ಹೇಳಿದ್ದಾರೆ.

ನಿರ್ದೇಶಕನ ಜೊತೆ ಮಾತನಾಡುವ ವೇಳೆ, ಖಂಡಿತವಾಗಿ ನಾನು ನಿನಗೆ ಅವಕಾಶ ನೀಡುತ್ತೇನೆ. ಆದರೆ, ನೀನು ಸ್ವಲ್ಪ ಅಡ್ಜಸ್ಟ್‌ ಮಾಡಿಕೊಳ್ಳಬೇಕು. ಹಾಗಿದ್ದಲ್ಲಿ ಈಗಲೇ ಶೂಟಿಂಗ್‌ ಆರಂಭ ಮಾಡುತ್ತೇನೆ ಎಂದು ಹೇಳಿದ್ದರು.

ಅಂದು ನಾನು ಅವರಿಗೆ ಒಕೆ ಎಂದು ಹೇಳಿ ಬಂದಿದ್ದೆ. ಆಗ ಅಡ್ಜಸ್ಟ್‌ಮೆಂಟ್‌ ಅಂದರೆ ಸೆಕ್ಸ್‌ ಅನ್ನೋದು ಗೊತ್ತಿರಲಿಲ್ಲ. ಆತ ಮತ್ತೆ ಫೋನ್‌ ಮಾಡಿದಾಗ, ನನ್ನ ಮ್ಯಾನೇಜರ್‌ ನಿಮ್ಮೊಂದಿಗೆ ಮಾತನಾಡುತ್ತಾರೆ ಅಂತಾ ಹೇಳಿ ಸುಮ್ಮನಾಗಿದ್ದೆ. ಬಳಿಕ ಸಂಭಾವನೆ ಕಡಿಮೆಯಾಯಿತು ಎಂದು ಹೇಳಿ ಮಾತು ಮುಗಿಸಿದ್ದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಘಟನೆ ನಡೆದು ಅಂದಾಜು 12 ವರ್ಷವಾಗಿದೆ. ನನಗೆ 20 ವರ್ಷವಾಗಿದ್ದ ನಡೆದ ಘಟನೆ ಅಂದು. ಇಂದಿಗೂ ಈ ಘಟನೆ ನೆನೆಸಿಕೊಂಡರೆ ಆಘಾತವಾಗುತ್ತದೆ ಎಂದು ಹೇಳಿದ್ದಾರೆ.

ಮೀ ಟೂ ವಿವಾದಗಳ ಬಳಿಕ ಸಿನಿಮಾ ರಂಗದ ಖ್ಯಾತ ನಟಿಯರು ಕಾಸ್ಟಿಂಗ್‌ ಕೌಚ್‌ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಹಲವು ನಟಿಯರು ಅವಕಾಶಕ್ಕಾಗಿ ಏನೆಲ್ಲ ಆಗುತ್ತೆ ಎನ್ನುವುದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!