ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಸಂಸದ ಅನಂತಕುಮಾರ್ ಹೆಗಡೆ (mp ananthkumar hegde)ಹಾಗೂ ಬೆಂಬಲಿಗರು ಪೊಲೀಸರ ಎದುರೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು ಇದೀಗ ಸಾರ್ವಜನಿಕರು ಪ್ರಶ್ನೆ ಮಾಡುವಂತೆ ಮಾಡಿದೆ.
ಹೌದು ಅಂಕೋಲದಲ್ಲಿ (ankola) ಬೂತ್ ಮಟ್ಟದ ಕಾರ್ಯಕರ್ತರ ಸಭೆಗೆ ಆಗಮಿಸಿದ್ದ ಹೆಗಡೆ ಅಂಕೋಲ ನಗರದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನ ಬಾಳೆಗುಳಿ ಕ್ರಾಸ್ ಸಮೀಪದ ವರೆಗೆ ಹೆಲ್ಮೆಟ್ ಧರಿಸದೇ ಬುಲೇಟ್ ಬೈಕ್ ಚಾಲನೆ ಮಾಡಿದರು.

ಇದನ್ನೂ ಓದಿ:-ಮಾಧ್ಯಮಗಳನ್ನ ಬೇವರ್ಸಿ ,ನಾಯಿ ಎಂದ ಅನಂತಕುಮಾರ್ ಹೆಗಡೆ!
ಈ ವೇಳೆ ಸಂಸದರ ಬೆಂಬಲಿಗರು ಸಹ ಅವರನ್ನು ಹಿಂಬಾಲಿಸಿದ್ದು ಅವರೊಂದಿಗೆ ಬಂದ ಯಾವೊಬ್ಬ ಸವಾರನೂ ಕೂಡ ಹೆಲ್ಮೆಟ್ (helmet wearing) ಧರಿಸದೇ ಅವರನ್ನು ಹಿಂಬಾಲಿಸಿದರು. ಹೆಗಡೆ ಜೊತೆ ಅಂಕೋಲ ಪೊಲೀಸರು ,ಬೆಂಗಾವಲು ವಾಹನ ಸಹ ಇದ್ದರೂ ಯಾರು ಸಹ ಪ್ರಶ್ನೆ ಮಾಡದಿರುವುದು ಸ್ಥಳೀಯ ಜನರನ್ನು ಕೆರಳಿಸಿದ್ದು ರಾಜಕಾರಣಿಗಳಿಗೊಂದು ಕಾನೂನು ,ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಸಂಸದರು ಬೆಂಬಲಿಗರೊಂದಿಗೆ ಬೈಕ್ ಏರಿ ಬರುತಿದ್ದಂತೆ ಅವರನ್ನು ಬೆಂಬಲಿಗರು ಸಹ ಹಿಂಬಾಲಿಸಿದ್ದಾರೆ. ಈ ವೇಳೆ ದಾರಿ ಮಧ್ಯೆ ಅಡ್ಡ ಬಾರದಂತೆ ವಾಹನಗಳನ್ನು ಪೊಲೀಸರು ತಡೆದಿದ್ದಾರೆ. ಇನ್ನು ಹೀಗೆ ಏಕಾ ಏಕಿ ಕಾನೂನು ಉಲ್ಲಂಘನೆ ಮಾಡಿದ್ದನ್ನು ಸ್ಥಳೀಯರು ಪ್ರಶ್ನೆ ಮಾಡಿದ್ದು ಪೊಲೀಸರು ಹೆಲ್ಮೆಟ್ ಧರಿಸದೇ ಬಂದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬ ಒತ್ತಾಯ ಮಾಡಿದ್ದಾರೆ.






