Karwar news:- ಸುಮಾರು ನೂರು ವರ್ಷಕ್ಕೂ ಅಧಿಕ ಕಾಲ ಇತಿಹಾಸವಿರುವ ಕಾರವಾರದ ಕಾರವಾರ ಅರ್ಬನ್ ಕೋಆಪರೇಟಿವ್ ಬ್ಯಾಂಕ್ (urban Cooperative Bank )ನಲ್ಲಿ 54 ಕೋಟಿ ವಂಚನೆ ಯಾಗಿದ್ದು ಬ್ಯಾಂಕ್ ಆಡಳಿತ ಮಂಡಳಿ ಇದೀಗ ಕಾರವಾರ ನಗರ ಠಾಣೆಯಲ್ಲಿ ದೂರು ನೀಡಿದೆ.
ಬ್ಯಾಂಕ್ ನಲ್ಲಿ ವಂಚನೆ ಆಗಲು ಕಾರಣ ಈ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಆಗಿದ್ದ ಗುರುದಾಸ್ ಬಾಂದೇಕರ್ ಎಂದು ಆಡಳಿತ ಮಂಡಳಿ ದೂರು ನಲ್ಲಿ ಉಲ್ಲೇಕಿಸಿದೆ. ಆಡಳಿತ ಮಂಡಳಿ ಹೇಳುವಂತೆ
ಕಳೆದ ಮೂರ್ನಾಲ್ಕು ವರ್ಷದಿಂದ ಸುಮಾರು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ಸುಮಾರು 54 ಕೋಟಿ ಹಣವನ್ನ ತಮ್ಮ ಸಂಭಂದಿ, ಹಾಗೂ ಪರಿಚಯಸ್ಥರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:-Bhatkal|ನೀರಿಗಿಳಿದವರ ರಕ್ಷಣೆಗೆ ಹೋದ ಮಹಿಳೆ ಸೇರಿ ಇಬ್ಬರು ನೀರುಪಾಲು.
ಪ್ರತಿ ಬಾರಿಯೂ ಆಡಿಟ್ (audit) ಮಾಡುವಾಗ ವಂಚನೆ ಮಾಡಿ ಆಡಿಟ್ ಮಾಡಿಸಿದ್ದು ಇದು ಬ್ಯಾಂಕಿನ ಆಡಳಿತ ಮಂಡಳಿಗೂ ತಿಳಿಯಲಿಲ್ಲ. ಕಳೆದ ಒಂದು ವರ್ಷದ ಹಿಂದೆ ಮ್ಯಾನೇಜರ್ ಗುರುದಾಸ್ ಅಪಘಾತದಲ್ಲಿ ಮೃತಪಟ್ಟಿದ್ದು ಸದ್ಯ ಆಡಿಟ್ ಮಾಡಲು ಮುಂದಾದ ವೇಳೆ ಸುಮಾರು 54 ಕೋಟಿ ಹಣ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ನಿರ್ದೇಶಕ ಅರವಿಂದ್ ತೆಂಡುಳ್ಕರ್ ಮಾಹಿತಿ ನೀಡಿದ್ದಾರೆ.
ಇನ್ನು ಬ್ಯಾಂಕ್ ನಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಗ್ರಾಹಕರಿದ್ದು ಕಾರವಾರದಲ್ಲಿ (karwar) ಎರಡು ಶಾಖೆಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 80 ಕೋಟಿಗೂ ಅಧಿಕ ಹಣ ಠೇವಣಿ ಇದ್ದು 9 ಕೋಟಿ ಲೋನ್ ಹಣವನ್ನ ಬ್ಯಾಂಕಿನಿಂದ ನೀಡಿದ್ದಾರೆ.
ಸದ್ಯ 54 ಕೋಟಿ ಹಣ ವಂಚನೆ ಮಾಡಿದ್ದು ಯಾರ ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿ ಕಾರವಾರ ನಗರ ಠಾಣೆಯಲ್ಲಿ ದೂರನ್ನ ಸಹ ದಾಖಲಿಸಿದ್ದಾರೆ.
ಬ್ಯಾಂಕ್ ನಲ್ಲಿ ಠೇವಣಿ ಹಿಂಪಡೆಯಲು ಮುಗಿಬಿದ್ದ ಗ್ರಾಹಕರು.
ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ ಹಣ ವಂಚನೆಯಾಗಿರುವ ವಿಷಯ ತಿಳಿದು ಗ್ರಾಹಕರು ಬ್ಯಾಂಕಿಗೆ ಮುಗಿಬಿದ್ದಿದ್ದು ತಾವು ಠೇವಣಿ ಇಟ್ಟಿದ್ದ ಹಣವನ್ನ ವಾಪಾಸ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಹಣ ಹೆಚ್ಚಿಲ್ಲದ ಕಾರಣ ಠೇವಣಿ ಇಟ್ಟ 5 ಲಕ್ಷದೊಳಗಿನ ಗ್ರಾಹಕರಿಗೆ ಮಾತ್ರ ತಲಾ 10 ಸಾವಿರ ಮಾತ್ರ ಹಣ ನೀಡಿ ಕಳುಹಿಸಲಾಗುತ್ತಿದೆ.
ಇದನ್ನೂ ಓದಿ:-ಕಾರವಾರದಲ್ಲಿ ತರಕಾರಿ ಬೆಲೆ ಗಗನಕ್ಕೆ-ಕೆಜಿ ಗೆ 200 ದಾಟಿದ ಬೀನ್ಸ್
ಇನ್ನು ಐದು ಲಕ್ಷಕ್ಕೂ ಹೆಚ್ಚು ಹಣ ಇಟ್ಟ ಗ್ರಾಹಕರಿಗೆ ಹಣ ಮರಳಿಸುತ್ತಿಲ್ಲ. ಇದಲ್ಲದೇ ಬ್ಯಾಂಕ್ ನಲ್ಲಿ ಹಣ ಇಲ್ಲದ ಕಾರಣ ಆಡಳಿತ ಮಂಡಳಿ ಕೈ ಚಲ್ಲಿ ಕುಳಿತಿದ್ದು ಬೇರೆ ಬ್ಯಾಂಕ್ (bank)ಜೊತೆ ವಿಲೀನವಾಗುವ ಪ್ರಸ್ತಾಪ ಇಟ್ಟಿದೆ. ಆದರೇ ಕೇವಲ ಬ್ಯಾಂಕ್ ಮ್ಯಾನೇಜರ್ ನಿಂದ ಮಾತ್ರ ಇಷ್ಟೊಂದು ವಂಚನೆ ಮಾಡಲು ಸಾಧ್ಯವಿಲ್ಲ. ಈ ಕೃತ್ಯದ ಹಿಂದೆ ಆಡಳಿತ ಮಂಡಳಿಯೂ ಜವಬ್ದಾರಿಯಾಗುತ್ತದೆ. ಸೂಕ್ತ ತನಿಖೆ ನಂತರವೇ ಎಲ್ಲಿ ಏನಾಗಿದೆ ಎಂಬುದು ತಿಳಿದು ಬರಲಿದೆ.






