ಸಂಸದ ಅನಂತಕುಮಾರ್ ಹೆಗಡೆ ನಕಲಿ ಪೋಸ್ಟ್ ! ಆಪ್ತ ಕಾರ್ಯದರ್ಶಿಯಿಂದ ದೂರು?

ananthkumar hegde ananthkumar hegde
Gilani Supermarket Karwar
1000594993
1000594994

ಕಾರವಾರ :- ಸಂಸದ ಅನಂತಕುಮಾರ್ ಹೆಗಡೆ ಭಾವಚಿತ್ರ ಬಳಸಿ ಬಿಜೆಪಿಗೆ ಮತ ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (post) ಮಾಡಿದ ಕುರಿತು
ಸಂಸದ ಅನಂತಕುಮಾರ್ ಹೆಗಡೆ ಆಪ್ತ ಸಹಾಯಕ ಸುರೇಶ್ ಶಟ್ಟಿ ಯಿಂದ ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್ ಬುಕ್ (Facebook) ಮತ್ತು ವಾಟ್ಸ್ ಅಪ್ (whatsapp)ನಲ್ಲಿ ಸಂಸದರ ಭಾವ ಚಿತ್ರ ಬಳಸಿ ಸಂಸದರೇ ಹೇಳಿದ್ದಾರೆ ಎನ್ನುವ ರೀತಿಯಲ್ಲಿ ಪೋಸ್ಟ್ ಹಾಕಲಾಗಿದ್ದು ಈ ಕುರಿತಂತೆ ಸಿದ್ದಾಪುರದ ಬಿಜೆಪಿ ಕಾರ್ಯಕರ್ತ ಎಜೆ ನಾಯ್ಕ ಎಂಬುವವರ ವಿರುದ್ಧ ದೂರು ದಾಖಲಾಗಿದೆ.

Advertisement

ಪೋಸ್ಟ್ ನಲ್ಲಿ ಏನಿದೆ:-

1000625895

ವಾಟ್ಸ್ ಅಪ್ ಮತ್ತು ಫೇಸ್ ಬುಕ್ ನಲ್ಲಿ ನನ್ನ ಕುಲ ಬಾಂದವರೇ ಮುನ್ನುಗ್ಗಿ ,ಮುನ್ನುಗ್ಗಿ ,ಯಾವುದಕ್ಕೂ ಹೆದರಬೇಡಿ ,ಎಲ್ಲಿಯೂ ನಿಲ್ಲಬೇಡಿ,ದೇಶವನ್ನು ಉಳಿಸುವ ಹಾಗೂ ದೇಶದೊಂದಿಗೆ ನಿಲ್ಲುವ ಸದಾವಕಾಶ ಮತ್ತೊಮ್ಮೆ ನಮ್ಮೆಲ್ಲರಿಗೂ ಒದಗಿ ಬಂದಿದೆ, 2014,2019 ರಲ್ಲಿ ಹೇಗೆ ನಾವುಗಳೆಲ್ಲ ದೇಶ ವಿರೋಧಿ ಶಕ್ತಿಗಳ ವಿರುದ್ಧ ಸೆಡೆದು ನಿಂತೆವೋ ಅದೇ ರೀತಿಯಾಗಿ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲುವ ಕಾಲ ಬಂದಿದೆ, ನಾವೆಲ್ಲೆರೂ ಪ್ರಧಾನ ಸೇವಕ ನರೇಂದ್ರಮೋದಿಯವರ ಬೆನ್ನಿಗೆ ನಿಂತು ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಬೇಕಿದೆ.

ಇದನ್ನೂ ಓದಿ:-ಮೋದಿ ಕಾರ್ಯಕ್ರಮಕ್ಕೆ “ಅನಂತ” ಗೈರು! ಜನ ಏನಂದ್ರು?

ಇದು ನಮಗೋಸ್ಕರ ಅಲ್ಲವಾದರೂ ನಮ್ಮ ಭವಿಷ್ಯದ ನಾಳೆಗಾಗಿ ಭವಿಷ್ಯದ ಭಾರತಕ್ಕಾಗಿ , ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ದ್ವಜ ಹಾರಿಸಬೇಕಿದೆ.. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಾಹುಗಳಿಗೆ ಶಕ್ತಿ ನೀಡುವ ಕೆಲಸವಾಗಬೇಕಿದೆ ಎಂದು ಪೋಸ್ಟ್ ಮಾಡಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement